ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಜಗತ್ತಿನಾದ್ಯಂತ ಹಿಂದೂಗಳಿಗೆ ಅಪಾರ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಮಹತ್ವವನ್ನು ಹೊಂದಿದೆ ಎಂದು ಮಂಗಳವಾರ ಹೇಳಿದ್ದಾರೆ. ಇದು ಕೇವಲ ಯಾತ್ರಾ ಕೇಂದ್ರವಲ್ಲ, ಬದಲಿಗೆ ಪವಿತ್ರ ಆಧ್ಯಾತ್ಮಿಕ ತೀರ್ಥಯಾತ್ರೆ ಎಂದು ಅವರು ಬಣ್ಣಿಸಿದ್ದಾರೆ.ತಿರುಪತಿ ಲಡ್ಡು ವಿವಿಧ ಸಮುದಾಯಗಳ ಜನರನ್ನು ಒಂದುಗೂಡಿಸುವ ಸಾಮೂಹಿಕ ಭಾವನೆಯ ಪ್ರತೀಕವಾಗಿದೆ ಎಂದು ಕಲ್ಯಾಣ್ ತಿಳಿಸಿದರು. "ಇದು ಕೇವಲ ಸಿಹಿಯಲ್ಲ; ಇದು ನಮ್ಮ ಸಾಮೂಹಿಕ ನಂಬಿಕೆ ಮತ್ತು ಆಳವಾದ ಭಕ್ತಿಯ ಸಂಕೇತವಾಗಿದೆ. ನಾವು ಇದನ್ನು ಸ್ನೇಹಿತರು, ಕುಟುಂಬ ಮತ್ತು ಅಪರಿಚಿತರೊಂದಿಗೆ ಹಂಚಿಕೊಳ್ಳುತ್ತೇವೆ" ಎ