Skip to main content
ವಿಡಿಯೋ
1/3
entertainment

ಬಿಗ್‌ಬಾಸ್‌ ಕನ್ನಡ 12: ಮನೆಯವರಿಗೆ ಮತ್ತೆ ಟಾರ್ಗೆಟ್‌ ಆದ ಗಿಲ್ಲಿ...ಅಶ್ವಿನಿ ಗೌಡ, ಧ್ರುವಂತ್‌ ಒಟ್ಟಿಗೆ ತಿರುಗಿಬಿದ್ದಿದ್ದೇಕೆ?

By Ram Chethan
ಬಿಗ್‌ಬಾಸ್‌ ಕನ್ನಡ 12: ಮನೆಯವರಿಗೆ ಮತ್ತೆ ಟಾರ್ಗೆಟ್‌ ಆದ ಗಿಲ್ಲಿ...ಅಶ್ವಿನಿ ಗೌಡ, ಧ್ರುವಂತ್‌ ಒಟ್ಟಿಗೆ ತಿರುಗಿಬಿದ್ದಿದ್ದೇಕೆ?

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಹೊಸ ಗಲಾಟೆ ಉಕ್ಕಿದೆ. ಅಶ್ವಿನಿ ಗೌಡ, ರಿಷಾ ಮತ್ತು ಧ್ರುವಂತ್‌ ಗಿಲ್ಲಿ ನಟನ ಮಾತುಗಳಿಗೆ ಕಿಡಿ ಹೊತ್ತಿದ್ದಾರೆ. ತೀಕ್ಷ್ಣ ಸಂಭಾಷಣೆ, ಗುಂಪುಗೂಡಿಕೆ ಹಾಗೂ ಕೌಂಟರ್ ಡೈಲಾಗ್‌ಗಳಿಂದ ಮನೆ ಗದ್ದಲಗದ್ದಲ. ಈ ವಾರದ ವೀಕೆಂಡ್‌ನಲ್ಲಿ ಸುದೀಪ್ ಯಾರು ತಪ್ಪು, ಯಾರು ಸರಿಯೆಂಬುದನ್ನು ಸ್ಪಷ್ಟಪಡಿಸುವ ನಿರೀಕ್ಷೆ ಹೆಚ್ಚಿದೆ.

ಖಾಸಗಿ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮನೆ ಇದೀಗ ಹೊಸ ವಿವಾದಕ್ಕೆ ಸಾಕ್ಷಿಯಾಗಿದೆ. ಅಶ್ವಿನಿ ಗೌಡ, ರಿಷಾ ಮತ್ತು ಧ್ರುವಂತ್ ಸೇರಿದಂತೆ ಹಲವು ಸ್ಪರ್ಧಿಗಳು ಗಿಲ್ಲಿ ನಟನ ಮಾತುಗಳಿಂದ ಮನಸ್ಸಿಗೆ ನೋವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮಾತುಗಳು ಕೆಲವೊಮ್ಮೆ ಬೇಸರ ತರಿಸಬಹುದು ಎಂದು ಗಿಲ್ಲಿ ನಟ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.American Tourister Large Icor () 82Cms|Soft Spinner Carry On Trolley Bag for Travel|Wet Pocket| Expandable|Polyester Luggage|Combination Lock| 4 Wheel Suitcase for Men&Women (Teal)|Light Weight&Durable

ಪ್ರತಿ ವಾರ ಬಿಗ್ ಬಾಸ್ ಮನೆಯಲ್ಲಿ ಹೊಸ ಗುಂಪುಗಳು ರಚನೆಯಾಗುತ್ತಿದ್ದು, ಅಶ್ವಿನಿ ಗೌಡ ಈ ಗುಂಪುಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಧ್ರುವಂತ್, ರಿಷಾ ಮತ್ತು ಅಶ್ವಿನಿ ಗೌಡ ಒಂದುಗೂಡಿ ಗಿಲ್ಲಿ ನಟನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಈ ಮೂವರು ಒಟ್ಟಾಗಿ ಗಿಲ್ಲಿ ನಟನನ್ನು ಎದುರಿಸಿದ್ದಾರೆ.

ಮೂವರು ಒಟ್ಟಾಗಿ ಆಕ್ರಮಣ ನಡೆಸಿದರೂ, ಗಿಲ್ಲಿ ನಟ ತಮ್ಮದೇ ವಿಶಿಷ್ಟ ಶೈಲಿಯಲ್ಲಿ, ತೀಕ್ಷ್ಣ ಮಾತುಗಳ ಮೂಲಕ ತಿರುಗೇಟು ನೀಡಿದ್ದಾರೆ. ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ನಿರೂಪಕ ಸುದೀಪ್ ಅವರು ಈ ನಾಲ್ವರಲ್ಲಿ ಯಾರು ಸರಿ, ಯಾರು ತಪ್ಪು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವೀಕ್ಷಕರು ಆಗ್ರಹಿಸಿದ್ದಾರೆ. ಕಳೆದ ವಾರದಂತೆ ಈ ಬಾರಿಯೂ ಗೊಂದಲದಲ್ಲಿಡಬಾರದು ಎಂದು ಮನವಿ ಮಾಡಲಾಗಿದೆ.ಇದನ್ನು ಓದಿ:ಜಾಹ್ನವಿ–ಅಶ್ವಿನಿ ಭಿನ್ನಾಭಿಪ್ರಾಯಕ್ಕೆ ಬ್ರೇಕ್...ಕಣ್ಣೀರಿನಿಂದ ಮರು ಹುಟ್ಟಿದ ಸ್ನೇಹ..!

ಅಶ್ವಿನಿ ಗೌಡ "ಏನು ಎಲ್ಲದಕ್ಕೂ ಗಿಲ್ಲಿ ಗಿಲ್ಲಿ ಅಂತೀರಿ?" ಎಂದು ಪ್ರಶ್ನಿಸಿದರೆ, ರಿಷಾ "ನಯ ನಾಜೂಕನ್ನು ಕಲಿಯಿರಿ" ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಗಿಲ್ಲಿ "ಅದು ನಿನ್ನಲ್ಲೇ ಇಲ್ಲ" ಎಂದು ಚುಚ್ಚಿದ್ದಾರೆ. ಧ್ರುವಂತ್, "ಕಾಮಿಡಿ ಮಾಡುವುದು ಬೇರೆ, ಆದರೆ ಕಾಮಿಡಿ ಹೆಸರಿನಲ್ಲಿ ಬೇರೆಯವರನ್ನು ಚೀಪ್ ಮಾಡುವುದು ಬೇರೆ. ಯಾರಾದರೂ ನಿನ್ನ ಬಗ್ಗೆ ಒಳ್ಳೆಯದನ್ನು ಮಾತನಾಡುತ್ತಾರಾ?" ಎಂದು ಪ್ರಶ್ನಿಸಿದರು. ಇದಕ್ಕೆ ಗಿಲ್ಲಿ "ನಿನ್ನ ಬಗ್ಗೆ ತುಂಬಾ ಒಳ್ಳೆಯದನ್ನು ಮಾತನಾಡುತ್ತಾರಾ?" ಎಂದು ತೀಕ್ಷ್ಣವಾಗಿ ಮರುಪ್ರಶ್ನಿಸಿದ್ದಾರೆ. ಮತ್ತೇನು ಮಾಡಿದ್ದೀಯಾ?