ಗುಜರಾತ್‌ನಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಜ್ಜಾಗಿದ್ದರು ಎಂದು ವರದಿಯೊಂದು ತಿಳಿಸಿದೆ. ʻರಿಸಿನ್ʼ ಮಾರಣಾಂತಿಕ ವಿಷವನ್ನು ಬಳಸಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಭಯಾನಕ ಕೃತ್ಯವನ್ನು ತಡೆಗಟ್ಟಿ, ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ವಿಫಲಗೊಳಿಸಿದೆ.
ವಿಷ ಬಳಸಿ ನರಮೇಧಕ್ಕೆ ಸಿದ್ಧತೆ -
ಮಾರಣಾಂತಿಕ ವಿಷವಾದ ʻರಿಸಿನ್ʼ ಎಂಬುದು ವಾಸನೆ ಹಾಗೂ ರುಚಿರಹಿತವಾಗಿದೆ. ನೀರಿನಲ್ಲಿ ಬೆರೆಸಿದರೂ ಸಹ ಪತ್ತೆ ಹಚ್ಚಲು ಅಸಾಧ್ಯವೆನ್ನಲಾಗಿರುವ ಇದನ್ನು ಬಂಧಿತ ಉಗ್ರರು ದೇವಸ್ಥಾನದಲ್ಲಿ ವಿತರಿಸಲಾಗುವ ಪ್ರಸಾದ ಹಾಗೂ ನೀರಿನಲ್ಲಿ ಬೆರೆಸಲು ಮುಂದಾಗಿದ್ದು, ಹರಳೆಣ್ಣೆ ಬೀಜ ಬಳಸಿ ತಯಾರಿಸುತ್ತಿದ್ದರು ಎಂದು ತಿಳಿದುಬಂದಿದೆ. ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್, ಮೊಹಮ್ಮದ್ ಸುಹೇಲ್ ಮತ್ತು ಆಜಾದ್ ಬಂಧಿತರಾದವರು ಎಂದು ಗುರುತಿಸಲಾಗಿದೆ.
ಅತ್ಯಂತ ದೊಡ್ಡ ಹಾನಿ ನಡೆಸಲು ಮುಂದಾಗಿದ್ದ ಬಂಧಿತರಲ್ಲಿ ವೈದ್ಯ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್, ಚೀನಾದಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದು, ತನ್ನ ವೈದ್ಯಕೀಯ ಜ್ಞಾನವನ್ನು ಈ ವಿಷ ತಯಾರಿಕೆಗೆ ಜ್ಞಾನದ ದುರ್ಬಳಕೆ ಮಾಡಿಕೊಂಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಎಟಿಎಸ್‌ನ ಸಮಯೋಚಿತ ಕಾರ್ಯಾಚರಣೆಯಿಂದಾಗಿ, ಗುಜರಾತ್‌ನಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವು ತಪ್ಪಿದಂತಾಗಿದೆ. OPPO K13x 5G 6000mAh and 45W SUPERVOOC Charger & AI (Sunset Peach, 128 GB) (6 GB RAM)
ಉಗ್ರ ಸಂಘಟನೆಗಳ ನಂಟು -
ಬಂಧಿತರ ಬಳಿ ನಡೆಸಿದ ವಿಚಾರಣೆಯ ಬಳಿಕ, ಈ ಹೈಟೆಕ್ ಭಯೋತ್ಪಾದಕರು ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಾದ ಐಸಿಸ್ (ISIS) ಮತ್ತು ಪಾಕಿಸ್ತಾನ ಮೂಲದ ಕೆಲವು ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಅಂಶ ಬಹಿರಂಗಗೊಂಡಿದೆ. ಪಾಕ್‌ನಿಂದ ಟೆಲಿಗ್ರಾಮ್ ಮೂಲಕ ಐಸಿಸ್ ಜೊತೆ ಮತ್ತು ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಪೂರೈಕೆಯಾಗಿದೆ ಎಂದು ತಿಳಿಸಿದೆ. ಈವರೆಗೆ ಈ ಉಗ್ರರು ಅನಾಗರೀಕ ಪ್ರಜ್ಞೆ, ಅಶಾಂತಿ ಹಾಗೂ ಅನಾಹುತಗಳನ್ನು ನಡೆಸಲು ಪ್ಲ್ಯಾನ್ ಮಾಡಿದ್ದರು ಎಂದು ಹೇಳಲಾಗಿದೆ. ಇದನ್ನೂ ಓದಿ: Assembly By-Elections: ಬಿಗಿ ಭದ್ರತೆಯ ನಡುವೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ - ವರದಿ