ಷೇರು ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡಿ ನಷ್ಟವಾದ ಹಿನ್ನಲೆ ಹಾಗೂ ಆರ್ಥಿಕ ಸಂಕಷ್ಟದಿಂದ ನಲುಗಿ ಇಂಜಿನಿಯರ್ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಉತ್ತರಖಾಂಡದ ಅರಿಹಂತ್ ವಿಹಾರ ಪ್ರದೇಶದ ಕಂಖಾಲ್ ಠಾಣೆ ಪೋಲಿಸರು ತಿಳಿಸಿರುವ ಮಾಹಿತಿ ಪ್ರಕಾರ, ಲವಕುಮಾರ್ ಎಂಬಾತ, ಆರ್ಥಿಕ ವಿವಾದ ಹಾಗೂ ಸಂಕಷ್ಟದಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು, ಹೊಗೆ ತುಂಬಿದ ಕೋಣೆಯಲ್ಲಿ ಬೀಗ ಹಾಕಿಕೊಂಡು ಉಸಿರುಗಟ್ಟಿ ಸತ್ತಿದ್ದಾರೆಂದು ತಿಳಿಸಲಾಗಿದೆ.
ಬುಧವಾರದಂದು ಸಂಭವಿಸಿರುವ ಈ ಘಟನೆಯು, ಷೇರು ಮಾರುಕಟ್ಟೆಯ ಅನಿಶ್ಚಿತತೆ ಹಾಗೂ ವೈರುಧ್ಯಗಳು ಜೀವಪ್ರಮಾದಕ್ಕೆ ಕಾರಣವಾದ ಉದಾಹರಣೆ ಎಂತನಿಸದೆ.
ಆತ ವಿಪರೀತ ಸಾಲಭಾಧೆ ಹಾಗೂ ಹಣಕಾಸಿನ ಬಿಕ್ಕಟ್ಟಿನಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದ್ದು, ವೃತ್ತಿಯಲ್ಲಿ ರಾಸಾಯನಿಕ ಇಂಜಿನಿಯರ್ ಎಂದು ಹೇಳಲಾಗಿದೆ. ವಿಷಯ ತಿಳಿದ ಪತ್ನಿ ಹಾಗೂ ಕುಟುಂಬಸ್ಥರು ತಡೆಯಲು ಮುಂದಾದ ಸಂದರ್ಭದಲ್ಲಿ, ಕೋಣೆಯಲ್ಲಿ ಹೊಗೆ ತುಂಬಿಹೋಗಿತ್ತು. ಪ್ರಜ್ಞಾಹೀನನಾಗಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತರಾಗಿದ್ದರು ಎನ್ನಲಾಗಿದೆ. Noise Buds Trance in-Ear Truly Wireless Earbuds with 45H of Playtime, Low Latency(up to 40 ms), Instacharge(10 min=200 min), BT v5.3(Jet Black)
ಪತ್ನಿಗೆ ಮೆಸೇಜ್‌ನಲ್ಲಿ ಕಾರ್ಬನ್ ಮಾನಕ್ಸೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ, ಕೋಣೆಯಲ್ಲಿದ್ದ ಹೀಟರ್ ಮೇಲೆ ಕಲ್ಲಿದ್ದಲು ಸುಟ್ಟು ಹೊಗೆ ಸೃಷ್ಟಿಸಿ, ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ತೀವ್ರ ಆರ್ಥಿಕ ನಷ್ಟ ಹಾಗೂ ಮದ್ಯ ವ್ಯಸನಿಯಾಗಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಮಾನಹಾನಿ ಆರೋಪ: ಖಾಸಗಿ ಫೋಟೋ, ವಿಡಿಯೋ ಹಂಚಿಕೆ; ತಿಲಕನಗರ ಪೊಲೀಸರಿಂದ ವಿಚಾರಣೆ