ಬೆಂಗಳೂರಿನ ಹೊರವಲಯದ ಬಹುತೇಕ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳೇ ತಲೆದೋರಿವೆ ಎಂದು ವರದಿಯಾಗಿದೆ. ರಸ್ತೆಯಲ್ಲಿ ಸಂಚರಿಸುವ ನಡುವಲ್ಲಿ ಹೆಚ್ಚಾಗಿರುವ ಫ್ಲೆಕ್ಸ್‌ಗಳ ಕುರಿತು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಯಮಿತದ ಅಧಿಕಾರಿಗಳು ಕ್ರಮಕೈಗೊಳ್ಳದೇ ಕರ್ತವ್ಯಚ್ಯುತರಾಗಿದ್ದಾರೆ ಎನ್ನಲಾಗಿದೆ.
ಮಹದೇವಪುರ, ಸರ್ಜಾಪುರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೂದಿಗೆರೆ ಕ್ರಾಸ್ ಹಾಗೂ ಕಾಟಂನಲ್ಲೂರಿನಿಂದ ವರ್ತೂರು ಹೀಗೆ ವಿವಿಧೆಡೆ, ಅನಧಿಕೃತವಾಗಿ ಜಾಹೀರಾತು ಫಲಕಗಳು ರಾಜಾಜಿಸುತ್ತಿವೆ. ಆದರೂ ಈ ಬಗ್ಗೆ ಕೇಳುವವರೇ ಇಲ್ಲವೆಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ ಎನ್ನಲಾಗಿದೆ. Oppo K13 5G (Prism Black, 8GB RAM 128GB Storage)
ರಸ್ತೆಯ ಒಂದೂ ವಿದ್ಯುತ್ ಕಂಬವನ್ನು ಬಿಡದೆಯೇ; ರಸ್ತೆ ವಿಭಾಜಕದ ಮಧ್ಯದಲ್ಲಿ 10 ಅಡಿ ಒಂದರಂತೆ ಫಲಕಗಳನ್ನು ಹಾಕಲಾಗಿದೆ. ವಾಹನ ಸವಾರರಿಗೆ ಇದರಿಂದ ತೊಂದರೆಯುಂಟಾಗುತ್ತಿದೆ. ಈ ಬಗ್ಗೆ ಗಮನಹರಿಸದೇ ಇರುವುದರಿಂದ, ಕೆಲವೊಮ್ಮೆ ಜಾಹೀರಾತು ಫಲಕಗಳು ಮಳೆ ಗಾಳಿಗೆ ವಾಹನಗಳ ಬಿದ್ದು ಪ್ರಾಣಪಾಯವನ್ನು ತಂದಿವೆ. ಹಾಗಿದ್ದರೂ, ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉಗ್ರ ಹಫೀಜ್ ಸಯೀದ್ ಬಾಂಗ್ಲಾದಲ್ಲಿದ್ದೇ ಭಾರತದ ಮೇಲೆ ದಾಳಿ ನಡೆಸಲು ಪ್ಲ್ಯಾನ್: ಲಷ್ಕರ್ -ಎ- ತೈಬಾದ ಕಮಾಂಡರ್!