Skip to main content
ವಿಡಿಯೋ
1/3
business

ಷೇರುಮಾರುಕಟ್ಟೆ - ವಿದೇಶಿ ಬಂಡವಾಳ ವ್ಯತ್ಯಯದಿಂದಾಗಿ ಸೆನ್ಸೆಕ್ಸ್‌ ನಿಫ್ಟಿ ಕುಸಿತ!?

By Shravanthi R
ಷೇರುಮಾರುಕಟ್ಟೆ - ವಿದೇಶಿ ಬಂಡವಾಳ ವ್ಯತ್ಯಯದಿಂದಾಗಿ ಸೆನ್ಸೆಕ್ಸ್‌ ನಿಫ್ಟಿ ಕುಸಿತ!?

ಷೇರುಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೊರಹರಿವು ಹಾಗೂ ಜಾಗತಿಕ ವ್ಯತ್ಯಯಗಳ ಪರಿಣಾಮ ಭಾರತೀಯ ಷೇರು ಸೂಚ್ಯಂಕಗಳು ಕುಸಿದಿದೆ ಎಂದು ವರದಿ ತಿಳಿಸಿದೆ.

ಮುಂಬೈ: ಇಂದು ಜಾಗತಿಕ ಮಾರುಕಟ್ಟೆಯ ದುರ್ಬಲತೆ ಮತ್ತು ದೇಶೀಯ ಅರ್ಥವ್ಯವಸ್ಥೆಯ ವ್ಯತ್ಯಯದಿಂದಾಗಿ ಷೇರು ಮೌಲ್ಯಗಳ ವಹಿವಾಟಿನಲ್ಲಿ ಕುಸಿತ ಕಂಡಿದೆ ಎನ್ನಲಾಗಿದೆ. ವಿದೇಶಿ ಹೂಡಿಕೆಯ ಹೊರಹರಿವು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ದುರ್ಬಲತೆ ಪ್ರವೃತ್ತಿಯಿಂದಾಗಿ ಭಾರತೀಯ ಷೇರು ಸೂಚ್ಯಂಕಗಳು ಆರಂಭಿಕವಾಗಿ ಕುಸಿದಿದೆ ಎಂದು ವರದಿ ತಿಳಿಸಿದೆ.  

ಸೆನ್ಸೆಕ್ಸ್‌ನಲ್ಲಿ 30 ಷೇರುಗಳ ವಹಿವಾಟು 631.93 ಅಂಶ ಕುಸಿದು 82,679.08 ರಲ್ಲಿ ಆರಂಭಿಸಿದರೆ, 50 ಷೇರುಗಳ ಎನ್‌ಎಸ್‌ಇ ನಿಫ್ಟಿ 184.55 ಅಂಶ ಕುಸಿದು 25,325.15 ವಹಿವಾಟು ಆರಂಭಿಸಿತು ಎನ್ನಲಾಗಿದೆ.

ಗುರುವಾರ ಅಮೆರಿಕ ಷೇರುಪೇಟೆಗಳು ಕೊಂಚ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದವು. ಸೆನ್ಸೆಕ್ಸ್‌ನ ಕಂಪನಿಗಳಾದ ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್, ಭಾರ್ತಿ ಏರ್‌ಟೆಲ್, ಟಾಟಾ ಕನ್ಸಲ್ವೆನ್ಸಿ ಸರ್ವಿಸಸ್, ಟೆಕ್ ಮಹೀಂದ್ರ ಹಾಗೂ ಮಾರುತಿ ಕಂಪನಿಗಳು ನಷ್ಟದೊಂದಿಗೆ ವಹಿವಾಟು ಆರಂಭಿಸಿವೆ. ಇದಾದರೂ, ಐಟಿಸಿ, ಐಸಿಐಸಿಐ ಬ್ಯಾಂಕ್, ಎಟರ್ನಲ್ ಮತ್ತು ಪವರ್ ಗ್ರಿಡ್ ಲಾಭ ಕಂಡಿವೆ. iQOO Neo 10R 5G (Raging Blue, 8GB RAM, 128GB Storage) | Snapdragon 8s Gen 3 Processor | India's Slimmest 6400mAh Battery Smartphone | Segment's Most Stable 90FPS for 5 Hours

ವಿನಿಮಯ ಕೇಂದ್ರ ದತ್ತಾಂಶದಿಂದ ತಿಳಿದುಬಂದಿರುವ ಹಾಗೆ, ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ₹3,263.21 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ₹5,283.91 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಬಿಎಸ್‌ಇ ಸೆನ್ಸೆಕ್ಸ್‌ ಹಾಗೂ ನಿಫ್ಟಿ 50 ಸೂಚ್ಯಂಕಗಳು ಭಾರತೀಯ ಷೇರು ವ್ಯಾಪಾರ ಮಾರುಕಟ್ಟೆಗಳ ಪ್ರಮುಖ ಸಾಧನಗಳಾಗಿದೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ನಷ್ಟ: ಆರ್ಥಿಕ ಒತ್ತಡದಿಂದ ಮನನೊಂದು ಆತ್ಮ**ಹತ್ಯೆ ಮಾಡಿಕೊಂಡ ಇಂಜಿನಿಯರ್‌!