Skip to main content
ವಿಡಿಯೋ
1/3
general

ಬಂಧಿತ ವೈದ್ಯ ನೀಡಿದ ಸುಳಿವಿನ ಮೇರೆಗೆ 300 RDX, ಎಕೆ 47 ಗನ್‌ ವಶಕ್ಕೆ!

By Shravanthi R
ಬಂಧಿತ ವೈದ್ಯ ನೀಡಿದ ಸುಳಿವಿನ ಮೇರೆಗೆ 300 RDX, ಎಕೆ 47 ಗನ್‌ ವಶಕ್ಕೆ!

ಜಮ್ಮು ಕಾಶ್ಮೀರದ ಪೋಲಿಸರಿಂದ ಅಪರಾಧಿ ವೈದ್ಯರಿಗೆ ಸಂಬಂಧಿತ ಸ್ಪೋಟಕ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ನ್ಯಾಷನಲ್‌ ಕ್ಯಾಪಿಟಲ್‌ ರೀಜನ್‌ ವ್ಯಾಪ್ತಿಯಲ್ಲಿರುವ ಫರಿದಾಬಾದ್‌ನಲ್ಲಿ, ಬಂಧಿತ ಕಾಶ್ಮೀರಿ ವೈದ್ಯ ನೀಡಿದ ಮಾಹಿತಿ ಪ್ರಕಾರ, 300 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್, ಒಂದು ಎಕೆ -47 ರೈಫಲ್ ಮತ್ತು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಜಮ್ಮು ಕಾಶ್ಮೀರ ಪೋಲಿಸರು ವಶಪಡಿಸಿಕೊಂಡಿದ್ದಾರೆಂದು ವರದಿ ತಿಳಿಸಿದೆ. 

ಇದರಿಂದಾಗಿ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದ್ದು, ಸ್ಪೋಟಕಗಳನ್ನು ಸೀಜ್‌ ಮಾಡಿಕೊಂಡಿರುವುದಾಗಿ ಮಾಹಿತಿ ಒದಗಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ವೈದ್ಯನಿಗೆ ಸೇರಿರುವ ಲಾಕರ್‌ನಿಂದ ಎಕೆ -47 ರೈಫಲ್ ಮತ್ತು ದೊಡ್ಡ ಪ್ರಮಾಣದ ಇತರ ಮದ್ದುಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಡಾ. ಆದಿಲ್‌ ಅಹ್ಮದ್‌ ರಾಥರ್‌ ನೀಡಿದ ಮಾಹಿತಿ ಮೇರೆಗೆ ಈ ವಿಷಯ ತಿಳಿದುಬಂದಿದೆ ಎನ್ನಲಾಗಿದೆ. iQOO Z10R 5G (Moonstone, 8GB RAM, 128GB Storage) | 32MP 4K Selfie Camera | Quad-Curved AMOLED Display | Dimensity 7400 Processor with 750K+ AnTuTu

ಶಕೀಲ್ ಅಹ್ಮದ್ ಗನೈ ಅವರ ಪುತ್ರ ಮುಜಾಮಿಲ್ ಶಕೀಲ್ ಪುಲ್ವಾಮಾ ಜಿಲ್ಲೆಯ ಕೊಯಿಲ್ ನಿವಾಸಿಯಾಗಿದ್ದು, ಈ ಮೂಲಕ ಮತ್ತೊಬ್ಬ ವೈದ್ಯನ ಪಾತ್ರವೂ ತನಿಖೆಯಿಂದ ಬಹಿರಂಗಗೊಂಡಿದೆ. ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಡಾ. ಮುಜಾಮಿಲ್ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಡಾ. ರಾಥರ್‌ ಅವರ ವಿರುದ್ದವಾಗಿ ಈ ಹಿಂದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಸದ್ಯ ಇಬ್ಬರು ವೈದ್ಯರು ಕಾಶ್ಮೀರಿ ಪೋಲಿಸರ ವಶದಲ್ಲಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ತನಿಖೆ ಹಾಗೂ ವಿಚಾರಣೆಗಳು ಮುಂದುವರೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ನಮಾಜ್‌ - ಅನುಮತಿ ಕೊಟ್ಟಿದ್ಯಾ ಸರ್ಕಾರ - ಬಿಜೆಪಿ ಪ್ರಶ್ನೆ!?