Skip to main content
ವಿಡಿಯೋ
1/3
general

ದೆಹಲಿ ಸ್ಫೋಟ: ಮಹಿಳಾ ವೈದ್ಯ ಉಗ್ರರ ಬಂಧನ - 'ಜೈಷ್-ಎ-ಮೊಹಮ್ಮದ್' ಮಹಿಳಾ ವಿಂಗ್ ನಂಟಿನ ತನಿಖೆ!

By Shravanthi R
ದೆಹಲಿ ಸ್ಫೋಟ: ಮಹಿಳಾ ವೈದ್ಯ ಉಗ್ರರ ಬಂಧನ - 'ಜೈಷ್-ಎ-ಮೊಹಮ್ಮದ್' ಮಹಿಳಾ ವಿಂಗ್ ನಂಟಿನ ತನಿಖೆ!

ದೆಹಲಿಯ ಕೆಂಪುಕೋಟೆಯ ಬಳಿ ನಡೆಸಿದ ಭೀಕರ ಕಾರು ಸ್ಪೋಟ ಘಟನೆ ಸಂಬಂಧ ಮಹಿಳಾ ಉಗ್ರರ ಶಂಕೆ ಮೂಡಿದೆ. ಈ ನಿಟ್ಟಿನಲ್ಲಿ, ಮಹಿಳಾ ವೈದ್ಯೆ ಡಾ. ಶಾಹೀನ್‌ ಅವರನ್ನು ಬಂಧಿಸಲಾಗಿದ್ದು, ಇನ್ನಷ್ಟು ನಿಖರ ಮಾಹಿತಿಗಾಗಿ ಅವರನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದೆ.

ನವದೆಹಲಿ: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಿಳಾ ಉಗ್ರರ ಜಾಲ ಹುಡುಕಿದ್ದಾರೆ ತನಿಖಾಧಿಕಾರಿಗಳು. ಈ ನಿಟ್ಟಿನಲ್ಲಿ ಲಕ್ನೋ ಮೂಲಕ ಡಾ. ಶಾಹೀನ್‌ ಎನ್ನುವ ವೈದ್ಯ ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇದರ ನಡುವಲ್ಲಿಯೇ, ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೋಲಿಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. 

ಮಹಿಳಾ ಉಗ್ರರ ಚಟುವಟಿಕೆ: ತನಿಖೆಯು ಪ್ರಮುಖ ತಿರುವು ಪಡೆದಿದ್ದು, ಡಾ. ಶಾಹೀನ್ ಎಂಬ ಮಹಿಳಾ ಉಗ್ರಗಾಮಿ ಚಟುವಟಿಕೆಯ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಈಕೆ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ (Jaish-e-Mohammed) ನ ಮಹಿಳಾ ವಿಭಾಗಕ್ಕೆ (Women's Wing) ಸೇರಿದ ಮಹಿಳಾ ಮುಖ್ಯಸ್ಥೆ ಎನ್ನಲಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಶಾಹೀನ್ ಉಗ್ರ ಸಂಘಟನೆಗೆ ಸೇರುವ ಪ್ರೇರಣೆ, ಉದ್ದೇಶ ಮತ್ತು ಘಟನೆಯಲ್ಲಿ ಆಕೆಯ ಪಾತ್ರದ ಬಗ್ಗೆ ತನಿಖೆ ಮುಂದುವರೆದಿದೆ. ಈ ಬಗ್ಗೆ ಇನ್ನಷ್ಟು, ಸಂಗತಿಗಳು ಬಯಲಾಗುವ ಬಗ್ಗೆ ತಿಳಿಸಲಾಗಿದೆ. 

ಪಾಕಿಸ್ತಾನ ನಂಟು - ಜೈಷ್-ಎ-ಮೊಹಮ್ಮದ್‌ನ ಮಹಿಳಾ ವಿಭಾಗವಲ್ಲದೇ ಮತ್ತಿತರ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಇದೆಯೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಪಾಕ್‌ನ ಇನ್ನಿತರೆ ಪ್ರಮುಖ ಭಯೋತ್ಪಾದಕ ಸಂಘಟನೆಗಳಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಫರಿದಾಬಾದ್ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ ಎಂದು ಮಾಹಿತಿ ಒದಗಿಬಂದಿದೆ. OnePlus Nord 5 | Snapdragon 8s Gen 3 | Stable 144FPS Gaming | Dual 50MP Flagship Camera | Powered by OnePlus AI | 8GB + 256GB | Phantom Grey

ರಕ್ಷಣಾ ಸಚಿವರ ಭರವಸೆಯ ನುಡಿ -

ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಘಟನೆ ಸಂಬಂಧಿತ ಸಂತ್ರಸ್ತರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಘಟನೆಗೆ ಕಾರಣರಾದವರನ್ನು ಖಂಡಿತವಾಗಿ ಹಿಡಿದು ಶಿಕ್ಷೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಫೋಟದ ಭೀಕರತೆ: ಜೈನಮಂದಿರ ಕಚೇರಿಯಲ್ಲಿ ಗಾಜುಗಳು ಪುಡಿಪುಡಿ; ದೇಶದ ಪ್ರಮುಖ ನಗರಗಳಲ್ಲಿ ಟೈಟ್‌ ಸೆಕ್ಯೂರಿಟಿ!