ಬಾರ್‌ಕೋಡ್‌ನ ಸೃಷ್ಟಿ ಮತ್ತು ಇತಿಹಾಸ
ಕ್ಯೂಆರ್ ಕೋಡ್‌ಗಿಂತ ಮೊದಲು ಬಳಕೆಯಲ್ಲಿದ್ದುದು ಬಾರ್‌ಕೋಡ್‌ಗಳು (Barcode). ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಲಂಬರೇಖೆಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುವ ಇದನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಲಾಗುತ್ತದೆ. ಅಮೆರಿಕದ ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್ (Norman Joseph Woodland) ಅವರು ವಿಶ್ವದ ಮೊದಲ ಬಾರ್‌ಕೋಡ್ ಅನ್ನು ರಚಿಸಿದರು.
1948ರಲ್ಲಿ ಫ್ಲೋರಿಡಾದ ಬೀಚ್‌ನಲ್ಲಿ, ಮಾರ್ಸ್ ಕೋಡ್‌ಗಳನ್ನು ಮರಳಿನಲ್ಲಿ ಬರೆಯುತ್ತಿದ್ದಾಗ, ದಪ್ಪನೆಯ ರೇಖೆಗಳನ್ನು ಬಳಸಿ ಕೋಡ್ ಬರೆಯುವ ಕಲ್ಪನೆ ಅವರಿಗೆ ಹೊಳೆಯಿತು. ನಾರ್ಮನ್ ಅವರು ಬಿಡಿಸಿದ ಮೊದಲ ಬಾರ್‌ಕೋಡ್ ವೃತ್ತಾಕಾರದಲ್ಲಿತ್ತು, ಇದು 'ಬುಲ್ಸ್ ಐ' (Bull's Eye) ರೀತಿ ಕಾಣುತ್ತಿತ್ತು.
1948ರಲ್ಲಿ ಸೃಷ್ಟಿಯಾದರೂ, ಬಾರ್‌ಕೋಡ್ ವ್ಯಾಪಕವಾಗಲು ಸುಮಾರು ಎರಡು ದಶಕಗಳು ಬೇಕಾಯಿತು. ಬಾರ್‌ಕೋಡ್ ಅನ್ನು ಓದಬಲ್ಲ ಲೇಸರ್ ಸ್ಕ್ಯಾನರ್ ಅಭಿವೃದ್ಧಿಯಾದ ಬಳಿಕ (ಇದನ್ನು ವುಡ್‌ಲ್ಯಾಂಡ್ ಮತ್ತು ಐಬಿಎಂ ತಂಡವೇ ಅಭಿವೃದ್ಧಿಪಡಿಸಿತು) ಅದರ ಬಳಕೆ ಆರಂಭವಾಯಿತು. ಈ ಬಾರ್‌ಕೋಡ್ ಅನ್ನು ಯುನಿವರ್ಸಲ್ ಪ್ರಾಡಕ್ಟ್ ಕೋಡ್ (UPC) ಎಂದು ಕರೆಯಲಾಯಿತು ಮತ್ತು ಇದನ್ನು ಮೊದಲ ಬಾರಿಗೆ 1974ರಲ್ಲಿ ಸ್ಕ್ಯಾನ್ ಮಾಡಲಾಯಿತು. INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)
ಕ್ಯೂಆರ್ ಕೋಡ್ ಅಭಿವೃದ್ಧಿಯಾಗಿದ್ದು ಹೇಗೆ?
