ನವದೆಹಲಿ - ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಸಂಬಂಧ ನವೆಂಬರ್ ಕ್ರಾಂತಿ ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ ದೆಹಲಿ ನಾಯಕರನ್ನ ಭೇಟಿ ಮಾಡಲು ಹೋಗಿದ್ದ ಸಚಿವ ಸತೀಶ್ ಜಾರಕಿಹೊಳಿ ಈಗ ತಮ್ಮ ಸಂದೇಶವನ್ನ ಕೇಂದ್ರ ನಾಯಕರಿಗೆ ತಲುಪಿಸಿ ವಾಪಸ್ಸ್ ಆಗುತ್ತಿದ್ದಾರೆ.
ಹೌದು , ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿ ಭೇಟಿ ಕುತೂಹಲ ಮೂಡಿಸಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಸೇರಿ ಕಾಂಗ್ರೆಸ್ ಮತ್ತೊಬ್ಬ ಹಿರಿಯ ನಾಯಕರನ್ನು ಭೇಟಿಯಾಗಿರುವ ಜಾರಕಿಹೊಳಿ. Naixa Women's Silk Blend Embroidered Lakhnavi Work Straight Kurta with Pant And Dupatta Sets (NX-M-Morni)
ನಿನ್ನೆ ಅರ್ಧಗಂಟೆಗೂ ಹೆಚ್ಚು ಹೊತ್ತು ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸಂದೇಶವನ್ನು ಸುರ್ಜೇವಾಲ ಮತ್ತು ಇತರೆ ನಾಯಕರಿಗೆ ಜಾರಕಿಹೊಳಿ ಮುಟ್ಟಿಸಿದ್ದಾರೆ ಎಂದು ಮೂಲಗಳು ತಿಳಿಸುತ್ತಿದೆ. ಕಾಂಗ್ರೆಸ್ ಆಂತರಿಕ ಕುರ್ಚಿ ಕಿತ್ತಾಟ ಎಲ್ಲಿಗೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.ಇದನ್ನು ಓದಿ: ಟ್ರ್ಯಾಕ್ಟರ್ ಕೊಡಿಸುತ್ತೀನೆಂದು ವಂಚಿಸಿದ್ದ ಆರೋಪದಡಿ ವ್ಯಕ್ತಿ ಅರೆಸ್ಟ್ ?!
ರಾಜ್ಯ ಕಾಂಗ್ರೆಸ್‌ನಲ್ಲಿ ಆರಂಭವಾಗಿರುವ ಈ ಆಂತರಿಕ ಕುರ್ಚಿ ಕಿತ್ತಾಟ ದೆಹಲಿ ನಾಯಕರ ಹಸ್ತಕ್ಷೇಪದ ನಂತರ ಯಾವ ನಿರ್ಣಾಯಕ ಹಂತ ತಲುಪುತ್ತದೆ ಮತ್ತು ಹೈಕಮಾಂಡ್‌ನ ಅಂತಿಮ ನಿರ್ಧಾರ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.ಇದನ್ನು ಓದಿ: ಬಿಹಾರದಲ್ಲಿ ಪತ್ತೆಯಾದ ಶಾಕಿಂಗ್ ಸೈಬರ್ ಜಾಲ; ಸ್ಯಾಂಡಲ್ ವುಡ್ ಸೆಲಬ್ರಿಟಿ ದಂಪತಿಗಳಿಗೆ ಸಂಬಂಧಸಿದ ಕೈವಾಡ ಬಯಲು.?