ಬಾಂಗ್ಲಾದೇಶದಲ್ಲಿದ್ದುಕೊಂಡು, ಉಗ್ರ ಹಫೀಜ್ ಸಯೀದ್ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆಂದು ಲಷ್ಕರ್ -ಎ- ತೈಬಾದ ಕಮಾಂಡರ್ ಮಾತನಾಡಿರುವ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ ಎನ್ನಲಾಗಿದೆ.
ಈ ವಿಡಿಯೋವು, ಅಕ್ಟೋಬರ್ 30 ರಂದು ಪಾಕಿಸ್ತಾನದ ಖೈರ್‌ಪುರ್ ತಮಿವಲಿಯಲ್ಲಿ ನಡೆದ ರ್ಯಾಲಿಯ ಸಂದರ್ಭದಲ್ಲಿನದು ಎನ್ನಲಾಗಿದೆ. ಈ ಬಗ್ಗೆ, ಲಷ್ಕರ್ -ಎ- ತೈಬಾದ ಕಮಾಂಡರ್ ಸೈಫುಲ್ಲಾ ಸೈಫ್ ಸ್ಪಷ್ಟವಾಗಿ ಹೇಳುತ್ತಲಿರುವುದು ಕಂಡುಬಂದಿದೆ ಎನ್ನಲಾಗಿದೆ.
ಆತ ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಿದ್ದತೆ ನಡೆಸುತ್ತಿದ್ದಾನೆ, ಸುಮ್ಮನೆ ಕುಳಿತಿಲ್ಲ. ಆತನ ಜನರು ಪೂರ್ವ ಪಾಕಿಸ್ತಾನ ಹಾಗೂ ಬಾಂಗ್ಲಾದಲ್ಲಿ ಸಕ್ರಿಯರಾಗಿದ್ದಾರೆ. ಭಾರತಕ್ಕೆ ತೊಂದರೆಯುಂಟು ಮಾಡುವ ಸಲುವಾಗಿ, ಭಯೋತ್ಪಾದಕ ತರಬೇತಿ ನೀಡಲು ಹಾಗೂ ಯುವಕರನ್ನು ಜಿಹಾದ್‌ಗೆ ಸಿದ್ದಪಡಿಸಲು ತನ್ನ ಸಹಚರರನ್ನು ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ. realme 15 5G Smartphone 8+128GB Green,144Hz HyperGlow 4D Curve Display,7000mAh Battery,80W SuperVOOC,Dual 50MP 4K Cameras,Dimensity 7300+ Chipset,IP69
ಈ ಸಂದರ್ಭದಲ್ಲಿ ಮಕ್ಕಳ ಉಪಸ್ಥಿತಿಯು ಇದ್ದು, ಈ ಭಯೋತ್ಪಾದಕ ಮಾರ್ಗಸೂಚಿಗಳನ್ನು ಮಕ್ಕಳಲ್ಲಿ ಬಿತ್ತಲಾಗುತ್ತಿರುವಲ್ಲಿ ಭಯೋತ್ಪಾದಕ ಸಂಘಟನೆಗಳ ಘೋರತೆಯನ್ನು ಸೂಚಿಸಿದೆ. ಈ ವಿಡಿಯೋ ಬಿಡುಗಡೆಯು ವಿದೇಶಾಂಗ ನೀತಿ ಸಂಧಿಗ್ದತೆ ಹಾಗೂ ಭದ್ರತೆಯ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಇದರಿಂದಾಗುವ ಅಪಾಯಗಳನ್ನು ತಡೆದು; ತನಿಖಾ ಸತ್ಯಾಸತ್ಯತೆಗಳ ಬಗ್ಗೆ ಎಚ್ಚರಿಕೆವಹಿಸಬೇಕಾಗಿದೆ. ಇದನ್ನೂ ಓದಿ: ಫಿಲಿಪ್ಪೀನ್ಸ್ - ʻಫಂಗ್ ವಾಂಗ್ʼ ಚಂಡಮಾರುತಕ್ಕೆ ನಲುಗಿದ ಜನರು - 10 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರ!