ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ನೆನ್ನೆ ದೆಹಲಿಯಲ್ಲಿ ಸಂಭವಿಸಿದ ಉಗ್ರ ಘಟನೆ ಸಂಬಂಧಸಿದಂತೆ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ಸ್ವತಂತ್ರ್ಯ ಭಾರತದಲ್ಲಿ ಅತ್ಯಂತ ಅಸಮರ್ಥ ಗೃಹ ಸಚಿವರು ಇದ್ದಾರೆ ಎಂದರೆ ಅದು ಅಮಿತ್ ಶಾ. ಮೊದಲು ಅವರು ರಾಜೀನಾಮೆ ಕೊಡಲಿ ನಂತರ ಪ್ರಧಾನಿ ಮೋದಿಯವರು ಕೊಡಲಿ ಎಂದಿದ್ದಾರೆ.
ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಪುಲ್ವಮಾ, ಪಹಲ್ಗಾಮ್, ಮಣಿಪುರ ಆಯ್ತು ಇದೀಗ ದೆಹಲಿ ಕಾರು ಸ್ಫೋಟ. ಇನ್ನೆಷ್ಟು ಜೀವಗಳ ಬಲಿಯಾಗಬೇಕು? ಬಾಂಗ್ಲಾದಿಂದ ಉಗ್ರರು ಬರುತ್ತಿದ್ದಾರೆ. ನುಸುಳುಕೋರರು ಬರದಂತೆ ತಡೆಯಲು ಯಾಕೆ ಸಾಧ್ಯವಾಗಿಲ್ಲ? ಗೃಹ ಸಚಿವರಿಗೆ ಹೊಣೆಗಾರಿಕೆ ಇಲ್ಲ. OPPO K13x 5G 6000mAh and 45W SUPERVOOC Charger & AI (Midnight Violet, 128 GB) (6 GB RAM)
ಕಾನೂನು ವ್ಯವಸ್ಥೆ, ಪೋಲಿಸರ ವರದಿ ಸಂಪೂರ್ಣ ಕೇಂದ್ರ ಸರ್ಕಾರದ ಗೃಹ ಸಚಿವರ ಅಧೀನದಲ್ಲಿರುತ್ತದೆ. ದೇಶದ ಹೃದಯ ಭಾಗದಲ್ಲೇ ಇಂತಹ ಭೀಕರ ಘಟನೆ ನಡೆದಿದೆ. ಇದು ಗುಪ್ತಚರ ವೈಫಲ್ಯ. ತಂತ್ರಗಾರಿಕೆ ಮತ್ತು ಭಾಷಣದಲ್ಲಿ ನಿರತರಾಗಿದ್ದರೆ, ತಮ್ಮ ಇಲಾಖೆಯನ್ನು ನಿಭಾಯಿಸಲು ಸಾಧ್ಯವಾಗಿಲ್ಲ. ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಆ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ ಎಂದು ಖರ್ಗೆ ಜಡಿದಿದ್ದಾರೆ. ಇದನ್ನೂ ಓದಿ: ಗುಜರಾತ್: ನರಮೇಧಕ್ಕಾಗಿ ಪ್ರಸಾದಕ್ಕೆ ʻರಿಸಿನ್ʼ ಬೆರೆಸುವ ಉಗ್ರರ ಸಂಚು ಬಯಲು; ಎಟಿಎಸ್ ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿದ ಭಾರಿ ಅನಾಹುತ!