ಇಂದು ದೇಶದ ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ಜಮ್ಮು-ಕಾಶ್ಮೀರ, ಝಾರ್ಖಂಡ್, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಉಪಚುನಾವಣೆ ಆರಂಭಗೊಂಡಿದೆ. ಬಿಗಿ ಭದ್ರತೆ ನಡುವೆ ಮತದಾರರ ಭಾಗವಹಿಸುವಿಕೆ ಸ್ಥಿರವಾಗಿ ಮುಂದುವರಿದಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಏಳು ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯು, ಬಿಗಿ ಭದ್ರತೆಯೊಂದಿಗೆ ಒಟ್ಟು ಆರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿದೆ. ಚುನಾವಣಾ ಆಯೋಗದ ವರದಿ ಪ್ರಕಾರ, ಮಧ್ಯಾಹ್ನ 1 ಗಂಟೆವರೆಗೆ ಎಲ್ಲಾ 8 ಸ್ಥಾನಗಳಲ್ಲಿ ಸರಾಸರಿ ಶೇ. 30 ರಿಂದ 56 ರಷ್ಟು ಮತದಾರರು ಮತಚಲಾಯಿಸಿದ್ದಾರೆ ಎಂದು ಹೇಳಲಾಗಿದೆ. OPPO K13x 5G 6000mAh and 45W SUPERVOOC Charger & AI (Mist White, 128 GB) (6 GB RAM)
ಜಮ್ಮು-ಕಾಶ್ಮೀರದ ಬುಡ್ಗಮ್ ದಲ್ಲಿ ಶೇ. 34.01, ನಾಗ್ರೋಟಾದಲ್ಲಿ ಶೇ. 52.44 ಮತದಾನ ದಾಖಲಾಗಿದೆ. ರಾಜಸ್ಥಾನದ ಅಂತಾ (47.77%), ಝಾರ್ಖಂಡ್‌ನ ಘಾಟ್ಸಿಲಾ ( 54.08% ), ಮಿಜೋರಾಂನ ದಂಪಾ (56.35 %), ಒಡಿಶಾದ ನುವಾಪಾದ (51.42%), ಪಂಜಾಬ್‌ನ ತರ್ನ್ ತರಣ್ (36.62%), ಮತ್ತು ತೆಲಂಗಾಣದ ಜುಬಿಲಿ ಹಿಲ್ಸ್ (31.94%) ಸ್ಥಾನಗಳಲ್ಲೂ ಮತದಾನ ಚುರುಕಾಗಿದೆ ಎಂದು ಮಾಹಿತಿ ನೀಡಲಾಗಿದೆ.
ರಾಜಕೀಯ ವಿಶ್ಲೇಷಕರು ಹೇಳುವಂತೆ ಈ ಚುನಾವಣೆಗಳು ವಿವಿಧ ರಾಜ್ಯಗಳ ರಾಜಕೀಯ ಸಮೀಕ್ಷೆಗಳಲ್ಲಿ ಹಾಗೂ ರಾಜಕೀಯ ಭವಿಷ್ಯಕ್ಕೆ ಮಹತ್ವದ್ದು ಎನ್ನಲಾಗಿದೆ. ಇದನ್ನೂ ಓದಿ: ದೆಹಲಿ ಸ್ಫೋಟ: ಯುಎಪಿಎ ಸ್ಪೋಟ ಕಾಯ್ದೆಯಡಿ ಎಫ್‌ಐಆರ್ ದಾಖಲು - 'ವೈದ್ಯ' ರೂಪದ ರಕ್ಕಸರ ಸಂಚು - ವೈಟ್ ಕಾಲರ್ ನೆಟ್‌ವರ್ಕ್‌ಗೆ ಉಗ್ರರ ಬಂಧನ!