Skip to main content
ವಿಡಿಯೋ
1/3
general

ದೆಹಲಿ ಸ್ಫೋಟ: ಯುಎಪಿಎ ಸ್ಪೋಟ ಕಾಯ್ದೆಯಡಿ ಎಫ್‌ಐಆರ್‌ ದಾಖಲು - 'ವೈದ್ಯ' ರೂಪದ ರಕ್ಕಸರ ಸಂಚು - ವೈಟ್‌ ಕಾಲರ್ ನೆಟ್‌ವರ್ಕ್‌ ಉಗ್ರರ ಬಂಧನ!

By Shravanthi R
ದೆಹಲಿ ಸ್ಫೋಟ: ಯುಎಪಿಎ ಸ್ಪೋಟ ಕಾಯ್ದೆಯಡಿ ಎಫ್‌ಐಆರ್‌ ದಾಖಲು - 'ವೈದ್ಯ' ರೂಪದ ರಕ್ಕಸರ ಸಂಚು - ವೈಟ್‌ ಕಾಲರ್ ನೆಟ್‌ವರ್ಕ್‌ ಉಗ್ರರ ಬಂಧನ!

ದೆಹಲಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸಿ ವೈದ್ಯ ಉಗ್ರಗಾಮಿಗಳಿಗೆ ಬಲೆ ಹಾಕಿದ್ದು ತನಿಖೆ ಮುಂದುವರೆದಿದೆ ಎನ್ನಲಾಗಿದೆ. ಈ ಕುರಿತ ಪ್ರಧಾನಿ ಹಾಗೂ ರಕ್ಷಣಾ ಸಚಿವರು ಘಟನೆಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದೆಂದು ಭರವಸೆ ನೀಡಿದ್ದಾರೆ.

ದೆಹಲಿಯ ಕೆಂಪುಕೋಟೆ ಬಳಿ ನಡೆದ ಭೀಕರ ಸ್ಫೋಟದಿಂದಾಗಿ ಜೀವಗಳು ತತ್ತರಿಸಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟವರು ಯಾರೆಂಬ ಬಗ್ಗೆ ತನಿಖೆಯಲ್ಲಿ ಮಹತ್ವದ ತಿರುವು ಲಭಿಸಿದೆ. ವೈದ್ಯಕೀಯ ವೃತ್ತಿಪರರ ಮುಖವಾಡದ ಹಿಂದೆ ಅಡಗಿದ್ದ ಉಗ್ರಗಾಮಿ ಜಾಲವೊಂದು ಈ ಕೃತ್ಯದಲ್ಲಿ ಭಾಗಿಯಾಗಿರುವ ಸಂಗತಿ ಬಹಿರಂಗಗೊಂಡಿದೆ. 

ನೆನ್ನೆ ನಡೆದಿರುವ ಘೋರ ಘಟನೆ ಸಂಬಂಧ, ಇಂದು ಬೆಳಿಗ್ಗೆಯಿಂದ ಸತತ ತನಿಖೆ ಹಾಗೂ ವಿಚಾರಣೆಗಳು ನಡೆಸಲಾಗಿದೆ. ಈ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ ಮತ್ತು ಹರಿಯಾಣ ಪೊಲೀಸರು ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಇದರ ಹಿಂದಿರುವ ವೈಟ್‌ ಕಾಲರ್‌ ನೆಟ್‌ವರ್ಕ್‌ ಎಂದರೆ ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿದ್ದುಕೊಂಡೇ ಕುಕೃತ್ಯ ಕೈಗೊಂಡಿರುವ ಈ ಜಾಲದ ಕುರಿತು ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ಈ ಸಂಬಂಧ, ಎನ್‌ಐಎ ತನಿಖೆ ನಡೆಸಿದ್ದು, ಯುಎಪಿಎ ಸ್ಪೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿ,  ಚುರುಕು ತನಿಖೆ ನಡೆಸಿದೆ. ವೈದ್ಯ ರೂಪದ ಈ ರಕ್ಕಸರ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ಸಂಚಿನ ಬಗ್ಗೆ ತನಿಖೆ ನಡೆಸಿದಾಗ, ಸ್ಥಳಗಳಿಂದ ಅಧಿಕ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ತನಿಖೆ ಶ್ರೀನಗರದಿಂದ ಲಕ್ನೋವರೆಗೂ ವ್ಯಾಪಿಸಿದ್ದು, ಈ ಉಗ್ರಗಾಮಿ ಜಾಲದ ಕುರಿತು ತನಿಖೆ ಮುಂದುವರೆದಿದೆ. OPPO K13x 5G 6000mAh and 45W SUPERVOOC Charger & AI (Breeze Blue, 128 GB) (6 GB RAM)

ಉಗ್ರ ಸಂಘಟನೆಗಳ ನಂಟು -

ಈ ಪ್ರಕರಣವು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಜೈಷ್‌ - ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (Ansar Ghazwat-ul-Hind) ನೊಂದಿಗೆ ಸಂಪರ್ಕ ಹೊಂದಿರುವುದಾಗಿದೆ ಎನ್ನಲಾಗಿದೆ. ದೆಹಲಿ ಸ್ಫೋಟದಂತಹ ಭೀಕರ ಕೃತ್ಯಕ್ಕೆ, ದೇಶದ ಭದ್ರತಾ ವ್ಯವಸ್ಥೆಗೆ ಸವಾಲಾಗಿರುವ ಎಲ್ಲರನ್ನು ಸುಮ್ಮನೆ ಬಿಡುವುದಿಲ್ಲವೆಂದು ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಭದ್ರತಾ ಸಂಸ್ಥೆಗಳು ಈ ವೈಟ್‌ ಕಾಲರ್‌ ನೆಟ್‌ವರ್ಕ್‌ನ ಮೂಲವನ್ನು ಭೇದಿಸಲು ತೀವ್ರ ವಿಚಾರಣೆ ಮುಂದುವರಿಸಿವೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ದೆಹಲಿ ಸ್ಫೋಟ - ಚುನಾವಣೆ ಸಂದರ್ಭದಲ್ಲೇ ಬಾಂಬ್‌ ಯಾಕೆ? - ಕೇಂದ್ರವೇ ತನಿಖೆ ಮಾಡಲಿ: ಸಿಎಂ ಸಿದ್ದರಾಮಯ್ಯ