Skip to main content
ವಿಡಿಯೋ
1/3
sports

ವುಮೆನ್ಸ್‌ ಕ್ರಿಕೆಟ್‌ ವರ್ಲ್ಡ್ ಕಪ್‌ ಗೆಲುವಿನ ನಾಯಕಿ ಹರ್ಮನ್‌ಪ್ರೀತ್ ಟ್ಯಾಟೂ ಮೋಡಿ!

By Shravanthi R
ವುಮೆನ್ಸ್‌ ಕ್ರಿಕೆಟ್‌ ವರ್ಲ್ಡ್ ಕಪ್‌ ಗೆಲುವಿನ ನಾಯಕಿ ಹರ್ಮನ್‌ಪ್ರೀತ್ ಟ್ಯಾಟೂ ಮೋಡಿ!

2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್‌ ಗೆಲುವಿನ ಹಿಂದಿನ ಸ್ಫೂರ್ತಿದಾಯಕವೆನಿಸಿಕೊಂಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ 2017 ರ ಸೋಲಿನಿಂದ 2025 ರ ವಿಜಯದವರೆಗೆ, ತಮ್ಮ ಆಟದ ಕೈಚಳಕ ತೋರಿ, 52 ವರ್ಷಗಳ ಬಳಿಕ ಭಾರತ ಮಹಿಳಾ ತಂಡ ಸಾಧಿಸಿದ ಐತಿಹಾಸಿಕ ಜಯದಲ್ಲಿ, ನಾಯಕಿ ಕೌರ್‌ ಅವರ ಪರಿಶ್ರಮ, ಪೋಷಕರ ಪ್ರೋತ್ಸಾಹ ಮತ್ತು ಆತ್ಮವಿಶ್ವಾಸ ಮುಖ್ಯ ಪಾತ್ರ ವಹಿಸಿದೆ.

2025 ರ ಮಹಿಳಾ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿದೆ. ಈ ಸಾಧನೆಯ ಹಿಂದೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅಚಲವಾದ ಪರಿಶ್ರಮ ಹಾಗೂ ಶಾಂತಚಿತ್ತ ದೊಡ್ಡ ಪಾತ್ರ ವಹಿಸಿದೆ ಎಂದರೆ ತಪ್ಪಿಲ್ಲ. 2017ರ ಸೋಲಿನ ಕಹಿಯಿಂದ 2025ರ ವಿಜಯದ ಸಿಹಿಯವರೆಗೆ ಕೌರ್ ಪಾಲಿಗೆ ಅವರ ತಂದೆಯ ಮಾತು ಸ್ಫೂರ್ತಿಯ ಮೂಲವಾಗಿತ್ತು ಎನ್ನುವುದು ಪ್ರೇರಣೀಯ ಸಂಗತಿಯಾಗಿದೆ.

2025ರ ವಿಶ್ವಕಪ್‌ ಪಂದ್ಯದ ಕೊನೆಯಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ರೋಚಕವಾದ ಕ್ಯಾಚ್‌ ಹಿಡಿದಾಗಲೇ ಗೆಲುವಿನ ಟ್ರೋಫಿ ಎತ್ತಿಹಿಡಿದಂತಿತ್ತು. ತಮ್ಮ ಅದ್ಭುತ ಪ್ರದರ್ಶನದ ಮೂಲಕ ವಿಜಯ ಪತಾಕೆ ಹಾರಿಸಿದ ಕೌರ್, ಅವರ ತಂದೆ ನೀಡಿದ ಪ್ರೋತ್ಸಾಹದ ಮಾತುಗಳು ಅವರ ಪಾಲಿಗೆ ದೊಡ್ಡ ಪಾಠವಾಗಿದೆ ಎಂದು ಹಂಚಿಕೊಂಡಿದ್ದಾರೆ. 

