Skip to main content
ವಿಡಿಯೋ
1/3
general

ಜಾತಿವಾರು ಸಮೀಕ್ಷೆ: ಆನ್‌ಲೈನ್‌ ಮೂಲಕ ಸ್ವಯಂ ಭಾಗವಹಿಸುವಿಕೆಗೆ ಅವಧಿ ವಿಸ್ತರಣೆ!

By Shravanthi R
 ಜಾತಿವಾರು ಸಮೀಕ್ಷೆ: ಆನ್‌ಲೈನ್‌ ಮೂಲಕ ಸ್ವಯಂ ಭಾಗವಹಿಸುವಿಕೆಗೆ ಅವಧಿ ವಿಸ್ತರಣೆ!

ಕರ್ನಾಟಕದಲ್ಲಿ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ದಿನಾಂಕ ವಿಸ್ತರಿಸಲಾಗಿದೆ. ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆಗೆ ಅವಕಾಶ ಒದಗಿಸಿದ್ದು, ನವೆಂಬರ್‌ 30 ರವರೆಗೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಕೈಗೊಳ್ಳಲಾದ ಜಾತಿ ಸಮೀಕ್ಷೆಯು ಪೂರ್ಣಗೊಂಡಿದೆ. ಈವರೆಗೆ ಜಾತಿ ಗಣತಿದಾರರು ಮನೆ-ಮನೆಗೆ ಸಂಚರಿಸಿ ದತ್ತಾಂಶಗಳನ್ನು ಕಲೆಹಾಕಿದ್ದಾರೆ. ಶೇ.80 ರಷ್ಟು ಎಣಿಕೆಯಾಗಿದೆ ಎನ್ನಲಾಗಿದೆ. ಇದೀಗ ಇದರಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದವರು, ಜಾತೀವಾರು ಸಮೀಕ್ಷೆಯಲ್ಲಿ ಭಾಗಿಯಾಗಲು, ಮಾಹಿತಿಯನ್ನು ಆನ್‌ಲೈನ್‌ ಮೂಲಕ ನಮೂದಿಸಲು ನವೆಂಬರ್‌ 30 ರವರೆಗೆ ಕಾಲಾವಕಾಶ ನೀಡಲಾಗಿದೆ. 

ಈ ಮೂಲಕ ಹಿಂದುಳಿದ ವರ್ಗಗಳ ಆಯೋಗವು ತಿಳಿಸಿದ್ದು, https://kscbcselfdeclaration.karnataka.gov.in ಲಿಂಕ್‌ ಮೂಲಕ ಸಮೀಕ್ಷೆಗೆ ಮಾಹಿತಿಯನ್ನು ನಮೂದಿಸಬಹುದಾಗಿದೆ. ತಮ್ಮ ಮನೆಗೆ ನೀಡಲಾಗಿರುವ ಯುಎಚ್‌ಐಡಿ ಅಥವಾ ವಿದ್ಯುತ್‌ ಮೀಟರ್‌ನ ಆರ್‌ಆರ್‌ ಸಂಖ್ಯೆಯನ್ನು ಬಳಸಿ ಈ ಪೋರ್ಟಲ್‌ನಲ್ಲಿ ಮಾಹಿತಿ ತುಂಬಬಹು‌ದು ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ತಿಳಿಸಿದ್ದಾರೆ. realme 14x 5G Smartphone 6+128GB Crystal Black6,67-inch Screen, 120Hz Display, 6000mAh Battery, 80MP, MediaTek Dimensity 6300, ArmorShell Protection, IP69

ಅಕ್ಟೋಬರ್‌ 31 ಕ್ಕೆ ಸಮೀಕ್ಷೆದಾರರು ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯವಿಧಾನಗಳು ಅಂತ್ಯಗೊಂಡಿತ್ತು. ಆದಾದ ಬಳಿಕ ನವೆಂಬರ್‌ 10 ಕ್ಕೆ ಆನ್‌ಲೈನ್‌ ಮೂಲಕ ಮಾಹಿತಿ ಒದಗಿಸಲು ತಿಳಿಸಿತ್ತು. ಇದೀಗ ಈ ಕಾಲಾವಕಾಶವನ್ನು ನವೆಂಬರ್‌ 30 ರವರೆಗೆ ವಿಸ್ತರಿಸಲಾಗಿದೆ ಎಂದು ಆಯೋಗವು ತಿಳಿಸಿದೆ. ಇದನ್ನೂ ಓದಿ: ದೆಹಲಿ ಸ್ಫೋಟ: ಭದ್ರತಾ ವೈಫಲ್ಯದ ಪ್ರಶ್ನೆ; ಮೃತರ ಕುಟುಂಬಗಳ ಆಕ್ರಂದನ - ನಾಳೆ ಪ್ರಧಾನಿಗಳ ಸಮ್ಮುಖದಲ್ಲಿ ತುರ್ತು ಸಭೆ!