Skip to main content
ವಿಡಿಯೋ
1/3
cinema

40 ರೂ. ಕೋಟಿ ಬಂಡವಾಳ, 7 ಕೋಟಿ ರೂ. ಸಂಗ್ರಹ! ಯಾಕಿಂಗ್ ಆಯ್ತು ರಶ್ಮಿಕಾ ಮಂದಣ್ಣ 'ದಿ ಗರ್ಲ್ ಫ್ರೆಂಡ್' ಸಿನಿಮಾ?

By Ram Chethan
40 ರೂ. ಕೋಟಿ ಬಂಡವಾಳ, 7  ಕೋಟಿ ರೂ. ಸಂಗ್ರಹ! ಯಾಕಿಂಗ್ ಆಯ್ತು ರಶ್ಮಿಕಾ ಮಂದಣ್ಣ 'ದಿ ಗರ್ಲ್ ಫ್ರೆಂಡ್' ಸಿನಿಮಾ?

ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಬಾಕ್ಸ್‌ಆಫೀಸ್‌ನಲ್ಲಿ ಆಶಿಸಿದ ಮಟ್ಟಿಗೆ ಪ್ರದರ್ಶನ ನೀಡದೇ ನಿರ್ಮಾಪಕರಿಗೆ ತಲೆನೋವು ತಂದಿದೆ. ₹40 ಕೋಟಿಗೂ ಹೆಚ್ಚು ಬಜೆಟ್‌ನ ಚಿತ್ರ ಮೊದಲ ವಾರಾಂತ್ಯದಲ್ಲಿ ಕೇವಲ ₹7 ಕೋಟಿ ಗಳಿಸಿದ್ದು, ಲಾಭದ ಗುರಿ ಮುಟ್ಟುವುದು ಕಷ್ಟ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಈಗ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಅವರು ನಟಿಸುವ ಚಿತ್ರಗಳು ಶತಾಯಗತಾಯ ಗೆಲ್ಲುತ್ತವೆ ಎಂಬ ನಂಬಿಕೆ ನಿರ್ಮಾಪಕರಲ್ಲಿತ್ತು. ಆದರೆ, ಇತ್ತೀಚೆಗೆ ತೆರೆಕಂಡ 'ದಿ ಗರ್ಲ್‌ಫ್ರೆಂಡ್' ಚಲನಚಿತ್ರ ಈ ನಂಬಿಕೆಗೆ ಸವಾಲೊಡ್ಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರಶ್ಮಿಕಾ ಮಂದಣ್ಣ ನಟನೆಯ ಚಿತ್ರಕ್ಕೆ ಕೋಟಿಗಟ್ಟಲೆ ಬಂಡವಾಳ ಹೂಡಿದ ನಿರ್ಮಾಪಕರು ಕೈ ಸುಟ್ಟುಕೊಂಡರೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ದಿ ಗರ್ಲ್‌ಫ್ರೆಂಡ್' ಚಿತ್ರ ಕಳೆದ ಶುಕ್ರವಾರ (ನವೆಂಬರ್ 7) ಬಿಡುಗಡೆಯಾಯಿತು.Aristocrat Large Commander 79Cms Premium Polyester with PVC Coating Soft Sided Check-in 4 Wheels Green Spinner Suitcase

ಈ ಚಿತ್ರ ಮೊದಲ ದಿನ ಕೇವಲ ₹1.30 ಕೋಟಿ ಗಳಿಸಿತು. ಎರಡನೇ ದಿನ ₹2.5 ಕೋಟಿ ಮತ್ತು ಮೂರನೇ ದಿನ ₹3.1 ಕೋಟಿ ಸಂಗ್ರಹಿಸಿತು. ಇದರೊಂದಿಗೆ, ಚಿತ್ರದ ಒಟ್ಟು ಗಳಿಕೆ ₹7 ಕೋಟಿ ಸಮೀಪಿಸಿದೆ. ಆದರೆ, ಈ ಗಳಿಕೆಯಿಂದ ನಿರ್ಮಾಪಕರಿಗೆ ಲಾಭ ದೊರೆಯುವುದು ಅಸಂಭವ.

ಕೆಲವು ವರದಿಗಳ ಪ್ರಕಾರ, 'ದಿ ಗರ್ಲ್‌ಫ್ರೆಂಡ್' ಚಿತ್ರದ ಬಜೆಟ್ ₹40 ಕೋಟಿಗೂ ಅಧಿಕವಾಗಿದೆ. ನಿರ್ಮಾಪಕರು ಲಾಭ ಗಳಿಸಲು, ಈ ಚಿತ್ರವು ಭಾರತದಲ್ಲಿ ಕನಿಷ್ಠ ₹80 ಕೋಟಿ ಗಳಿಸಬೇಕು ಎನ್ನಲಾಗಿದೆ. ₹80 ಕೋಟಿ ಗಳಿಕೆಯಾದರೆ, ತೆರಿಗೆ ಮತ್ತು ಚಿತ್ರಮಂದಿರಗಳ ಪಾಲು ಕಳೆದು ನಿರ್ಮಾಪಕರಿಗೆ ಹೂಡಿದ ಬಂಡವಾಳ ಹಿಂತಿರುಗುತ್ತದೆ.ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೃತವರ್ಷಿಣಿ ಖ್ಯಾತಿಯ ರಜನಿ...ಜಿಮ್‌ ಟ್ರೈನರ್‌ ಹಾಗೂ ಗೆಳೆಯನಾದ ಅರುಣ್‌ ಜೊತೆ ಸಪ್ತಪದಿ!

ರಶ್ಮಿಕಾ ಮಂದಣ್ಣ ಅಭಿಮಾನಿಗಳು 'ದಿ ಗರ್ಲ್‌ಫ್ರೆಂಡ್' ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಒಟ್ಟು ಗಳಿಕೆ ₹20 ಕೋಟಿ ದಾಟುವುದು ಕಷ್ಟ ಎಂದು ಅಂದಾಜಿಸಲಾಗಿದೆ. ಏಕೆಂದರೆ, ವಾರದ ದಿನಗಳಲ್ಲಿ ಚಿತ್ರದ ಗಳಿಕೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಇದುವರೆಗೆ ರಶ್ಮಿಕಾ ಮಂದಣ್ಣ ಸ್ಟಾರ್ ನಾಯಕ ನಟರೊಂದಿಗೆ ತೆರೆ ಹಂಚಿಕೊಂಡು ಯಶಸ್ಸು ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ, ಅವರು ಒಬ್ಬರೇ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಇದಾಗಿದೆ. ಈ ಚಿತ್ರದ ಯಶಸ್ಸು ಅವರಿಗೆ ಅತಿ ಮುಖ್ಯವಾಗಿದೆ. ಹೆಚ್ಚಿನ ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.