ತಮ್ಮ ತಂದೆ ನೀಡಿದ ಮುರಿದ ಬ್ಯಾಟ್‌ ತಮ್ಮ ಕ್ರಿಕೆಟ್‌ ಜೀವನಕ್ಕೆ ಸ್ಪೂರ್ತಿ ಹಾಗೂ ಅವರು ಹೇಳುತ್ತಿದ್ದ ಮಾತು, "ಯಾವತ್ತೂ ಕನಸು ಕಾಣುವುದನ್ನು ನಿಲ್ಲಿಸಬೇಡಿ. ನಿಮ್ಮ ಅದೃಷ್ಟ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಿಮಗೆ ಗೊತ್ತಿರುವುದಿಲ್ಲ (Never stop dreaming. You never know where your destiny will take you)," ಎಂಬುದು ಹರ್ಮನ್‌ಪ್ರೀತ್ ಅವರಿಗೆ ಪ್ರೇರಣೆಯಾಗಿತ್ತು.

ವಿಶ್ವಕಪ್‌ ಗೆದ್ದ ನೆನಪಿಗಾಗಿ ಅವರು ಕೈ ಮೇಲಿರುವ ಟ್ಯಾಟೂ ಕಪ್‌ ಹಾಗೂ 52 ಸಂಖ್ಯೆ ಒಂದು ಕಥೆಯನ್ನು ಹೇಳುತ್ತದೆ. ಭಾರತ ಮಹಿಳಾ ತಂಡವು 52 ವರ್ಷಗಳ ಬಳಿಕ ಗೆದ್ದ ವಿಶ್ವಕಪ್‌ ಇದಾಗಿದ್ದು; ಮತ್ತು ದಕ್ಷಿಣಾ ಆಫ್ರಿಕಾ ತಂಡವನ್ನು ಭಾರತವು 52 ರನ್‌ಗಳಿಂದ ಸೋಲಿಸಿದರ ಸ್ಮರಣಾರ್ಥ ಇದಾಗಿದೆ. How to Stop Worrying and Start Living: Original Edition | Premium Paperback Paperback – 10 February 2022

ಮಹಿಳೆಯರು ಎಂದರೆ ಸಾಕು, ಅವರನ್ನು, ಮದುವೆ-ಮನೆ-ಮಕ್ಕಳಿಗೇ ಸೀಮಿತವಾಗಬೇಕು ಎಂದು ಸಮಾಜವು ಕಟ್ಟುಪಾಡುಗಳನ್ನು ಹಾಕುವ ಕಾಲಘಟ್ಟದಲ್ಲಿ, ಹರ್ಮನ್‌ಪ್ರೀತ್ ಕೌರ್ ಅವರ ಪೋಷಕರ ಬೆಂಬಲ ಒಂದು ನೈಜ ನಿದರ್ಶನವಾಗಬೇಕಿದೆ. ಮಹಿಳೆಯರು ಎಷ್ಟೇ ಸಾಧನೆ ಮಾಡಿದರೂ ಸರಿಸಮಾನವಾಗಿ ಕಾಣದ ಈ ಸಮಾಜದಲ್ಲಿ, ಹರ್ಮನ್‌ಪ್ರೀತ್ ಕೌರ್ ಅವರ ಪೋಷಕರು, ಆಕೆಯ ಇಷ್ಟದಂತೆ ಕ್ರಿಕೆಟ್ ಆಡಲು ಬಿಟ್ಟು ಆಕೆಗೆ ಧೈರ್ಯ ನೀಡಿದ್ದರಲ್ಲದೇ, ಅವರು ಮಗಳ ಕನಸಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಬೆಂಬಲಿಸಿದ್ದಕ್ಕೆ, ನಿಜಕ್ಕೂ ಒಂದು ಸಲಾಂ. ಇದನ್ನೂ ಓದಿ: ವೈರಲ್‌ ಆದ Afro Tapaang ಸಾಂಗ್‌ - ಚಿತ್ರ ನಿರ್ದೇಶಕನಾಗಿ AJ ಹಾಡಿನ ಬಗ್ಗೆ ಶಿವಣ್ಣ ಏನಂದ್ರು ಗೊತ್ತಾ!?