Skip to main content
ವಿಡಿಯೋ
1/3
metro

ರಸ್ತೆ ಬಿಟ್ಟು ಕೊಳವೆದಾರಿಯಲ್ಲಿ ಬೈಕ್‌ ಸವಾರಿ - ಟೆಕ್ಕಿಗಳ ಹರಸಾಹಸ! - ವಿಡಿಯೋ ವೈರಲ್‌

By Shravanthi R
ರಸ್ತೆ ಬಿಟ್ಟು ಕೊಳವೆದಾರಿಯಲ್ಲಿ ಬೈಕ್‌ ಸವಾರಿ - ಟೆಕ್ಕಿಗಳ ಹರಸಾಹಸ! - ವಿಡಿಯೋ ವೈರಲ್‌

ನಗರದಲ್ಲಿ ರಸ್ತೆ ಸಂಚಾರ ಎಷ್ಟರ ಮಟ್ಟಿಗೆ ಹಾಳಾಗಿವೆ ಎಂಬುದಕ್ಕೆ ಮತ್ತೊಂದು ಹರಸಾಹಸದ ವಿಡಿಯೋ ಸಾಕ್ಷಿಯಾಗಿ ವೈರಲ್‌ ಆಗಿದೆ.

ರಾಜ್ಯದಲ್ಲಷ್ಟೇ ಅಲ್ಲದೇ ಬೇರೆ ರಾಜ್ಯದ ನಿವಾಸಿಗಳಿಂದ ಟೀಕೆಗಳಿಗೆ ಗುರಿಯಾದ ರಾಜಧಾನಿ ಬೆಂಗಳೂರು. ಸಿಲಿಕಾನ್‌ ಸಿಟಿ ಬೆಂಗಳೂರು ರಸ್ತೆ ಸಮಸ್ಯೆಗಳಿಂದ ಭಾರಿ ಟ್ರೋಲ್‌ಗೊಳಗಾಗಿದೆ. ನಗರದ ಮೂಲಸೌಕರ್ಯದ ದುವರಸ್ಥೆಯಿಂದ ದಿನನಿತ್ಯ ಓಡಾಡುವ ವಾಹನ ಸಂಚಾರರಿಗೆ ತೊಂದರೆಗಳು ಹಾಗೂ ಅಪಾಯಕಾರಿ ದಾರಿಗಳು ಎದುರಾಗುತ್ತಲೇ ಇವೆ ಎನ್ನಲಾಗಿದೆ. 

ಇದೀಗ ವೈರಲ್‌ ವಿಡಿಯೋ ಒಂದು ಹಂಚಿಕೊಳ್ಳಲಾಗಿರುವ ಪ್ರಕಾರ, ಹಳ್ಳದಿಣ್ಣೆಗಳ ಮೂಲಕ ವಾಹನ ಸವಾರರು ಹಿಗ್ಗಾಮುಗ್ಗಾ ವಾಹನ ಚಲಾಯಿಸಿಕೊಂಡು ತೆರಳಿರುವ ದೃಶ್ಯಾವಳಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿಸಿದೆ. ಇದಲ್ಲದೇ, ಸರ್ಕಾರದ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ರಾಜಕೀಯ ನಾಯಕರನ್ನು ಟ್ಯಾಗ್‌ ಮಾಡಿ, ಕಮೆಂಟ್‌ ಮಾಡುವುದರ ಮೂಲಕ ವ್ಯಂಗೀಕರಿಸಲಾಗಿದೆ.

ಎಲ್ಲೆಲ್ಲೂ ಗಬ್ಬೆದ್ದು ನಿಂತಿರುವ ನೀರು, ಬಾಯಿ ತೆರೆದಿರುವ ರಸ್ತೆಗುಂಡಿಗಳು, ಹಳ್ಳಕೊಳ್ಳದ ದಿಬ್ಬಗಳು ಇಷ್ಟೆಲ್ಲಾ ಸಮಸ್ಯೆಗಳು ಇರುವಾಗಲೂ ಅಭಿವೃದ್ದಿ ಅಂತ ದಾಪುಗಾಲಿಟ್ಟಿರುವುದನ್ನು ಅಣಕಿಸಲಾಗುತ್ತಿದೆ. iQOO Z10x 5G (Ultramarine, 6GB RAM, 128GB Storage) | 6500 mAh Large Capacity Battery | Dimensity 7300 Processor | Military-Grade Durability

ಟ್ರೋಲ್‌ ಮಾದರಿಯಲ್ಲಿ, "ಇದು ಬೆಂಗಳೂರಿನ ಟೆಕ್ಕಿಗಳ ಪಯಣ! ಕೋಡರ್‌ಗಳಿಗೆ ಇಷ್ಟು ದೈಹಿಕ ಕಷ್ಟ ಕೊಟ್ಟರೆ ಕೋಡ್‌ ಖಂಡಿತಾ ಶಾರ್ಪ್‌ ಆಗುತ್ತದೆ!" ಎಂದು ವ್ಯಂಗ್ಯವಾಡಿರುವ ಪೋಸ್ಟ್‌ ಈಗಾಗಲೇ ವ್ಯೂಸ್‌ ಕಂಡು ವೈರಲ್‌ ಆಗಿದೆ. ಈ ಹಿಂದೆ ಅನೇಕ ವಾದ ವಿವಾದಗಳಿಗೆ ಸುದ್ದಿಯಾಗಿದ್ದ ಈ ವಿಷಯವು, ಇನ್ನೂ ರಸ್ತೆ ಸರಿಪಡಿಸುವಿಕೆ, ಕಾಮಗಾರಿಗಳ ತಾತ್ಕಾಲಿಕ ಮಾರ್ಗಗಳು ಜನರ ಆಕ್ರೋಶಕ್ಕೆ ಒಳಪಟ್ಟಿದೆ ಎನ್ನಲಾಗಿದೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಆಹಾರಕಿಟ್‌ನಲ್ಲಿ ಹೆಸರುಕಾಳಿನ ಬದಲಿಗೆ ತೊಗರಿಬೇಳೆ ವಿತರಣೆ