Skip to main content
ವಿಡಿಯೋ
1/3
politics

ಬಿಹಾರ ಚುನಾವಣೆ: ಕಿಶನ್‌ಗಂಜ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಯುವಕರಿಗೆ ಉದ್ಯೋಗದ ಕರೆ..!

By Sushmitha R
ಬಿಹಾರ ಚುನಾವಣೆ: ಕಿಶನ್‌ಗಂಜ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಯುವಕರಿಗೆ ಉದ್ಯೋಗದ ಕರೆ..!

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರದ ಕೊನೆಯ ದಿನವಾದ ನವೆಂಬರ್ 6 ರಂದು, ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ವಿರೋಧ ನಾಯಕ ರಾಹುಲ್ ಗಾಂಧಿ ಸೀಮಾಂಚಲ ಪ್ರದೇಶದ ಕಿಶನ್‌ಗಂಜ್‌ನ ಬಹಾದುರ್‌ಗಂಜ್‌ನಲ್ಲಿ ಜನರನ್ನು ಉದ್ದೇಶಿಸಿ ಭರ್ಜರಿ ರ್ಯಾಲಿಯನ್ನು ನಡೆಸಿದರು.

ಭಾರೀ ಜನಸಂಖ್ಯೆ ಮಧ್ಯೆ ಮಾತನಾಡಿದ ರಾಹುಲ್, ಬಿಜೆಪಿಯ ಸಾಮಾಜಿಕ ಮಾಧ್ಯಮ ತಂತ್ರವನ್ನು ತೀವ್ರವಾಗಿ ಟೀಕಿಸುತ್ತಾ, ಬಿಹಾರಕ್ಕೆ ಇನ್‌ಸ್ಟಾಗ್ರಾಮ್ ಅಥವಾ ಟ್ವಿಟರ್ ಅಲ್ಲ, ಉದ್ಯೋಗ ಬೇಕು ಎಂದು ಕಿಡಿ ಕಾರಿದರು. ಯುವಕರನ್ನು ರೀಲ್ಸ್ ಮಾಡುವಲ್ಲಿ ಮುಳುಗಿಸಿ, ಅವರನ್ನು ಪ್ರಶ್ನೆಗಳಿಂದ ದೂರವುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಆರೋಪಿಸಿದರು.Jwalin Women's Chinon Silk Embroidered Kurta and Pant Set with Dupatta|Kurta Set for Women|Ethnic Set|Kurti Set

ರ್ಯಾಲಿಯಲ್ಲಿ ರಾಹುಲ್ ಗಾಂಧಿ ಬಿಹಾರದ ಯುವಕರ ಭವಿಷ್ಯದ ಬಗ್ಗೆ ಆಳವಾಗಿ ಮಾತನಾಡಿದರು. ಮೊಬೈಲ್‌ಗಳ ಮೇಲೆ 'ಮೇಡ್ ಇನ್ ಚೈನಾ' ಬದಲು 'ಮೇಡ್ ಇನ್ ಬಿಹಾರ್' ಬರಲಿ ಎಂದು ನಾನು ಬಯಸುತ್ತೇನೆ.

ಕಳೆದ 20 ವರ್ಷಗಳಲ್ಲಿ ನೀತಿಶ್ ಕುಮಾರ್ ಅವರು ಎಷ್ಟು ಫುಡ್ ಪ್ರಾಸೆಸಿಂಗ್ ಯೂನಿಟ್‌ಗಳನ್ನು ಸ್ಥಾಪಿಸಿದ್ದಾರೆ? ಅಮಿತ್ ಶಾ ಅವರು ಹಂತದಿಂದ ಸುಳ್ಳು ಹೇಳುತ್ತಾರೆ, ಬಿಹಾರದಲ್ಲಿ ಫ್ಯಾಕ್ಟರಿಗಳಿಗೆ ಜಮೀನು ಇಲ್ಲ ಎಂದು. ಬಿಹಾರದಲ್ಲಿ ಜಮೀನು ಕೊರತೆ ಇಲ್ಲ.ಇದನ್ನು ಓದಿ: ಯೋಗಗುರು ನಿರಂಜನ್ ಮೂರ್ತಿ ಕಾಮಕಾಂಡ ಅಗೆದಷ್ಟು ಬಯಲು; ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಅದಾನಿಗೆ ಬೇಕಾದಷ್ಟು ಜಮೀನು ಒಂದು ಎಕರೆಗೆ ರೂ1 ಕ್ಕೆ ನೀಡಲು ಬಿಹಾರ ಸರ್ಕಾರ ಸಿದ್ಧ ಎಂದು ಅವರು ಆರೋಪಿಸಿದರು. ನೀತಿಶ್ ಕುಮಾರ್ ಸರ್ಕಾರ ಯುವಕರನ್ನು ಕಾರ್ಮಿಕರಾಗಿ ಮಾಡಿ, ಉದ್ಯೋಗ ಅವಕಾಶಗಳನ್ನು ನಾಶಪಡಿಸಿದೆ ಎಂದು ಟೀಕಿಸಿದರು.ಇದನ್ನು ಓದಿ: ಖ್ಯಾತ ಶಾಲೆಯಲ್ಲಿ ಭೀತಿ ಸೃಷ್ಟಿಸಿದ ರ್ಯಾಗಿಂಗ್; 13 ವರ್ಷದ ಬಾಲಕನ ಮೇಲೆ ಮೂವರ ಹಿಂಸಾತ್ಮಕ ಹಲ್ಲೆ!