ನವದೆಹಲಿ: ದೆಹಲಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದ ತೀವ್ರತೆಗೆ ಕೆಂಪುಕೋಟೆ (Red Fort) ಪಕ್ಕದ ಪ್ರದೇಶದಲ್ಲಿದ್ದ ಕಟ್ಟಡಗಳು ನಲುಗಿದ್ದವು ಎಂಬುದಕ್ಕೆ ಸಾಕ್ಷಿ ಸಿಕ್ಕಿವೆ. ಸ್ಫೋಟದ ತೀವ್ರತೆಗೆ ಹೇಗಿತ್ತೆಂದು ಛಿದ್ರವಾದ ದೇಹದ ಭಾಗಗಳು ಒಂದೆಡೆಯಾದರೆ, ಸಮೀಪದ ಜೈನಮಂದಿರದ ಕಚೇರಿ ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿವೆ ಎಂದು ವರದಿಯಾಗಿದೆ.
ಸ್ಫೋಟದ ಭಯಾನಕತೆ ಕುರಿತು ಸ್ಥಳೀಯರೊಬ್ಬರ ಪ್ರಕಾರ, ಸ್ಫೋಟದ ಭೀಕರತೆಗೆ ಜೈನಮಂದಿರದ ಕಚೇರಿಯಲ್ಲಿದ್ದ ಗಾಜುಗಳು ಒಡೆದು ಟೇಬಲ್ ಮತ್ತು ಕುರ್ಚಿಗಳ ಮೇಲೆ ಬಿದ್ದಿರುವ ದೃಶ್ಯವನ್ನು ವಿವರಿಸಿದ್ದಾರೆ. ಘಟನೆ ನಡೆದಾಗ, ಸ್ಫೋಟದ ಶಬ್ದ ಕೇಳಿ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. OPPO K13 5G with 7000mAh and 80W SUPERVOOC Charger in-The-Box, ICY Purple (8GB, 128GB)
ಪ್ರಾರಂಭದಲ್ಲಿ, ಈ ಘಟನೆಯು ಗ್ಯಾಸ್ ಸಿಲಿಂಡರ್ ಅಥವಾ ಕಾರಿನ ಸಿಎನ್‌ಜಿ ಸ್ಫೋಟ ಎಂದು ಭಾವಿಸಿದ್ದರು. ಆದರೆ ಕೆಂಪುಕೋಟೆ ಬಳಿಯ ಈ ಸ್ಫೋಟದ ತೀವ್ರತೆ ನಂತರದಲ್ಲಿ ಗಾಬರಿಯನ್ನುಂಟು ಮಾಡಿತು ಎಂದರು. ಈ ಸಂದರ್ಭದಲ್ಲಿ ಯೂಟ್ಯೂಬರ್ ಜೊತೆಗೆ ಮಾತನಾಡುತ್ತಿರುವ, ಇನ್ನಿತರ ಸನ್ನಿವೇಶಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಬೆಂಗಳೂರು ಸೇರಿದಂತೆ ಇತರ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್-
ಈ ಹಿನ್ನಲೆಯಲ್ಲಿ, ಈ ಹೊತ್ತಿಗೂ ಹೆಚ್ಚಿದ್ದ ಭದ್ರತಾ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಭದ್ರತಾ ಕ್ರಮಗಳು ಕೈಗೊಂಡಿದ್ದು, ತಕ್ಷಣವೇ ಅಧಿಕಾರಿಗಳು ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳ ಬಳಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ (Tight Security). ವಿಮಾನ ನಿಲ್ದಾಣಕ್ಕೆ ಹೋಗುವ, ಬರುವವರ ಮೇಲೆ ನಿಗಾ ಇರಿಸಲಾಗಿದೆ. ಇದನ್ನೂ ಓದಿ: ಬ್ರೇಕಿಂಗ್ ನ್ಯೂಸ್ | ದೆಹಲಿ ಕೆಂಪು ಕೋಟೆ ಸ್ಫೋಟ: ಪುಲ್ವಾಮಾ ಸಂಪರ್ಕ ಬಯಲು!