ರಾಜ್ಯದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ʻಅನ್ನಭಾಗ್ಯʼ ಯೋಜನೆಯಡಿ ನೀಡಲಾಗುವ ಇಂದಿರಾ ಆಹಾರ ಕಿಟ್‌ನಲ್ಲಿ ಇನ್ನು ಮುಂದೆ ಹೆಸರುಕಾಳಿನ ಬದಲಾಗಿ ತೊಗರಿಬೇಳೆಯನ್ನು ವಿತರಿಸಲಾಗುವುದೆಂದು ತಿಳಿಸಲಾಗಿದೆ. ಹಸಿವುಮುಕ್ತ ಕರ್ನಾಟಕವನ್ನಾಗಿಸುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಪಡಿತರ ಕುಟುಂಬಗಳಿಗೆ ಹೆಚ್ಚುವರಿ ತೊಗರಿಬೇಳೆಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಹಿಂದೆ ವಿತರಿಸಲಾಗುತ್ತಿದ್ದ ಇಂದಿರಾ ಆಹಾರ ಕಿಟ್‌ನಲ್ಲಿ 1 ಕೆ.ಜಿ ಹೆಸರುಕಾಳನ್ನು ಕೈಬಿಟ್ಟು, ಹೆಚ್ಚುವರಿಯಾಗಿ ತೊಗರಿಬೇಳೆಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ತಿಳಿಸಿರುವ ಕಾನೂನು ಸಚಿವರಾದ ಹೆಚ್. ಕೆ ಪಾಟೀಲ್ ಅವರು, ರಾಜ್ಯದ ತೊಗರಿಬೇಳೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಮತ್ತು ಪಡಿತರದಾರರಿಗೆ ಮತ್ತಷ್ಟು ಪ್ರೋಟೀನ್‌ಯುಕ್ತ ಪೌಷ್ಟಿಕಾಂಶ ಒದಗಿಸುವ ಉದ್ದೇಶದೊಂದಿಗೆ ಈ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ. OnePlus Nord CE5 | Massive 7100mAh Battery | MediaTek Dimensity 8350 Apex | Powered by OnePlus AI | 8GB + 128GB | Nexus Blue
ಸರ್ಕಾರಕ್ಕೆ ಹೆಚ್ಚು ಹೊರೆ ಬೀಳದ ಹಾಗೆ ಈ ಹಿಂದೆ ಹೆಸರುಕಾಳಿಗೆ ನಿಗದಿಪಡಿಸಲಾಗಿದ್ದ ವೆಚ್ಚದಲ್ಲಿಯೇ ತೊಗರಿಬೇಳೆಯನ್ನು ಖರೀದಿಸಿ ವಿತರಿಸಲಾಗುವುದೆಂದು ಅವರು ತಿಳಿಸಿದರು. ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ; ಒಬ್ಬರು ಹಾಗೂ ಇಬ್ಬರಿರುವ ಸದಸ್ಯ ಕುಟುಂಬಕ್ಕೆ ¼ ಕೆ.ಜಿ., ಮೂರು ಮತ್ತು ನಾಲ್ಕು ಸದಸ್ಯರಿರುವ ಕುಟುಂಬಕ್ಕೆ ½ ಕೆ.ಜಿ., ಐದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ¾ ಕೆ.ಜಿ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ - ಒಂದು ಇಂಚು ಭೂಮಿ ಕೊಡಬೇಡಿ - ಕುಮಾರಸ್ವಾಮಿ ಗರಂ ರೈತರಿಗೆ ಅಭಯ!