ಬೆಂಗಳೂರು - ಟ್ರ್ಯಾಕ್ಟರ್ ಹೆಸರಲ್ಲಿ ರೈತರಿಗೆ ವಂಚಿಸಿದ್ದ ಆರೋಪಿಯನ್ನ ಬೆಂಗಳೂರು ಚಿಕ್ಕಜಾಲ ಪೊಲೀಸರು ದೇವರಾಜ ಎಂಬ ವ್ಯಕ್ತಿಯನ್ನ ಅರೆಸ್ಟ್ ಮಾಡಲಾಗಿದೆ.
ರೈತರ ಬಳಿ ಟ್ರ್ಯಾಕ್ಟರ್ ಬಾಡಿಗೆ ನೀಡುವಂತೆ ದೇವರಾಜ ಕೇಳ್ತಿದ್ದ , ಪ್ರತಿ ತಿಂಗಳು 30 ಸಾವಿರ ಹಣವನ್ನ ಟ್ರ್ಯಾಕ್ಟರ್ ಒಂದಕ್ಕೆ ನೀಡುತ್ತಿದ್ದ ಅಂತಿದ್ದ, ಟ್ರ್ಯಾಕ್ಟರ್ ಬಾಡಿಗೆ ಪಡೆದ ವಿಚಾರವಾಗಿ ಅಗ್ರಿಮೆಂಟ್ ಕೂಡ ಮಾಡಿಸುತ್ತಿದ್ದ, ದೇವರಾಜನನ್ನ ನಂಬಿದ ರೈತರು ತಿಂಗಳ ಆದಾಯ ಸಿಗುತ್ತಂತಾ ಟ್ರ್ಯಾಕ್ಟರ್ ನೀಡಿದ್ದರು.
ಆದರೆ ಕಂತ್ರಿ ದೇವರಾಜ ಒಂದೆರಡು ತಿಂಗಳು ಟ್ರ್ಯಾಕ್ಟರ್ ಗೆ ಬಾಡಿಗೆ ನೀಡಿದಂತೆ ಮಾಡುತ್ತಿದ್ದ ಉಳಿದಂತೆ ಟ್ರ್ಯಾಕ್ಟರ್ ರನ್ನ ಬಾಗೇಪಲ್ಲಿ ಹಾಗೂ ಕರ್ನಾಟಕದ ಬಾರ್ಡರ್ ಭಾಗದ ರೈತರಿಗೆ ಹಾಫ್ ರೇಟ್ ಚೀಪ್ ರೇಟ್ ಗೆ ಮಾರುತ್ತಿದ್ದನು. ರೈತರು ದುಡ್ಡು ಕೊಡಿ ಇಲ್ಲ ಟ್ರ್ಯಾಕ್ಟರ್ ಕೊಡಿ ಅಂತ ಕೇಳಿದರೆ ದೇವರಾಜ ತಣ್ಣಗೆ ಎಸ್ಕೇಪ್ ಆಗುತ್ತಿದ್ದ ಎಂದು ದೂರು ನೀಡಿದ್ದಾರೆ.
ಟ್ರ್ಯಾಕ್ಟರ್ ಕಳಕೊಂಡ ರೈತರು ನೋಡಿ ನೋಡಿ ಸಾಕಾಗಿ ಚಿಕ್ಕಜಾಲ ಪೊಲೀಸ್ ಠಾಣೆಗೆ ಹೋಗಿ ದೂರನ್ನ ನೀಡಿದ್ದರು. Vivo V60 5G (Moonlit Blue, 8GB RAM, 256GB Storage) with No Cost EMI/Additional Exchange Offers
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ 420 ದೇವರಾಜನನ್ನ ಬಂಧಿಸಿದ್ದಾರೆ . ಈ ವಿಚಾರಣೆ ವೇಳೆ ಮೋಸ ಮಾಡೋ ಕೆಲಸ ಒಂಥರಾ ಥ್ರಿಲ್ಲು ಸ್ವಾಮಿ ಥ್ರಿಲ್ಲು ಅಂದಿದ್ನಂತೆ ದೇವರಾಜ , ಈಗ ಅದೇ ಥ್ರಿಲ್ಲಿಗೆರಡು ಏಟ್ ತಿಂದು ಇದೀಗ ಜೈಲೂಟಕ್ಕೆ ಕೂತವ್ನೆ ದೇವರಾಜನಿಂದ ಸದ್ಯ 10 ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.
ರೈತರಿಗೆ ಟ್ರ್ಯಾಕ್ಟರ್ ವಾಪಸ್ ಕೊಡಿಸೋ ಕೆಲಸ ಮಾಡುತ್ತಿರುವ ಚಿಕ್ಕಜಾಲ ಪೊಲೀಸರು ಆರೋಪಿಯನ್ನ ವೇಗವಾಗಿ ಬಂಧಿಸಿದ್ದಾರೆ. ಇದನ್ನೂ ಓದಿ: ಜಾತಿವಾರು ಸಮೀಕ್ಷೆ: ಆನ್‌ಲೈನ್ ಮೂಲಕ ಸ್ವಯಂ ಭಾಗವಹಿಸುವಿಕೆಗೆ ಅವಧಿ ವಿಸ್ತರಣೆ!