ನವದೆಹಲಿ - ಹೂಡಿಕೆದಾರರು ಸಾಮಾನ್ಯವಾಗಿ ಮಾಡುವ ದೊಡ್ಡ ತಪ್ಪುಮಾರುಕಟ್ಟೆ ಕುಸಿದಾಗ SIP ಶುರು ಮಾಡಬೇಕು ಎಂದು ಕಾಯುವುದು. ಆದರೆ, ಹೊಸ ವರದಿಯೊಂದು ಈ ನಂಬಿಕೆಯನ್ನು ತಲೆಕೆಳಗು ಮಾಡಿದೆ. ಹೂಡಿಕೆದಾರರ ದೊಡ್ಡ ಗೆಲುವಿಗೆ ಮಾರುಕಟ್ಟೆಯ ಸಮಯ ಮುಖ್ಯವಲ್ಲ . ಬದಲಿಗೆ ಆರಂಭಿಕ ಹೂಡಿಕೆ ಮಾತ್ರ ಮುಖ್ಯ ಎಂದು ವರದಿ ಹೇಳಿದೆ.
ಮಾರುಕಟ್ಟೆ ಚಕ್ರ ಮುಖ್ಯವಲ್ಲ ವರದಿ ಹೇಳುವುದೇನು?
WhiteOak Capital ಹೊರಡಿಸಿರುವ ಈ ವರದಿಯು SIP ಕುರಿತು ಒಂದು ರೋಚಕ ಸತ್ಯವನ್ನು ಬಹಿರಂಗಪಡಿಸಿದೆ. ಮಾರುಕಟ್ಟೆ ಚಕ್ರದ ಉತ್ತುಂಗದಲ್ಲಿದ್ದಾಗ SIP ಶುರು ಮಾಡಿದ ಹೂಡಿಕೆದಾರರು, ಮಾರುಕಟ್ಟೆ ಕನಿಷ್ಠ ಮಟ್ಟದಲ್ಲಿದ್ದಾಗ ಶುರು ಮಾಡಿದವರಿಗಿಂತ ಹೆಚ್ಚು ಸಂಪತ್ತು ಗಳಿಸಿದ್ದಾರೆ. ಕಡಿಮೆ ಮಟ್ಟದಲ್ಲಿ ಶುರು ಮಾಡಿದವರಿಗೆ ಶೇಕಡಾವಾರು ಆದಾಯವು ಸ್ವಲ್ಪ ಹೆಚ್ಚಿದ್ದರೂ, ನಿವ್ವಳ ಲಾಭದ ಮೊತ್ತ ಮಾತ್ರ ಬೇಗ ಶುರು ಮಾಡಿದವರಿಗೆ ಹೆಚ್ಚು ಸಿಕ್ಕಿದೆ. ಬಸ್‌ಗಳು ಸಾರ್ವಜನಿಕ ಸಾರಿಗೆಯ ಜೀವನಾಡಿ – ಆದರೆ ರಾತ್ರಿ ಸೇವೆಗಳಿಗೆ ಯಾಕೆ ನಿಯಂತ್ರಣದಲ್ಲಿರುವ ರಹದಾರಿ ಒದಗಿಸಲಿಲ್ಲಾ.?!
ದೊಡ್ಡ ಲಾಭದ ಮಂತ್ರ ವಿಳಂಬದ ವೆಚ್ಚ
ಮಾರುಕಟ್ಟೆ ಕುಸಿಯಲಿ ಎಂದು ಕಾಯುವುದರಿಂದ ದೀರ್ಘಾವಧಿಯಲ್ಲಿ ಆಗುವ ನಷ್ಟವನ್ನು ವರದಿ ವಿಳಂಬದ ವೆಚ್ಚ ಎಂದು ಕರೆದಿದೆ. ನೀವು ಎಷ್ಟು ಬೇಗ ಹೂಡಿಕೆ ಶುರು ಮಾಡುತ್ತೀರೋ, ನಿಮ್ಮ ಹಣ ಅಷ್ಟು ಹೆಚ್ಚು ಸಮಯ ಮಾರುಕಟ್ಟೆಯಲ್ಲಿ ಇರುತ್ತದೆ. ದೀರ್ಘಾವಧಿಯವರೆಗೆ ಚಕ್ರಬಡ್ಡಿಯ ಶಕ್ತಿ ಕೆಲಸ ಮಾಡಲು ಹೆಚ್ಚು ಅವಕಾಶ ಸಿಗುತ್ತದೆ. ಮಾರುಕಟ್ಟೆಯ ಟಾಪ್ ಅಥವಾ ಬಾಟಮ್ ಅನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ. ಮಾರುಕಟ್ಟೆ ಕುಸಿಯಲಿ ಎಂದು ಕಾಯುವ ಪ್ರತಿ ದಿನವೂ ನಿಮ್ಮ ಸಂಪತ್ತು ಸೃಷ್ಟಿಯ ಸಮಯವನ್ನು ಕಸಿದುಕೊಳ್ಳುತ್ತದೆ.
