ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಬಳಿ ಕೆಲ ಮುಸ್ಲೀಂಮರ ಗುಂಪು ಸೇರಿ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವಿರೋಧ ಪಕ್ಷವು, ಘಟನೆ ಕುರಿತು ಟೀಕಿಸಿ, ಪ್ರಶ್ನಿಸಲಾಗಿದೆ ಎಂದು ವರದಿ ತಿಳಿಸಿದೆ. ಅತ್ಯಂತ ಭದ್ರತಾ ಪ್ರದೇಶವಾಗಿರುವ ಈ ಭಾಗದಲ್ಲಿ ಈ ಘಟನೆಗೆ ಸರ್ಕಾರವು ಹೇಗೆ ಸಮ್ಮತಿ ಸೂಚಿಸಿದೆ ಎಂದು ಹೇಳಲಾಗಿ, ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರವು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುತ್ತಿದೆ. ಆದರೆ, ಹೆಚ್ಚಿನ ಭದ್ರತೆ ಇರುವ ಈ ಸೂಕ್ಷ್ಮ ಪ್ರದೇಶ ನಮಾಜ್ ಮಾಡಿದ್ದು ಸರಿಯೇ? ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಲಾಗಿದೆ. ಇದನ್ನು ರಾಜ್ಯ ಸರ್ಕಾರವು ಕಂಡು ಕಾಣದಂತೆ ಕುಳಿತಿದೆ ಎಂದು ಟೀಕಿಸಲಾಗಿದೆ ಎನ್ನಲಾಗಿದೆ. OnePlus Nord CE4 (Dark Chrome, 8GB RAM, 128GB Storage) | Lifetime Display Warranty | Qualcomm® Snapdragon™ 7 Gen 3 - Best in The Segment | 50 MP Camera with OIS
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರವು, ಸಾರ್ವಜನಿಕ ಪ್ರದೇಶಗಳಲ್ಲಿ ಪೂರ್ವಾನುಮತಿಯನ್ನು ಆರ್‌ಎಸ್‌ಎಸ್ ಸಂಬಧಿತ ಅಧಿಕಾರಿಗಳಿಂದ ಪಡೆದುಕೊಂಡಿದ್ದರೂ ಸಹ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಸರ್ಕಾರಕ್ಕೆ, ಇಂತಹ ಸೂಕ್ಷ್ಮ ವಲಯದ ಪ್ರದೇಶದಲ್ಲಿ ಭದ್ರತಾ ಕಾಳಜಿಯನ್ನು ನಿರ್ಲಕ್ಷಿಸಿಲಾದೀತೆ? ಎಂದು ಅಹವಾಲು ಕೇಳಿಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ: ನಾಳೆ ಎರಡನೇ ಹಾಗೂ ಕೊನೆಯ ಹಂತದ ಮತದಾನ!