Skip to main content
ವಿಡಿಯೋ
1/3
globalnews

ಉದ್ಘಾಟನೆಗೊಂಡ ಕೆಲ ತಿಂಗಳಲ್ಲೇ ಕುಸಿದ ಬೃಹತ್‌ ಸೇತುವೆ - ಚೀನಾ ಸರ್ಕಾರಕ್ಕೆ ಮುಖಭಂಗ!

By Shravanthi R
ಉದ್ಘಾಟನೆಗೊಂಡ ಕೆಲ ತಿಂಗಳಲ್ಲೇ ಕುಸಿದ ಬೃಹತ್‌ ಸೇತುವೆ - ಚೀನಾ ಸರ್ಕಾರಕ್ಕೆ ಮುಖಭಂಗ!

ನೈಋತ್ಯ ಚೀನಾದಲ್ಲಿ ಉಂಟಾದ ಭಾರೀ ಭೂಕುಸಿತದ ಪರಿಣಾಮವೆನ್ನಲಾಗಿ ಹೊಸದಾಗಿ ನಿರ್ಮಿತವಾದ ಹಾಂಗ್ಕಿ ಸೇತುವೆ ಕುಸಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ವಿಶ್ವದಾದ್ಯಂತ ಪ್ರಚಾರ ಮಾಡಿ ಬೃಹತ್‌ ಸೇತುವೆ ನಿರ್ಮಿಸಿದ್ದ ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ ಸೇತುವೆ ಕುಸಿದುಬಿದ್ದಿದೆ. ಉದ್ಘಾಟನೆಯಾದ ಕೆಲ ತಿಂಗಳಲ್ಲೇ ಹಾಂಗ್ಕಿ ಸೇತುವೆ ಭೂಕುಸಿತದ ಪರಿಣಾಮ ಸಂಪೂರ್ಣ ಜಖಂಗೊಂಡಿರುವ ವಿಡಿಯೋ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. 

ಭಾರೀ ಪ್ರಮಾಣದಲ್ಲಿ ವೆಚ್ಚ ಭರಿಸಿ ಅಲ್ಲಿನ ಸರ್ಕಾರವು ನಿರ್ಮಿಸಿದ್ದ ಈ ಸೇತುವೆಯನ್ನು ವಿಶ್ವಕ್ಕೆ ಪರಿಚಯಿಸಲಾಗಿದ್ದು, ಇದೀಗ ಕುಸಿದಿರುವುದರಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಬ್ರಿಡ್ಜ್‌ ಕುಸಿತದ ವಿಡಿಯೋ ವ್ಯಾಪಕವಾಗಿ ಶೇರ್‌ ಆಗುತ್ತಿದ್ದು, ಚೀನಾದ ಹೃದಯಭಾಗವನ್ನು ಟಿಬೆಟ್‌ನೊಂದಿಗೆ ಸಂಪರ್ಕಿಸುವ ಈ ಸೇತುವೆ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಇದರಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. Samsung Galaxy M17 5G (Moonlight Silver, 4GB RAM, 128GB Storage)| 50MP OIS Triple Camera| Gorilla Glass Victus| IP54 Rating| 6 Gen of OS Upgrades| AI| Circle to Search| Gemini Live| Without Charger

ಚೀನಾದ ತಾಂತ್ರಿಕತೆ ಹಾಗೂ ಇಂಜಿನಿಯರಿಂಗ್ ಪರಾಕ್ರಮದ ಸಂಕೇತವೆಂದು ಹೇಳಲಾಗಿದ್ದ ಈ ಸೇತುವೆಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದನ್ನು ಇಂಜಿನಿಯರಿಂಗ್‌ ನಿರ್ಲಕ್ಷ್ಯವೆಂದು ಹೇಳುತ್ತಿರುವುದು ಒಂದೆಡೆಯಾದರೆ, ಇದು ನೈಸರ್ಗಿಕ ವಿಕೋಪದಿಂದುಂಟಾದ ಘಟನೆಯೆಂದು ಹೇಳಲಾಗುತ್ತಿದೆ. ಈ ಬಗ್ಗೆ ಚೀನಾ ಸರ್ಕಾರವು ತನಿಖೆಗೆ ಆದೇಶಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಜೋಧ್‌ಪುರದಲ್ಲಿ ಭಾರೀ ಸ್ಪೋಟದ ಸದ್ದು - ಕಂಗಾಲಾದ ಜನರು ಕಾರಣ ತಿಳಿದು ನಿರಾಳ?!