2008 ವರ್ಸಸ್ 2009 - ಉದಾಹರಣೆ ಸಮೇತ ವಿಶ್ಲೇಷಣೆ
ಕಳೆದ 28 ವರ್ಷಗಳ BSE SENSEX TRI ದತ್ತಾಂಶದ ಆಧಾರದ ಮೇಲೆ 10,000 ರೂ ಮಾಸಿಕ SIP ಹೂಡಿಕೆಯ ಫಲಿತಾಂಶ ಇಲ್ಲಿದೆ.
ಹೂಡಿಕೆದಾರ SIP ಆರಂಭ ದಿನಾಂಕ ಮಾರುಕಟ್ಟೆ ಸ್ಥಿತಿ ಹೂಡಿಕೆಯ ಒಟ್ಟು ಮೊತ್ತ ಇಂದಿನ ಮೌಲ್ಯ (ಅಂದಾಜು) ಹೆಚ್ಚುವರಿ ಲಾಭ
A ಎಂಬ ಹೂಡಿಕೆದಾರ ಜನವರಿ 2008 ರಂದು ಮಾರುಕಟ್ಟೆ ಉತ್ತುಂಗ 21.40 ಲಕ್ಷ ರೂ. ಒಟ್ಟು ಹೂಡಿಕೆ ಮೊತ್ತ ಆಗಿದು ನಿರಂತರ ಹೂಡಿಕೆ ಬಳಿಕ ಅದು79.43 ಲಕ್ಷ ರೂ. ಆಗುತ್ತದೆ. ಹಾಗೇ 11.36 ಲಕ್ಷ ರೂ. ಹೆಚ್ಚುವರಿ ಗಳಿಕೆ ಆಗಿರುತ್ತದೆ. INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)
B ಎಂಬ ವ್ಯಕ್ತಿ ಮಾರ್ಚ್ 2009 ರಿಂದ ಮಾರುಕಟ್ಟೆಯಲ್ಲಿ ಕನಿಷ್ಠ 20.00 ಲಕ್ಷ ರೂ ಹಾಕಿ ಅದಕ್ಕೆ 68.07 ಲಕ್ಷ ರೂ ರಿಟರ್ನ್ ಬರಲಿದೆ.
ಮಾರುಕಟ್ಟೆ ಕುಸಿಯುವವರೆಗೆ ಕಾದು ಹೂಡಿಕೆದಾರರಿಗಿಂತ, 14 ತಿಂಗಳು ಮೊದಲು ಉತ್ತುಂಗದಲ್ಲಿ ಹೂಡಿಕೆ ಶುರು ಮಾಡಿದ ಹೂಡಿಕೆದಾರರು 11.36 ಲಕ್ಷ ರೂ. ಅಧಿಕ ಲಾಭ ಗಳಿಸಿದರು. SIP ವಿಷಯಕ್ಕೆ ಬಂದಾಗ ಮಾರುಕಟ್ಟೆಯ ಸಮಯ ನೋಡುವ ಬದಲು ಕೂಡಲೇ ಪ್ರಾರಂಭಿಸುವ ನಿರ್ಧಾರ ತೆಗೆದುಕೊಳ್ಳಿ. ಅದುವೇ ದೀರ್ಘಾವಧಿಯ ಸಂಪತ್ತು ಸೃಷ್ಟಿಯ ಏಕೈಕ ರಹಸ್ಯ.