Skip to main content
ವಿಡಿಯೋ
1/3
general

ದೆಹಲಿ ಸ್ಫೋಟ: ಭದ್ರತಾ ವೈಫಲ್ಯದ ಪ್ರಶ್ನೆ; ಮೃತರ ಕುಟುಂಬಗಳ ಆಕ್ರಂದನ - ನಾಳೆ ಪ್ರಧಾನಿಗಳ ಸಮ್ಮುಖದಲ್ಲಿ ತುರ್ತು ಸಭೆ!

By Shravanthi R
ದೆಹಲಿ ಸ್ಫೋಟ: ಭದ್ರತಾ ವೈಫಲ್ಯದ ಪ್ರಶ್ನೆ; ಮೃತರ ಕುಟುಂಬಗಳ ಆಕ್ರಂದನ - ನಾಳೆ ಪ್ರಧಾನಿಗಳ ಸಮ್ಮುಖದಲ್ಲಿ ತುರ್ತು ಸಭೆ!

ದೇಶದ ರಾಜಧಾನಿಯ ಕೇಂದ್ರಬಿಂದು ಮತ್ತು ಜನನಿಬಿಡ ಪ್ರದೇಶದಲ್ಲಿ ನಡೆದ ಭೀಕರ ಸ್ಫೋಟ ಘಟನೆ, ದೇಶದ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಘಟನೆಯಲ್ಲಿ 12 ಜನರು ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರು ಪ್ರತಿಕ್ರಿಯಿಸಿ ಸ್ಪೋಟಕ್ಕೆ ಕಾರಣರಾದವರಿಗೆ ತಕ್ಕ ಶಾಸ್ತಿಯಾಗುವುದೆಂದು ಮಾತನಾಡಿದ್ದಾರೆ. ಈ ಮಧ್ಯೆ, ಪಹಲ್ಗಾಮ್‌ನಲ್ಲಿ ನಡೆದ ಘಟನೆಯ ನಂತರ, ಎಚ್ಚೆತ್ತು ಭದ್ರತಾ ಕ್ರಮಗಳಿಂದ ಎಚ್ಚರಿಕೆ ವಹಿಸಿದ್ದರೆ, ಈ ದುರಂತವನ್ನು ತಪ್ಪಿಸಬಹುದಿತ್ತು ಎಂಬ ಅಭಿಪ್ರಾಯ ಕೇಳಿಬಂದಿವೆ.

ನಾಳೆ ಭದ್ರತಾ ಪಡೆಗಳ ತುರ್ತು ಸಭೆ -

ಈ ಗಂಭೀರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನಾಳೆ (ಬುಧವಾರ) ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ಭದ್ರತಾ ಪಡೆಗಳ ತುರ್ತು ಪರಿಸ್ಥಿತಿಯ ಕುರಿತು ಮಹತ್ವದ ಸಭೆ ನಡೆಯಲಿದೆ. ಸಂಜೆ 5.30 ಕ್ಕೆ ಸಭೆ ನಡೆಯಲಿದ್ದು, ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸದ್ಯ, ದೇಶಾದ್ಯಂತ ಇರುವ ಸೇನಾ ನೆಲೆಗಳು ಮತ್ತು ಪ್ರಮುಖ ಘಟಕಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. OPPO A5X 5G (Midnight Blue, 4GB RAM, 64GB Storage) with Exchange Bonus or No Cost EMI

ಕುಟುಂಬಗಳ ಆಕ್ರಂದನ -

ಈ ಸ್ಫೋಟದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಕಥೆಗಳು ಹೃದಯ ಕಲಕುವಂತಿವೆ. ಮೃತಪಟ್ಟವರಲ್ಲಿ ಪ್ರತಿಯೊಬ್ಬರ ಹಿಂದೆ ಒಂದೊಂದು ಆಕ್ರಂದನಕಾರಿ ಕಥೆಯಿದ್ದು, ಕುಟುಂಬಗಳು ದುಃಖದಲ್ಲಿ ಮುಳುಗಿವೆ ಎಂದು ವರದಿಯಾಗಿವೆ. ಇದನ್ನೂ ಓದಿ: ದೆಹಲಿ ಕೆಂಪುಕೋಟೆ ಬಳಿ ಸ್ಪೋಟ - ʻಅಮಿತ್‌ ಶಾ ಅಸಮರ್ಥ ಗೃಹ ಸಚಿವʼ ಸ್ಥಾನಕ್ಕೆ ರಾಜೀನಾಮೆ ನೀಡಲಿ - ಸಚಿವ ಪ್ರಿಯಾಂಕ್‌ ಖರ್ಗೆ!