ಬೆಂಗಳೂರು - ಭಾರತದಲ್ಲಿ 1.47 ಲಕ್ಷ ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಮತ್ತು 1.79 ಲಕ್ಷ ಕಿಲೋಮೀಟರ್ ರಾಜ್ಯ ಹೆದ್ದಾರಿಗಳು ಸೇರಿ ಒಟ್ಟು 63 ಲಕ್ಷ ಕಿಲೋಮೀಟರ್ ರಸ್ತೆ ಜಾಲವಿದೆ. ಪ್ರಪಂಚದಲ್ಲೇ ಅತಿ ದೊಡ್ಡ ರಸ್ತೆ ಜಾಲ ಹೊಂದಿರುವ ದೇಶ ಎಂಬ ಹೆಮ್ಮೆಯಿದೆ. ಆದರೆ ಈ ಹೆದ್ದಾರಿಗಳಲ್ಲಿ ಪ್ರತಿದಿನ ಕೋಟ್ಯಾಂತರ ಜನರ ಜೀವನ ಓಡಾಡುತ್ತಿದೆ.
ಅವರಲ್ಲಿ ಬಹುತೇಕರು ಬಸ್ಸುಗಳ ಮೂಲಕ ಸಂಚರಿಸುತ್ತಾರೆ. ವಿಶೇಷವಾಗಿ ರಾತ್ರಿ ಸೇವೆ ನೀಡುವ ಲಕ್ಸುರಿ ಬಸ್ಸುಗಳು ರೈಲು ಅಥವಾ ವಿಮಾನ ಸೌಲಭ್ಯವಿಲ್ಲದ ಹಳ್ಳಿಗಳನ್ನು, ಪಟ್ಟಣಗಳನ್ನು ನಗರಗಳಿಗೆ ಸಂಪರ್ಕಿಸುವ ಜೀವನಾಡಿಯಂತಿವೆ. ಆದರೆ, ಸಾರ್ವಜನಿಕರ ಜೀವನಾಡಿ ನಿಯಂತ್ರಣರಹಿತವಾಗಿ ಹರಿಯುತ್ತಿರುವುದು ಆತಂಕಕಾರಿ ಸಂಗತಿ. ಬಿಹಾರ ವಿಧಾನಸಭಾ ಚುನಾವಣೆ: ನಾಳೆ ಎರಡನೇ ಹಾಗೂ ಕೊನೆಯ ಹಂತದ ಮತದಾನ!
ರಾತ್ರಿ ಬಸ್‌ಗಳ ಸಂಚಾರಕ್ಕೆ ಸಮಗ್ರ ಕಾನೂನು ಚೌಕಟ್ಟೇ ಇಲ್ಲ. ಬಸ್ಸುಗಳು ಎಷ್ಟು ದೂರದ ನಂತರ ನಿಲ್ಲಬೇಕು, ಚಾಲಕರು ಎಷ್ಟು ಗಂಟೆಗಳ ಕಾಲ ನಿರಂತರವಾಗಿ ವಾಹನ ಚಲಾಯಿಸಬಹುದು. ಹೆದ್ದಾರಿಗಳ ಬದಿಯಲ್ಲಿ ಸುರಕ್ಷಿತ ಪಾರ್ಕಿಂಗ್ ಸ್ಥಳ ಇರಬೇಕೇ ಎಂಬ ವಿಷಯಗಳಲ್ಲಿ ಯಾವುದೇ ಸ್ಪಷ್ಟ ಮಾರ್ಗಸೂಚಿ ಇಲ್ಲ. ಸ್ಲೀಪರ್ ಬಾಡಿ ಕೋಡ್, GPS, ವೇಗ ನಿಯಂತ್ರಣ ಸಾಧನಗಳು ಇದ್ದರೂ, ರಾತ್ರಿ ಬಸ್ ಸೇವೆಗಳಿಗೆ ಸಮಗ್ರ ನಿಯಂತ್ರಣಾತ್ಮಕ ನೀತಿ ಇಲ್ಲದಿರುವುದು ದೊಡ್ಡ ವೈಪರಿತ್ಯ, ರೈಲುಗಳಿಗೆ ಕಾನೂನುಬದ್ಧ ನಿಯಮಗಳಿವೆ. ಸರ್ಕಾರಿ ಸಾರಿಗೆ ಸಂಸ್ಥೆಗಳಿಗೂಮಾರ್ಗಸೂಚಿಗಳಿವೆ.
