ಫಿಲಿಪ್ಪೀನ್ಸ್‌ನ ಉತ್ತರ ಭಾಗದ ತೀರಕ್ಕೆ ಬಡಿದಿರುವ ʻಫಂಗ್ ವಾಂಗ್ʼ ಚಂಡಮಾರುತದ ಪ್ರಭಾವದಿಂದಾಗಿ, ಜನರು ಭಾರಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಸುಮಾರು ಹತ್ತು ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲಿನ ಹಲವಾರು ಪ್ರದೇಶಗಳಲ್ಲಿ ಅಪಾರ ಹಾನಿಯುಂಟಾಗಿದ್ದು, ಭಾರಿ ಮಳೆಗೆ ರಸ್ತೆ, ವಿದ್ಯುತ್ ಸಂಪರ್ಕವು ಕಡಿತವಾಗಿದೆ.
ನದಿಯಲ್ಲಿ ತೇಲುತ್ತಿರುವ ಶವವೊಂದು ಪತ್ತೆಯಾಗಿದ್ದು, ಮನೆ ಕುಸಿದಿರುವ ಪರಿಣಾಮ ಅವಶೇಷಗಳಡಿಯಲ್ಲಿ ಮಹಿಳೆಯೊಬ್ಬರ ಮೃತದೇಹವು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಗಂಟೆಗೆ, 185 ಕಿ.ಲೋ ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯು, ಲುಜೋನ್ ದ್ವೀಪಕ್ಕೆ ಅಪ್ಪಳಿಸಿದೆ. ಅಲ್ಲಿ ʻಉವಾನ್ʼ ಎಂದು ಕರೆಯಲಾಗಿರುವ ಈ ಚಂಡಮಾರುತವು, ಅಲ್ಲಿನ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. OnePlus 13 | Smarter with OnePlus AI | Lifetime Display Warranty |12GB RAM 256GB Storage Midnight Ocean | Official Smartphone for BGMS 2025
ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತತ್ತರಿಸಿರುವ ಫಿಲಿಪ್ಪೀನ್ಸ್‌ನಲ್ಲಿ, ಇದೇ ರೀತಿ ಈ ಹಿಂದೆ, ಅಪ್ಪಳಿಸಿದ ʻಕಲ್ಮೇಗಿʼ ಚಂಡಮಾರುತಕ್ಕೆ ಸುಮಾರು 200 ಜನರು ಮಂದಿ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ಬಂಧಿತ ವೈದ್ಯ ನೀಡಿದ ಸುಳಿವಿನ ಮೇರೆಗೆ 300 RDX, ಎಕೆ 47 ಗನ್ ವಶಕ್ಕೆ!