Skip to main content
ವಿಡಿಯೋ
1/3
general

ಬಿಹಾರದಲ್ಲಿ ಪತ್ತೆಯಾದ ಶಾಕಿಂಗ್ ಸೈಬರ್ ಜಾಲ; ಸ್ಯಾಂಡಲ್ ವುಡ್ ಸೆಲಬ್ರಿಟಿ ದಂಪತಿಗಳಿಗೆ ಸಂಬಂಧಸಿದ ಕೈವಾಡ ಬಯಲು.?

By Shravanthi R
ಬಿಹಾರದಲ್ಲಿ ಪತ್ತೆಯಾದ ಶಾಕಿಂಗ್ ಸೈಬರ್ ಜಾಲ; ಸ್ಯಾಂಡಲ್ ವುಡ್ ಸೆಲಬ್ರಿಟಿ ದಂಪತಿಗಳಿಗೆ ಸಂಬಂಧಸಿದ ಕೈವಾಡ ಬಯಲು.?

ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರ ಮೊಬೈಲ್‌ ಹ್ಯಾಕ್‌ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಇಂದು ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು - ರಿಯಲ್ ಸ್ಟಾರ್ ನಟ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸರು ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಆದರೆ, ಆರೋಪಿ ಬಂಧನಕ್ಕೆ ಬಿಹಾರಕ್ಕೆ ತೆರಳಿದ ಪೊಲೀಸರು ಅಲ್ಲಿನ ಸೈಬರ್ ಅಪರಾಧ ಜಾಲದ ಸ್ವರೂಪ ನೋಡಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಬಿಹಾರದ ಆರೋಪಿ ವಿಕಾಸ್ ಕುಮಾರ್‌ನ ಗ್ರಾಮದಲ್ಲಿ ಸುಮಾರು 20 ರಿಂದ 25 ವರ್ಷ ವಯಸ್ಸಿನ 150ಕ್ಕೂ ಹೆಚ್ಚು ಯುವಕರು ಸೈಬರ್ ಅಪರಾಧ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಸದ್ಯ, ಬಂಧಿತ ಆರೋಪಿ ವಿಕಾಸ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಹ್ಯಾಕ್ ನಡೆದಿದ್ದು ಹೇಗೆ ?

ಸೆಪ್ಟೆಂಬರ್ 15 ರಂದು ನಟಿ ಪ್ರಿಯಾಂಕಾ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದರು. ಈ ವೇಳೆ ಅವರ ಮೊಬೈಲ್‌ಗೆ ಬಂದ ಒಂದು ದುರುದ್ದೇಶಪೂರಿತ ಲಿಂಕ್ ಅನ್ನು ಕ್ಲಿಕ್ ಮಾಡಿದ ಕೂಡಲೇ ಅವರ ಮೊಬೈಲ್ ಮತ್ತು ವಾಟ್ಸಾಪ್ ಹ್ಯಾಕ್ ಆಗಿದೆ.

ವಾಟ್ಸಾಪ್ ಹ್ಯಾಕ್ ಮಾಡಿದ ಸೈಬರ್ ಖದೀಮ, ಪ್ರಿಯಾಂಕಾ ಅವರ ಸಂಪರ್ಕದಲ್ಲಿದ್ದ ಹಲವರಿಗೆ ತುರ್ತಾಗಿ 55000 ರೂ. ಹಣ ಬೇಕಿದೆ ಎಂದು ಮೆಸೇಜ್ ಮಾಡಿದ್ದಾನೆ. OPPO A5 5G (Aurora Green, 6GB RAM, 128GB Storage) with No Cost EMI/Additional Exchange Offers

ಆರೋಪಿ ಯಾರೆಂದು ತಿಳಿಯಲು ಪ್ರಿಯಾಂಕಾ ಅವರು ಪತಿ ಉಪೇಂದ್ರ ಮತ್ತು ಮ್ಯಾನೇಜರ್‌ನ ನಂಬರ್‌ನಿಂದ ಕರೆ ಮಾಡಲು ಪ್ರಯತ್ನಿಸಿದಾಗ ಖದೀಮ ಆ ಎರಡು ನಂಬರ್‌ಗಳನ್ನೂ ಹ್ಯಾಕ್ ಮಾಡಿದ್ದಾನೆ.

ಪ್ರಿಯಾಂಕಾ ಅವರ ವಾಟ್ಸಾಪ್‌ನಿಂದ ಬಂದ ಸಂದೇಶವನ್ನು ನಂಬಿದ ಕೆಲವರು ತಕ್ಷಣವೇ ಹಣವನ್ನು ವರ್ಗಾಯಿಸಿದ್ದಾರೆ. ಸ್ವತಃ ಉಪೇಂದ್ರ ದಂಪತಿಯ ಪುತ್ರ ಕೂಡ ತಾಯಿ ಸಂದೇಶ ಕಳುಹಿಸಿದ್ದಾರೆ ಎಂದು ನಂಬಿ ವಂಚಕರ ಅಕೌಂಟ್‌ಗೆ 50000 ರೂ ಹಣವನ್ನು ವರ್ಗಾಯಿಸಿದ್ದಾರೆ.

ಅನುಮಾನಗೊಂಡ ಕೆಲವರು ಪ್ರಿಯಾಂಕಾ ಅವರ ನಂಬರ್‌ಗೆ ಕರೆ ಮಾಡಿದಾಗ ಕರೆ ಕಟ್ ಆಗುತ್ತಿತ್ತು. ಆಗ ವಿಷಯ ತಿಳಿದು ತಕ್ಷಣ ಸದಾಶಿವನಗರ ಠಾಣೆಗೆ ದೂರು ನೀಡಲಾಗಿದೆ.ದೂರು ನೀಡುವ ಹೊತ್ತಿಗೆ ಸೈಬರ್ ವಂಚಕರ ಖಾತೆಗೆ ಒಂದೂವರೆ ಲಕ್ಷ ರೂಪಾಯಿ ಲಕ್ಷ ಹಣ ಈಗಾಗಲೇ ವರ್ಗಾವಣೆಯಾಗಿತ್ತು.

ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಸದಾಶಿವನಗರ ಪೊಲೀಸರು ತನಿಖೆ ನಡೆಸಿ ಆರೋಪಿಯು ಬಿಹಾರದ ದಶರತಪುರದ ನಿವಾಸಿ ವಿಕಾಸ್ ಕುಮಾರ್ ಎಂದು ಪತ್ತೆಹಚ್ಚಿ ಆತನನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಯ ವಿಚಾರಣೆ ಮುಂದುವರೆದಿದ್ದು ಈ ಸೈಬರ್ ಜಾಲದ ಮೂಲವನ್ನು ಭೇದಿಸುವ ಪ್ರಯತ್ನ ನಡೆದಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಕೊಡಿಸುತ್ತೀನೆಂದು ವಂಚಿಸಿದ್ದ ಆರೋಪದಡಿ ವ್ಯಕ್ತಿ ಅರೆಸ್ಟ್ ?!