ಯುಪಿಸಿ ಬಾರ್‌ಕೋಡ್‌ನಲ್ಲಿ ಹೆಚ್ಚಿನ ಮಾಹಿತಿ ಹಿಡಿದಿಡಲು ಸಾಧ್ಯವಾಗುತ್ತಿರಲಿಲ್ಲ. ಉತ್ಪನ್ನಗಳನ್ನು ಸರಿಯಾಗಿ ಟ್ರ್ಯಾಕ್ ಮಾಡಲು ಒಂದೇ ಉತ್ಪನ್ನಕ್ಕೆ 10 ಬಾರ್‌ಕೋಡ್‌ಗಳನ್ನು ಹಾಕಬೇಕಿತ್ತು. ಅಲ್ಲದೆ, ಬಾರ್‌ಕೋಡ್‌ಗಳನ್ನು ಒಂದೇ ದಿಕ್ಕಿನಲ್ಲಿ ಸ್ಕ್ಯಾನ್ ಮಾಡಬೇಕಿದ್ದ ಕಾರಣ, ಇದು ಕಂಪನಿಗಳ ಉತ್ಪಾದನಾ ವೇಗವನ್ನು ಕಡಿಮೆ ಮಾಡುತ್ತಿತ್ತು. ತೊಂಬತ್ತರ ದಶಕದಲ್ಲಿ, ಜಪಾನ್‌ನ ವಾಹನ ಕಂಪನಿ ಡೆನ್ಸೋ ವೇವ್ (Denso Wave) ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಯಿತು.
1994ರಲ್ಲಿ ಡೆನ್ಸೋ ವೇವ್ ಕಂಪನಿಯ ಉದ್ಯೋಗಿ ಮಸಹಿರೋ ಹರ (Masahiro Hara) ಎಂಬುವವರು, ಜಪಾನ್‌ನ ಪ್ರಸಿದ್ಧ ಬೋರ್ಡ್ ಗೇಮ್ ಆದ 'ಗೋ' (Go) ಆಡುವಾಗ ಕ್ಯೂಆರ್ ಕೋಡ್‌ನ ಐಡಿಯಾವನ್ನು ಕಂಡುಕೊಂಡರು. 'ಗೋ' ಬೋರ್ಡ್‌ನಲ್ಲಿರುವ 19x19 ಗ್ರಿಡ್‌ನಲ್ಲಿ ಕಪ್ಪು-ಬಿಳಿ ಕಲ್ಲುಗಳನ್ನು ಎಲ್ಲೆಡೆ ಇರಿಸುವ ವ್ಯವಸ್ಥೆಯು, ಗ್ರಿಡ್ ಸಿಸ್ಟಮ್‌ನಲ್ಲಿ ಹೆಚ್ಚಿನ ಮಾಹಿತಿ ಇರಿಸಿಕೊಳ್ಳಬಹುದು ಎಂಬ ಕಲ್ಪನೆಯನ್ನು ನೀಡಿತು. ಮಸಹಿರೋ ಹರ ಅವರು ಡೆನ್ಸೋ ವೇವ್‌ನ ಇತರ ಕೆಲವರೊಂದಿಗೆ ಸೇರಿ ಕ್ಯೂಆರ್ ಕೋಡ್ ಅನ್ನು ಯಶಸ್ವಿಯಾಗಿ ರೂಪಿಸಿದರು. ಬೈಕ್ ತಡೆದು ಹಣ ವಸೂಲಿಗೆ ನಿಂತ ಕಾನ್ಸ್ ಟೇಬಲ್ - ರೆಡ್ ಹ್ಯಾಂಡ್ ವಿಡಿಯೋ ಸಾಕ್ಷಿ ವೈರೆಲ್
ಕ್ಯೂಆರ್ ಕೋಡ್‌ಗೆ ಪೇಟೆಂಟ್ ಯಾಕಿಲ್ಲ?
ಡೆನ್ಸೋ ವೇವ್ ಕಂಪನಿಯು ಈ ಕ್ಯೂಆರ್ ಕೋಡ್ ತಂತ್ರಜ್ಞಾನ ಇಷ್ಟು ವ್ಯಾಪಕವಾಗಿ ಬಳಕೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದ್ದರಿಂದ, ಈ ಟೆಕ್ನಾಲಜಿಯನ್ನು ಸಾರ್ವಜನಿಕವಾಗಿ ಉಚಿತವಾಗಿ ಲಭ್ಯವಿರುವಂತೆ ಮಾಡಿತು. ಆದರೆ, ಕ್ಯೂಆರ್ ಕೋಡ್ ಅನ್ನು ಓದಲು ಬೇಕಾಗುವ ಸ್ಕ್ಯಾನರ್ ತಂತ್ರಜ್ಞಾನವನ್ನು ಮಾತ್ರ ಕಂಪನಿಯು ಮಾರಾಟ ಮಾಡಿತು.