ಬೆಂಗಳೂರು - ಸಾರ್ವಜನಿಕವಾಗಿ ಮಹಿಳೆ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ ನಡೆದಿದೆ. ಇದೇ ತಿಂಗಳ(ನವೆಂಬರ್) ಮೂರನೇ ತಾರೀಖಿನಂದು ಘಟನೆ ನಡೆದಿದೆ.
ಹೈ ಗ್ರೌಂಡ್ಸ್ ವ್ಯಾಪ್ತಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿರುವ ಘಟನೆ ಇದಾಗಿದೆ. ಎರಡು ಬಾರಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖವಾಗಿದೆ. ಅಕ್ಟೋಬರ್ 31 ರಂದು ಕೂಡಾ ಇದೇ ವ್ಯಕ್ತಿ ಹಲ್ಲೆ ಮಾಡಿರೋದಾಗಿ ದೂರು ದಾಖಲಾಗಿದೆ.ಇದನ್ನು ಓದಿ; ಮಾಲಿನ್ಯದ ಹೊಗೆಯಲ್ಲಿ ದೆಹಲಿ - ಉಸಿರುಗಟ್ಟಿದ ರಾಜಧಾನಿ !
I will hunt you down ಎಂದು ಹೇಳಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಮಾಹಿತಿ ದಾಖಲಾಗಿದೆ.
ಹಲ್ಲೆಯ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದು, ಮಹಿಳೆಯ ದೂರು ಆಧರಿಸಿ ಎಫ್ಐಆರ್ ದಾಖಲು ಸಹ ಮಾಡಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಪ್ರಕ್ರಿಯೆ ಮುಗಿದಿದೆ.