ಆದರೆ ಜನಸಂಖ್ಯೆಯ ಬಹುಪಾಲು ಜನರು ರಾತ್ರಿ ಪ್ರಯಾಣಿಸುವ ಖಾಸಗಿ ಲಕ್ಸುರಿ ಬಸ್ಸುಗಳಿಗೆ ಅಧಿಕೃತವಾಗಿ ಯಾವುದೇ ಸರ್ಕಾರಿ ರಹದಾರಿಅಥವಾ ನಿಯಂತ್ರಣ ಪ್ರಕ್ರಿಯೆ ಅಸ್ತಿತ್ವದಲ್ಲೇ ಇಲ್ಲ. ಪ್ರವಾಸಿ ರಹದಾರಿಯಲ್ಲಿ ರಾತ್ರಿಯ ಸೇವೆ ಒದಗಿಸುವುದೆ ? ಸ್ಟೇಜ್ ಕೇರೆಜ್ ರಹದಾರಿಯೇ? ಟೂರಿಸ್ಟ್ ರಿಗೆ ರಾತ್ರಿ ಪ್ರಯಾಣ ಮಾಡುವ ಪ್ರಾಮಾಣಿಕರಿಗೆ ಇರುವ ವ್ಯತ್ಯಾಸ ಏನೂ? ರಾತ್ರಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರ ಬಸ್‌ಗಳಿಗೆ ರಹದಾರಿ ಯಾಕೆ ಇಲ್ಲ? ಕೇಂದ್ರ ಸಚಿವಾಲಯಕ್ಕೆ ಇದು ತಿಳಿದಿಲ್ಲಾವೇ? INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)
ಇಷ್ಟು ವರ್ಷಗಳಿಂದ ಸೇವೆ ನೀಡುತ್ತಾ ಕೋಟ್ಯಾಂತರ ಜನರನ್ನು ಹೊತ್ತೊಯ್ಯುತ್ತಿರುವ ಬಸ್ಸುಗಳಿಗೆ ಇನ್ನೂ ಅಧಿಕೃತ ಮಾರ್ಗಪತ್ರ ನೀಡದಿರುವುದು ನಿರ್ಲಕ್ಷ್ಯದ ಶ್ರೇಷ್ಠ ಉದಾಹರಣೆ. ಹಗಲು ಕನಸು ಕಾಣುವುದು ಸುಲಭ . ಆದರೆ ರಾತ್ರಿ ಪ್ರಯಾಣಿಕರ ಸುರಕ್ಷತೆಯ ಕನಸು ಕಾಣುವುದು ಸರ್ಕಾರದ ಕರ್ತವ್ಯವಲ್ಲವೆ?
ಕಳೆದ ಹಲವಾರು ವರ್ಷಗಳಿಂದ ಸಂಸತ್ತಿನಲ್ಲಿ ಈ ವಿಷಯ ಚರ್ಚೆಗೆ ಬಂದರೂ, ರಾತ್ರಿ ಪ್ರಯಾಣಿಕರ ಸುರಕ್ಷತೆ, ದರನಿಗದಿ, ಚಾಲಕರ ವಿಶ್ರಾಂತಿ, ನಿಲ್ದಾಣ ವ್ಯವಸ್ಥೆ ಇತ್ಯಾದಿಗಳ ಕುರಿತು ಯಾವುದೇ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ. ಒಂದೊಂದು ರಾಜ್ಯಗಳಲ್ಲಿ ಸಾವಿರಾರು ಬಸ್ಸುಗಳು ಸರ್ಕಾರದ ನೋಟದಲ್ಲೇ ನಿಯಂತ್ರಣವಿಲ್ಲದೆ ಓಡುತ್ತಿವೆ ಮತ್ತು ಇದು ಅರೆ ಶತಮಾನದಿಂದ ನಡೆಯುತ್ತಿದೆ!
