ಮಂಡ್ಯ - ಭೂಮಿ ಲೂಟಿಗೆ ಹೆದರಬೇಡಿ! ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ನೀವು ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜೊತೆ ನಾನಿದ್ದೇನೆ ಎಂದು ಹೆಚ್‌ಡಿಕೆ ಅಭಯ ನೀಡಿದರು. ಸರ್ಕಾರವು ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ನನ್ನ ಹೆಸರಿನಲ್ಲಿ ಆಶ್ರಯ ಬೇಡ ಹಳೆಯ ತೀರ್ಮಾನಕ್ಕೆ ಸ್ಪಷ್ಟನೆ ನೀಡಿದರು.
ಬಿಡದಿ ಟೌನ್‌ಶಿಪ್‌ನ ತೀರ್ಮಾನ ಹಿಂದೆ ನನ್ನ ಕಾಲದಲ್ಲಿಯೇ ಆಗಿದೆ ಎಂಬ ಸರ್ಕಾರದ ಹೇಳಿಕೆಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು. ಬಿಡದಿ ಟೌನ್‌ಶಿಪ್ ಮಾಡುವುದು ಕುಮಾರಸ್ವಾಮಿ ಅವರ ಕಾಲದಲ್ಲಾಗಿರುವ ತೀರ್ಮಾನ ಎಂದು ನನ್ನ ಹೆಸರಿನಲ್ಲಿ ಆಶ್ರಯ ತೆಗೆದುಕೊಳ್ಳಬೇಡಿ.
ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳೇ ಬೇರೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರೀ ಬೆಲೆ ಬಂದಿದೆ ಎಂದರು. ಸುಮಾರು 9,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು. iQOO Z10R 5G (Aquamarine, 8GB RAM, 128GB Storage) | 32MP 4K Selfie Camera | Quad-Curved AMOLED Display | Dimensity 7400 Processor with 750K+ AnTuTu
ಕನಕಪುರದ ಒಣಭೂಮಿಯಲ್ಲೇಕೆ ಟೌನ್‌ಶಿಪ್ ಮಾಡಬಾರದು?
ಹೆಚ್‌ಡಿಕೆ ಅವರು ಕನಕಪುರವನ್ನು ಗುರಿಯಾಗಿಸಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡುವಾಗ ರೈತರಿಗೆ ಎಷ್ಟು ದುಡ್ಡು ಕೊಟ್ಟಿರಿ. ನಿಮ್ಮ ಪಟಾಲಂಗೆ ಎಷ್ಟು ಪರಿಹಾರ ಕೊಟ್ಟಿರಿ. ಕನಕಪುರದಲ್ಲಿ ಒಣಭೂಮಿ ಇದ್ರೆ ಅಲ್ಲೆಲ್ಲೂ ಒಣ ಬೇಸಾಯದ ಭೂಮಿ ಇದೆ ಅಂತ ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆ ಭೂಮಿಯನ್ನೇ ವಶಕ್ಕೆ ತೆಗೆದುಕೊಂಡು ಟೌನ್‌ಶಿಪ್ ಮಾಡಬಹುದಲ್ಲವೇ.?
ನಿಮ್ಮ ಉದ್ದೇಶ ಬಿಡದಿಯ ಜನರನ್ನು ಉದ್ಧಾರ ಮಾಡುವುದಲ್ಲ, ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಲು ಈ ಯೋಜನೆ ರೂಪಿಸಿದ್ದೀರಿ ಎಂದು ಆರೋಪಿಸಿದರು. ರೈತರನ್ನು ಒಕ್ಕಲೆಬ್ಬಿಸಬೇಡಿ, ಒಣ ಭೂಮಿ ಇರುವ ಕಡೆ ಟೌನ್‌ಶಿಪ್ ಮಾಡಿ ಎಂದು ಆಗ್ರಹಿಸಿದರು.
ಕಬ್ಬಿನ ದರ 7 ದಿನ ರಸ್ತೆಯಲ್ಲಿ ಮಲಗಿಸಬೇಕಿತ್ತಾ?
ಕಬ್ಬಿನ ದರ ನಿಗದಿಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಹೆಚ್‌ಡಿಕೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 136 ಸೀಟಿನ ಸ್ವತಂತ್ರ ಸರ್ಕಾರ, ಇವರಿಗೇನಾಗಿದೆ ದಾರಿದ್ರ ರೈತರನ್ನು 7 ದಿನದಿಂದ ರಸ್ತೆಯಲ್ಲಿ ಮಲಗಿಸಬೇಕಿತ್ತಾ.?
ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಜೊತೆಗೆ ಕಬ್ಬು ಮಾರಾಟವಾಗದಿದ್ದಾಗ ರೈತರಿಗೆ 25 ಸಾವಿರ ರೂ ಸಹಾಯಧನ ಒಟ್ಟು 250 ಕೋಟಿ ರೂ ಕೊಟ್ಟಿದ್ದೆ. ಕಬ್ಬು ಒಣಗಿದ್ದನ್ನು ನಾನೇ ಕಣ್ಣಾರೆ ಕಂಡಿದ್ದೆ ಎಂದು ನೆನಪಿಸಿಕೊಂಡರು.
ಮುಖ್ಯಮಂತ್ರಿಗಳು ಆ ಭಾಗದಲ್ಲೇ ಪ್ರವಾಸ ಮಾಡಿದ್ದರೂ ರೈತರ ಪ್ರತಿಭಟನಾ ಸ್ಥಳಕ್ಕೆ ಹೋಗಿ ಕಷ್ಟ ಕೇಳಲಿಲ್ಲ ಎಂದು ಟೀಕಿಸಿದರು.
ರೈತರು ಬೆಲೆ ನಿಗದಿ ಕೇಳಿದರೆ ನಮ್ಮದಲ್ಲ ಕೇಂದ್ರ ಸರ್ಕಾರ ಹಣ ಕೊಡಬೇಕು ಎನ್ನುತ್ತಾರೆ.ರೈತರ ಬದುಕಿನ ಜೊತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಮುಂದಿನ ನಿರ್ಧಾರ?
ಸದ್ಯಕ್ಕೆ ರಾಜಕೀಯ ಬೆರೆಸುವ ಆರೋಪದ ಕಾರಣ ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ. ಸರ್ಕಾರದ ನಿರ್ಧಾರ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ಇದನ್ನೂ ಓದಿ: ಷೇರುಮಾರುಕಟ್ಟೆ - ವಿದೇಶಿ ಬಂಡವಾಳ ವ್ಯತ್ಯಯದಿಂದಾಗಿ ಸೆನ್ಸೆಕ್ಸ್ ನಿಫ್ಟಿ ಕುಸಿತ!?