Skip to main content
ವಿಡಿಯೋ
1/3
general

ಹುಲಿ ದಾಳಿ: ತಿಂಗಳಲ್ಲಿ ಮೂರು ಜನರ ಬಲಿ ಪಡೆದ ವ್ಯಾಘ್ರನನ್ನು ಹಿಡಿಯಿರಿ - ರೈತರ ಆಕ್ರೋಶ!

By Shravanthi R
ಹುಲಿ ದಾಳಿ: ತಿಂಗಳಲ್ಲಿ ಮೂರು ಜನರ ಬಲಿ ಪಡೆದ ವ್ಯಾಘ್ರನನ್ನು ಹಿಡಿಯಿರಿ -  ರೈತರ ಆಕ್ರೋಶ!

ವನ್ಯಜೀವಿ ಮಾನವ ಸಂಘರ್ಷಕ್ಕೆ ಕೊನೆಯಿಲ್ಲವೆಂಬಂತೆ, ಮೈಸೂರಿನ ಸರಹದ್ದಿನಲ್ಲಿ ಹುಲಿ ದಾಳಿಯು ದಿನದಿಂದ ದಿನ ನಡುಕ ಹುಟ್ಟಿಸುತ್ತಿರುವುದು ವರದಿಯಾಗಿದೆ. ಹುಲಿ ಸೆರೆಹಿಡಿಯಬೇಕು ಹಾಗೂ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ರೈತರು ಶಾಸಕರ ಮೊರೆ ಹೋಗಿದ್ದಾರೆ.

ಮೈಸೂರು: ಇಲ್ಲಿನ ಸರಗೂರು ಪ್ರದೇಶದಲ್ಲಿ ಮನೆ ಮಾಡಿಕೊಂಡಿರುವ ಹುಲಿರಾಯನನ್ನು ಹಿಡಿಯಿರಿ ಎಂದು ರೈತರು ಪಟ್ಟುಹಿಡಿದಿದ್ದಾರೆ. ದಿನೇ ದಿನೇ ಹುಲಿಯಾಗಮನದಿಂದ ನಮ್ಮ ನಿದ್ದೆಗೆಟ್ಟಿದೆ. ಬೆಳೆದ ಬೆಳೆಯು ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಲಿದೆ. ದಾಳಿಯಿಂದ ಮೃತರಾದವರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕೆಂದು ಅವರು ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. 

ಸರಗೂರಿನಲ್ಲಿ ದಾಳಿ ಮಾಡಿರುವ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದಿಲ್ಲ. ರೈತರ ಕಣ್ಣು ಒರೆಸುವ ಕೆಲಸ ಮಾಡಲಾಗುತ್ತಿದೆ. ಕಾಡುಪ್ರಾಣಿ ಹಾವಳಿ ಹೆಚ್ಚಾಗಿದೆ, ಜಮೀನಿಗೆ ತೆರಳಲು ಭಯಭೀತರಾಗಿದ್ದೇವೆ ಎಂದು ರೈತರು ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. iQOO Z10 Lite 5G (Cyber Green, 6GB RAM, 128GB Storage) | 6000 mAh Battery | Dimensity 6300 5G Processor with 433K+* AnTuTu Score | IP64 Rated & Military Grade Shock-Resistance*

ನಾವು ಬೆಳೆದ ಫಸಲು ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಿದೆ. ಅರಣ್ಯ ಇಲಾಖೆಯವರು, ರೈತರ ಮೇಲೆ ಪ್ರಾಣಿ ದಾಳಿ ಆಗದ ರೀತಿಯಲ್ಲಿ ಕೆಲಸ ಮಾಡಬೇಕು. ಅರಣ್ಯ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ. ಹುಲಿ ಹಿಡಿಯಲು ಕಾರ್ಯಾಚರಣೆ ಮಾಡಬೇಕು. ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರೇ**ಪಿಸ್ಟ್ ಉಮೇಶ್ ರೆಡ್ಡಿ, ರನ್ಯಾ ಪ್ರಿಯಕರ ತರುಣ್‌ ಬಿಂದಾಸ್‌ ಲೈಫ್‌!