Skip to main content
ವಿಡಿಯೋ
1/3
local

ಕಾರ್ ಸನ್‌ರೂಫ್ ದುರ್ಬಳಕೆ: ಮಕ್ಕಳ ಜೀವಕ್ಕೆ ಅಪಾಯವಾದ ಹಿನ್ನೆಲೆ; ಕಠಿಣ ಕ್ರಮಕ್ಕೆ ಸಾರಿಗೆ ಇಲಾಖೆ ಎಚ್ಚರಿಕೆ

By Bhavana Gowda
ಕಾರ್ ಸನ್‌ರೂಫ್ ದುರ್ಬಳಕೆ: ಮಕ್ಕಳ ಜೀವಕ್ಕೆ ಅಪಾಯವಾದ ಹಿನ್ನೆಲೆ; ಕಠಿಣ ಕ್ರಮಕ್ಕೆ ಸಾರಿಗೆ ಇಲಾಖೆ ಎಚ್ಚರಿಕೆ

ಐಷಾರಾಮಿ ಕಾರುಗಳ ಸನ್‌ರೂಫ್ (Sunroof) ಮೂಲಕ ಮಕ್ಕಳು ಹೊರಗೆ ನಿಂತು ಪ್ರಯಾಣಿಸುವುದು ಈಗ ಫ್ಯಾಷನ್ ಆಗಿದೆ.

ಬೆಂಗಳೂರು: ಐಷಾರಾಮಿ ಕಾರುಗಳ ಸನ್‌ರೂಫ್ (Sunroof) ಮೂಲಕ ಮಕ್ಕಳು ಹೊರಗೆ ನಿಂತು ಪ್ರಯಾಣಿಸುವುದು ಈಗ ಫ್ಯಾಷನ್ ಆಗಿದೆ. ಆದರೆ, ಇದು ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿದ್ದು, ಇಂತಹ ಸಾಲು ಸಾಲು ಅವಘಡಗಳ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ (Transport Department) ಎಚ್ಚೆತ್ತುಕೊಂಡಿದೆ. ಸನ್‌ರೂಫ್ ದುರ್ಬಳಕೆ ಮಾಡುವ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಗಂಭೀರ ಅಪಘಾತದಿಂದ ಎಚ್ಚರಿಕೆ

ಇತ್ತೀಚೆಗೆ ಬೆಂಗಳೂರಿನ ವಿದ್ಯಾರಣ್ಯಪುರ (Vidyaranyapura) ದಲ್ಲಿ ನಡೆದ ಗಂಭೀರ ಘಟನೆಯೊಂದು ಈ ಅಪಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸನ್‌ರೂಫ್ ಮೇಲೆ ನಿಂತು 'ಜಾಲಿ ರೈಡ್' ಮಾಡುತ್ತಿದ್ದ ಮಗುವಿಗೆ ರಸ್ತೆಯ ಮೇಲಿದ್ದ ಕಬ್ಬಿಣದ ಕಮಾನು (Iron Arch) ಬಡಿದು ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ಮಗು ತೀವ್ರವಾಗಿ ಗಾಯಗೊಂಡಿದ್ದು, ಸನ್‌ರೂಫ್‌ನಲ್ಲಿ ನಿಲ್ಲುವ ಅಪಾಯದ ಬಗ್ಗೆ ಎಚ್ಚರಿಕೆ ಗಂಟೆ ಬಾರಿಸಿದೆ.

ಸಾರಿಗೆ ಇಲಾಖೆಯಿಂದ ಕಠಿಣ ಕ್ರಮದ ಮುನ್ಸೂಚನೆ

ಈ ಘಟನೆ ಮತ್ತು ಇತರ ಹಲವು ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ, ಸನ್‌ರೂಫ್ ಬಳಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಮಾಧ್ಯಮದರಿಗೆ ಹೇಳಿಕೆ ನೀಡಿರುವ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಓಂಕಾರೇಶ್ವರಿ ಅವರು ಈ ಕುರಿತು ಮಾತನಾಡಿದ್ದಾರೆ:

"ಕಾರ್ ಸನ್‌ರೂಫ್‌ನಲ್ಲಿ ಮಕ್ಕಳು ನಿಂತು ಪ್ರಯಾಣಿಸುವುದರಿಂದ ಸಾಕಷ್ಟು ಅವಘಡಗಳು ಆಗುತ್ತಿವೆ. ಮೊದಲು ನಾವು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಜಾಗೃತಿ ನೀಡಿದ ನಂತರವೂ ಇಂತಹ ಘಟನೆಗಳು ಕಂಡುಬಂದರೆ, ಅಂತಹ ಕಾರ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು."

ಓಂಕಾರೇಶ್ವರಿ, ಹೆಚ್ಚುವರಿ ಆಯುಕ್ತರು, ಸಾರಿಗೆ ಇಲಾಖೆ.

ಇಲಾಖೆಯ ಈ ಹೇಳಿಕೆಯು, ಸನ್‌ರೂಫ್ ಮೂಲಕ ಮಕ್ಕಳನ್ನು ನಿಲ್ಲಿಸಿ ಪ್ರಯಾಣಿಸುವ ಪೋಷಕರು ಮತ್ತು ವಾಹನ ಮಾಲೀಕರಿಗೆ ಗಂಭೀರ ಎಚ್ಚರಿಕೆಯಾಗಿದೆ.