Skip to main content
ವಿಡಿಯೋ
1/3
politics

ಬಿಹಾರ ವಿಧಾನಸಭಾ ಚುನಾವಣೆ 2025-ಎಕ್ಸಿಟ್ ಪೋಲ್ ಫಲಿತಾಂಶಗಳ ಬಿಡುಗಡೆ

By Shravanthi R
ಬಿಹಾರ ವಿಧಾನಸಭಾ ಚುನಾವಣೆ 2025-ಎಕ್ಸಿಟ್ ಪೋಲ್ ಫಲಿತಾಂಶಗಳ ಬಿಡುಗಡೆ

ಬಿಹಾರ ವಿಧಾನಸಭಾ ಚುನಾವಣೆ ಎಕ್ಸಿಟ್‌ ಪೋಲ್‌ಗಳು ಬಿಡುಗಡೆಯಾಗಿದ್ದು, ರಾಜಕೀಯ ಪೈಪೋಟಿಗೆ, ಅಂತಿಮ ಮತ ಎಣಿಕೆಗೆ ಉತ್ಸುಕತೆ ಶುರುವಾಗಿದೆ ಎಂದೆನಿಸಿದೆ.

ಬಿಹಾರ - ​ಬಿಹಾರ ವಿಧಾನಸಭಾ ಚುನಾವಣೆ 2025 ರ ಮತದಾನ ಮುಕ್ತಾಯಗೊಂಡಿದ್ದು ಎಲ್ಲರ ಕುತೂಹಲ ಕೆರಳಿಸಿದ್ದ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ. ಈ ಫಲಿತಾಂಶಗಳು ಬಿಹಾರದ ಮುಂದಿನ ರಾಜಕೀಯ ಚಿತ್ರಣದ ಒಂದು ಸ್ಪಷ್ಟ ಸುಳಿವನ್ನು ನೀಡಿದ್ದು ಯಾವ ಪಕ್ಷ ಅಥವಾ ಮೈತ್ರಿಕೂಟಕ್ಕೆ ಅಧಿಕಾರ ಸಿಗಬಹುದು ಎಂಬುದರ ಅಂದಾಜು ಲಭ್ಯವಾಗಿದೆ.

​ಕೆಲ ಮಾಧ್ಯಮ ಸಂಸ್ಥೆಗಳು ಮತ್ತು ಸಮೀಕ್ಷಾ ಏಜೆನ್ಸಿಗಳು ಬಿಡುಗಡೆ ಮಾಡಿರುವ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊಂದಿದೆ.

NDA ಕೂಡದ ಬಿಜೆಪಿ + ಜೆಡಿಯು ಮತ್ತು ಇತರೆಗೆ 117 ಸ್ಥಾನಗಳು , ಮಹಾಘಟಬಂಧನದ ಆರ್ ಜೆಡಿ ಹಾಗೂ ಕಾಂಗ್ರೆಸ್ ಸೇರಿದಂತೆ ಇತರೆಗೆ 102 ಸ್ಥಾನ , ಇತರೆ 12 ಸ್ಥಾನ ಗಳಿಸಲಿದೆ ಎಂದು ಲೆಕ್ಕ ಮಾಡಲಾಗಿದೆ.

ಒಟ್ಟು 243 ಸ್ಥಾನಗಳಿದ್ದು ,ಮ್ಯಾಜಿಕ್ ನಂಬರ್ 122 ಆಗಿದೆ. Redmi 13 5G Prime Edition, Hawaiian Blue, 8GB+128GB | India Debut SD 4 Gen 2 AE | 108MP Pro Grade Camera | 6.79in Largest Display in Segment

ಪೋಲ್ ಪ್ರಕಾರ ಯಾವ ಮೈತ್ರಿಕೂಟಕ್ಕೂ ಸ್ಪಷ್ಟ ಬಹುಮತದ ಗಡಿ 122 ಸುಲಭವಾಗಿ ಸಿಗದಿರುವ ಸಾಧ್ಯತೆ ಇದೆ.

ಕಾರಣ ಈ ಬಾರಿ ಯುವಕರು ಮತ್ತು ಉದ್ಯೋಗದ ವಿಷಯವೇ ಪ್ರಮುಖವಾಗಿತ್ತು. ಆದರೆ ಯುವ ಮತದಾರರ ಒಲವು ಎಲ್ಲಿಗೆ ಹೋಗಿದೆ ಎಂಬುದರ ಕುರಿತು ಎಕ್ಸಿಟ್ ಪೋಲ್‌ಗಳಲ್ಲಿ ಗೊಂದಲದ ಚಿತ್ರಣ ಕಂಡುಬಂದಿದೆ.

​ಈ ಬಾರಿ 15 ರಿಂದ 25 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇರುವ ಇತರ ಪಕ್ಷಗಳು ಸ್ವತಂತ್ರ ಅಭ್ಯರ್ಥಿಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಇದು ಅತಂತ್ರ ಸ್ಥಿತಿ ಸೃಷ್ಟಿಯಾದರೆ ಮುಂದಿನ ರಾಜಕೀಯ ನಡೆಗಳು ನಿರ್ಣಾಯಕವಾಗುತ್ತವೆ.

​ಎಕ್ಸಿಟ್ ಪೋಲ್‌ಗಳು ಕೇವಲ ಅಂದಾಜಗಿದ್ದರೂ ಮತ ಎಣಿಕೆ ದಿನಾಂಕದಂದು ನಿಜವಾದ ಚಿತ್ರಣ ಹೊರಬೀಳಲಿದೆ.

​ಎಲ್ಲರ ಚಿತ್ತ ನವೆಂಬರ್ 15 ರತ್ತ ಬಿಹಾರದ ಮಹಾ ಸಮರದ ಅಂತಿಮ ಫಲಿತಾಂಶಕ್ಕಾಗಿ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಇದನ್ನೂ ಓದಿ: ಸಿದ್ದು - ಡಿಕೆಶಿ ನಡುವೆ ಕೋಲ್ಡ್ ಡಿಶುಂ ಡಿಶುಂ ಡೆಲ್ಲಿ To ಬೆಂಗಳೂರು ಶಿಫ್ಟ್ ..!