ದೆಹಲಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಘಟನೆಯು ನೋವು ಮತ್ತು ದಿಗ್ಭ್ರಮೆ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಅಮಾಯಕರ ಜೀವಹಾನಿ ಬೇಸರದ ಸಂಗತಿಯಾಗಿದ್ದು, ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರವು ತೀವ್ರ ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಿದೆ ಎಂದಿದ್ದಾರೆ.
ಈ ಸಂಬಂಧ ಅವರು, ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಟ್ವೀಟ್‌ನ್ನು ಹಂಚಿಕೊಂಡಿದ್ದಾರೆ.
ಸ್ಫೋಟದ ಕಾರಣಕ್ಕೆ ಕೇಂದ್ರದತ್ತ ಬೊಟ್ಟು -
ಚುನಾವಣೆ ಸಂದರ್ಭದಲ್ಲೇ ಇಂತಹ ಬಾಂಬ್ ಸ್ಫೋಟಗಳು ಏಕೆ ಸಂಭವಿಸುತ್ತವೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಗೆ ಕೇಂದ್ರ ಸರ್ಕಾರವೇ ಉತ್ತರ ನೀಡಬೇಕು ಎಂದು ತಿಳಿಸಿದ್ದಾರೆ. OPPO Reno13 5G (Ivory White,8 GB RAM, 128 GB Storage) with No Cost EMI/Additional Exchange Offers
ಭದ್ರತಾ ಲೋಪವೇ ಎನ್ನುವ ಪ್ರಶ್ನೆಗೆ - "ಇದು ಭದ್ರತಾ ಹಿನ್ನಲೆಯೋ ಅಥವಾ ಬೇರೆ ಕಾರಣವೋ ಎಂದು ನಾನು ಹೇಳಲಾರೆ. ಆದರೆ ಈ ಘಟನೆಯು ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ," ಎಂದವರು ಅಭಿಪ್ರಾಯಪಟ್ಟಿದ್ದಾರೆ. "ನನಗೆ ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಕೇಂದ್ರದ ತನಿಖೆಯಿಂದ ಸತ್ಯಾಂಶ ಹೊರಬರಲಿ. ಮಾಹಿತಿ ಆಧರಿಸಿ ತನಿಖೆ ಮಾಡಲಿ," ಎಂದರು.
ರಾಜ್ಯದಲ್ಲಿ ಬಿಗಿ ಭದ್ರತೆ -
ದೆಹಲಿ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ, ರಾಜ್ಯದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿ, ತಪಾಸಣೆಗಳನ್ನು ನಡೆಸಲು ಆದೇಶಿಸಿದೆ.
ಆರ್‌ಎಸ್‌ಎಸ್ ಕುರಿತು -
"ನಮ್ಮ ದೇಶ ಬಹುತ್ವದ ದೇಶ. ಆದರೆ ಆರ್‌ಎಸ್‌ಎಸ್ ಮೊದಲಿನಿಂದಲೂ ಹಿಂದೂ ರಾಷ್ಟ್ರ ಎಂದು ಹೇಳುತ್ತಾ ಬಂದಿದೆ," ಎಂದಿದ್ದಾರೆ.
ದೆಹಲಿ ಭೇಟಿ -
ಇದೇ ನವೆಂಬರ್ 15 ರಂದು ದೆಹಲಿಗೆ ಭೇಟಿ ನೀಡುವ ಬಗ್ಗೆ ಮಾತನಾಡಿ, "ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಕರೆದಿದ್ದಾರೆ, ನಾನು ದೆಹಲಿಗೆ ಹೋಗುತ್ತೇನೆ. ರಾಹುಲ್ ಗಾಂಧಿ ಅವರು ಸಮಯ ನೀಡಿದರೆ, ಸಂಪುಟ ಪುನಾರಚನೆ ಸೇರಿದಂತೆ ರಾಜ್ಯದ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತೇನೆ," ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಫೋಟ: ಮಹಿಳಾ ವೈದ್ಯ ಉಗ್ರರ ಬಂಧನ - 'ಜೈಷ್-ಎ-ಮೊಹಮ್ಮದ್' ಮಹಿಳಾ ವಿಂಗ್ ನಂಟಿನ ತನಿಖೆ!