ಬಿಗ್‌ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಉಷ್ಣತೆ ಹೆಚ್ಚಾಗುತ್ತಿದ್ದು, ಇತ್ತೀಚಿನ ಘಟನೆಯಲ್ಲಿ ಸ್ಪರ್ಧಿ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿಯ ನಡುವೆ ಉಂಟಾದ ವಾಗ್ವಾದ ಮನೆಮಂದಿ ನಡುವೆ ಚರ್ಚೆಗೆ ಕಾರಣವಾಗಿದೆ. ರಕ್ಷಿತಾ ಶೆಟ್ಟಿಯ ನಡವಳಿಕೆ ಮತ್ತು ಮಾತುಗಳನ್ನು ಧ್ರುವಂತ್ “ಬರೀ ನಾಟಕ” ಎಂದು ಆರೋಪಿಸಿ ಎಲ್ಲರ ಮುಂದೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಸ್ಕ್ ವೇಳೆ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿಯ ವರ್ತನೆಯ ಬಗ್ಗೆ ಕಿಡಿಕಾರಿದ ಧ್ರುವಂತ್, “ಬಡವನಂತೆ ಬಟ್ಟೆ ಹಾಕದೆ, ಮುಖವಾಡ ಹಾಕಿಕೊಂಡು ನಾಟಕ ಮಾಡ್ತೀರಾ? ಅಣ್ಣ ಹತ್ತಿರ ನೂರು ಕುರಿ ಇದೆ ಎನ್ನುತ್ತೀರಾ? ಹೀಗೆ ಬಡತನದ ನಾಟಕ ಮಾಡ್ತಾ ಸಿರಿವಂತಿಕೆ ತೋರಿಸ್ತೀರಾ?” ಎಂದು ಗಿಲ್ಲಿಯತ್ತ ಪ್ರಶ್ನೆ ಎಸೆದರು. ಈ ಮಾತಿನ ಬಳಿಕ ಮನೆಮಂದಿಯ ವಾತಾವರಣ ಕ್ಷಣಾರ್ಧದಲ್ಲಿ ಬಿಸಿಯಾಯಿತು.Arayna Women's Cotton Printed Floral Straight Kurta with Palazzo Pants and Dupatta
ಅದರ ನಂತರ ರಕ್ಷಿತಾ ಶೆಟ್ಟಿಯತ್ತ ತಿರುಗಿ ಧ್ರುವಂತ್ ಮಾತನಾಡಿದ ರೀತಿ ಪ್ರೇಕ್ಷಕರ ಗಮನ ಸೆಳೆದಿದೆ. “ನಾನು ಕೂಡ ಮಂಗಳೂರಿನವನು, ಆದರೆ ನಮ್ಮೂರವರ ತರ ಯಾರೂ ನಾಟಕ ಆಡಲ್ಲ. ಶನಿವಾರ ಮಾತ್ರ ಕನ್ನಡ ಬರೋದಿಲ್ಲ ಅಂತೆ, ಆದರೆ ಜಗಳಕ್ಕೆ ಬಂದಾಗ ಎಲ್ಲ ಭಾಷೆ ಬರುತೇ. ಇದು ನಾಟಕ ಅಲ್ಲವೇ?” ಎಂದು ಕಿಡಿಕಾರಿದ ಅವರು, ರಕ್ಷಿತಾ ಶೆಟ್ಟಿಯ ನಿಜವಾದ ಮುಖ ಈಗ ಬಯಲಾಗಿದೆ ಎಂದು ಹೇಳಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್‌ಗಳು ಸ್ಪರ್ಧಿಗಳ ನಿಜ ಸ್ವಭಾವವನ್ನು ಹೊರತೆಗೆದು ತೋರಿಸುತ್ತವೆ. ಈ ಬಾರಿ ಕೂಡ ಧ್ರುವಂತ್ ಅವರ ಮಾತುಗಳು ಮತ್ತು ಪ್ರತಿಕ್ರಿಯೆಗಳು ಮನೆಯಲ್ಲಿ ಹೊಸ ಅಲೆ ಎಬ್ಬಿಸಿವೆ. ರಕ್ಷಿತಾ ಶೆಟ್ಟಿ ತಾನು ನಾಟಕ ಮಾಡುತ್ತಿದ್ದಾಳೆ ಎಂಬ ಆರೋಪವನ್ನು ಇನ್ನೂ ಸ್ಪಷ್ಟವಾಗಿ ಖಂಡಿಸದಿದ್ದರೂ, ಮನೆಯ ಇತರ ಸದಸ್ಯರು ಇಬ್ಬರ ನಡುವಿನ ಕಲಹವನ್ನು ಶಾಂತಗೊಳಿಸಲು ಮುಂದಾಗಿದ್ದಾರೆ.ಇದನ್ನು ಓದಿ:ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೃತವರ್ಷಿಣಿ ಖ್ಯಾತಿಯ ರಜನಿ...ಜಿಮ್ ಟ್ರೈನರ್ ಹಾಗೂ ಗೆಳೆಯನಾದ ಅರುಣ್ ಜೊತೆ ಸಪ್ತಪದಿ!
ಪ್ರತಿ ಸೀಸನ್‌ನಂತೆಯೇ ಈ ಬಾರಿಗೆ ಕೂಡ ಬಿಗ್‌ಬಾಸ್ ಮನೆಯಲ್ಲಿ ಡ್ರಾಮಾ, ಭಾವನೆ ಮತ್ತು ವಿವಾದಗಳ ಮಿಶ್ರಣ ಕಾಣುತ್ತಿದೆ. ಧ್ರುವಂತ್ ಮತ್ತು ರಕ್ಷಿತಾ ನಡುವಿನ ಈ ಘರ್ಷಣೆ ಮುಂದಿನ ಎಪಿಸೋಡ್ಗಳಲ್ಲಿ ಯಾವ ರೂಪ ತಾಳಲಿದೆ ಎಂಬುದರತ್ತ ಈಗ ಪ್ರೇಕ್ಷಕರ ಕಣ್ಣುಗಳು ನೆಟ್ಟಿವೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೊಮೋ ಈಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಧ್ರುವಂತ್‌ರ ಕೋಪದ ವಿಡಿಯೋ ಪ್ರೇಕ್ಷಕರ ನಡುವೆ ಭಾರಿ ಚರ್ಚೆಗೆ ಕಾರಣವಾಗಿದೆ.
ಬಿಗ್‌ಬಾಸ್ ಮನೆಯಲ್ಲಿ ಒಂದು ಕ್ಷಣವೂ ಶಾಂತಿ ಇಲ್ಲದಂತಾಗಿದೆ — ಪ್ರತಿ ದಿನ ಹೊಸ ವಿವಾದ, ಹೊಸ ತಿರುವು. ಧ್ರುವಂತ್‌ರ ಈ ಹೇಳಿಕೆಗಳಿಂದ ರಕ್ಷಿತಾಳ ಇಮೇಜ್ ಮೇಲೆ ಯಾವ ಪರಿಣಾಮ ಬೀಳುತ್ತದೆ ಎಂಬುದನ್ನು ತಿಳಿಯಲು ಎಲ್ಲರೂ ಮುಂದಿನ ಎಪಿಸೋಡ್ಗೆ ಕಾಯುತ್ತಿದ್ದಾರೆ.