ಬಸ್ ಉದ್ಯಮವು ಈಗ ದೊಡ್ಡ ಉದ್ಯಮಿಗಳು, ವಿದ್ಯಾಸಂಸ್ಥೆಗಳ ಮಾಲೀಕರು, ಸಕ್ಕರೆ ಕಾರ್ಖಾನೆ ಮಾಲೀಕರು, ವೈದ್ಯಕೀಯ ಕಾಲೇಜುಗಳ ಹಿನ್ನಲೆ ಹೊಂದಿದ ಶಕ್ತಿಶಾಲಿ ವಲಯಗಳಂತೆ ಫೈನಾನ್ಷಿಯಲ್ ಸೆಕ್ಯೂರ್ ಆಗಿರುವ ವ್ಯಕ್ತಿಗಳ ಕೈಯಲ್ಲಿದೆಯೇ ಎನ್ನುವ ಅನುಮಾನ ಜನಸಾಮಾನ್ಯರಲ್ಲಿ ಬರುತ್ತದೆ. https://amzn.in/d/1P8nXhX
ಹೀಗಾಗಿ ಸರ್ಕಾರಗಳು ಸಾವಿರಾರೂ ವಾಹನಗಳು ಸೇವೆ ಒದಗಿಸುವಾಗ ನಿಯಂತ್ರಣ ಹೇರದೆ ಕೈಕಟ್ಟಿ ಕೂತಿರುವುದು ಆರೋಪವಲ್ಲವೇ?
ಅಪಘಾತಗಳು ಸಂಭವಿಸಿದಾಗ ಮಾತ್ರ ಚರ್ಚೆಗಳು ಎದ್ದುಕೊಳ್ಳುತ್ತವೆ. ಆದರೆ ಪ್ರತಿದಿನ ಲಕ್ಷಾಂತರ ಜೀವಗಳನ್ನು ಹೊತ್ತೊಯ್ಯುವ ಈ ಬಸ್ ಸಾರಿಗೆ ವ್ಯವಸ್ಥೆ ನಿಯಂತ್ರಣವಿಲ್ಲದೆ ಸಾಗುತ್ತಿರುವುದು ದುರಂತಕರ ಸತ್ಯ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸುರಕ್ಷಿತ ನಿಲುಗಡೆ ಕೇಂದ್ರಗಳು, ಚಾಲಕರಿಗೆ ಕಡ್ಡಾಯ ವಿಶ್ರಾಂತಿ ಅಂತರಗಳು, ಪ್ರಯಾಣಿಕರ ವಿಮಾ ರಕ್ಷಣಾ ಕ್ರಮಗಳು ಇವುಗಳನ್ನು ತಕ್ಷಣ ಜಾರಿಗೆ ತರುವ ಅಗತ್ಯವಿದೆ. ಜನರ ಸುರಕ್ಷತೆಗಾಗಿ ದೂರ ಪ್ರಯಾಣ ಬಸ್ಸುಗಳಿಗೆ ಸಮಗ್ರ ಕಾನೂನು ಚೌಕಟ್ಟು ರೂಪಿಸುವುದು ಕೇಂದ್ರ ಸಾರಿಗೆ ಸಚಿವಾಲಯದ ತುರ್ತು ಕರ್ತವ್ಯವಾಗಿದೆ. ರಸ್ತೆ ಜಾಲದ ದೊಡ್ಡತನದ ಬಗ್ಗೆ ಹೆಮ್ಮೆ ಪಡುವ ಮೊದಲು, ಆ ರಸ್ತೆಯಲ್ಲಿ ಸಂಚರಿಸುವ ಜನರ ಜೀವಭದ್ರತೆ , ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿತ್ತು. ಬಿಹಾರ ಚುನಾವಣೆ: ಕಿಶನ್‌ಗಂಜ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಯುವಕರಿಗೆ ಉದ್ಯೋಗದ ಕರೆ..!
ರಾತ್ರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡುವ ಬಸ್ಸುಗಳು ಲಕ್ಷಾಂತರ ಜನರ ಆಶಯ, ಆದರೆ ನಿಯಂತ್ರಣವಿಲ್ಲದ ಈ ಸಂಚಲನವು ಅಪಾಯದ ದಾರಿ. ಹಗಲು ಕನಸು ಕಾಣುವುದು ಯಾರೂ, ಆದರೆ ರಾತ್ರಿ ಪ್ರಯಾಣ ಸುರಕ್ಷಿತವಾಗಿರಲಿ ಎಂಬ ಕನಸು ಕಾಣುವವರು ಯಾರು? . ಈ ಪ್ರಶ್ನೆಗೆ ಉತ್ತರ ನೀಡಬೇಕಾದ ಹೊಣೆ ಸರ್ಕಾರದ್ದಲ್ಲವೇ?