ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಇಂದು ದೇವಿ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಜರುಗಲಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರ ಪ್ರತಿಭೆ, ಧೈರ್ಯಸಂಕಲ್ಪ ಹಾಗೂ ಸೃಜನತೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿದಾಗಿದೆ ಎನ್ನಲಾಗಿದೆ.
35ನೇ ಆವೃತ್ತಿಯ ದೇವಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕ್ಷೇತ್ರಗಳಿಂದ 11 ಮಹಿಳಾ ಸಾಧಕಿಯರನ್ನು ಪುರಸ್ಕರಿಸಲಾಗುತ್ತಿದೆ. ಅವರು ತಮ್ಮ ಅತ್ಯುತ್ತಮ ಕೆಲಸ, ವೃತ್ತಿಪರ ಕಾರ್ಯಸಾಧನೆ ಮತ್ತು ಮನ್ನಣೆಯನ್ನು, ಸಮುದಾಯಗಳನ್ನು ರೂಪಿಸುವ, ಸಮಾಜದಲ್ಲಿ ಅಡೆತಡೆಗಳನ್ನು ನಿವಾರಿಸಿ ಮುನ್ನುಗ್ಗಿರುವ, ಹಾಗೂ ಚೈತನ್ಯ, ನವೀನ ಕೌಶಲ್ಯಗಳ ಮೂಲಕ ಬದಲಾವಣೆಗೆ ಪ್ರೇರಪಿಸುವುದನ್ನು ಮನಗಂಡು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. Redmi A4 5G (Starry Black, 4GB RAM, 128GB Storage) | Segment Largest 6.88in 120Hz | 50MP Dual Camera | 18W Fast Charging | Charger in The Box
ಪ್ರಶಸ್ತಿಗೆ ಭಾಜನರಾಗುತ್ತಿರುವವರು -
ಕ್ರೀಡಾ ಮಾಜಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ನಟಿ ಶ್ರದ್ದಾ ಶ್ರೀನಾಥ್, ಲೇಖಕಿ ಅನಿತಾ ನಾಯರ್, ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಗುರುತಿಸಲಾದ ಒಟ್ಟು 11 ಪ್ರಮುಖ ಮಹಿಳಾ ಮಣಿಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಹುಲಿ ದಾಳಿ: ತಿಂಗಳಲ್ಲಿ ಮೂರು ಜನರ ಬಲಿ ಪಡೆದ ವ್ಯಾಘ್ರನನ್ನು ಹಿಡಿಯಿರಿ - ರೈತರ ಆಕ್ರೋಶ!