Skip to main content
ವಿಡಿಯೋ
1/3
general

ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ ನಯನತಾರಾ ದಂಪತಿ

By Shravanthi R
ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ ನಯನತಾರಾ ದಂಪತಿ

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರು ನವೆಂಬರ್‌ 12(ಬುಧವಾರ) ದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದರು.

ಬಹುಭಾಷಾ ಸುಪ್ರಸಿದ್ದ ನಟಿ ನಯನತಾರಾ ದಂಪತಿ ನವೆಂಬರ್‌ 12 (ಬುಧವಾರ) ರಂದು ರಾಜ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.

ದೇವರ ದರ್ಶನ ಪಡೆದು ಸೇವೆಗಳನ್ನು ನೆರವೇರಿಸಿದ್ದಾರೆ. ಹೊಸಳಿಗಮ್ಮನ ದರ್ಶನ ಪಡೆದು ಸರ್ಪ ಸಂಸ್ಕಾರ ಸೇವೆ ನೆರವೇರಿಸಿದರು ಎನ್ನಲಾಗಿದೆ. OnePlus 13 | Smarter with OnePlus AI | Lifetime Display Warranty |12GB RAM 256GB Storage Midnight Ocean | Official Smartphone for BGMS 2025

ಲೇಡಿ ಸೂಪರ್‌ ಸ್ಟಾರ್‌ ನಟಿ, ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್‌ ನಟಿ ನಯನತಾರಾ ಹಾಗೂ ಅವರ ಪತಿ ಖ್ಯಾತ ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರನ್ನು ದೇವಸ್ಥಾನದ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು ಆನಂತರ ಪ್ರಸಾದ ಸ್ವೀಕರಿಸಿದ ಅವರು ಸರ್ಪಸಂಸ್ಕಾರ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಇಂಜಾಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾರ್ ಸನ್‌ರೂಫ್ ದುರ್ಬಳಕೆ: ಮಕ್ಕಳ ಜೀವಕ್ಕೆ ಅಪಾಯವಾದ ಹಿನ್ನೆಲೆ; ಕಠಿಣ ಕ್ರಮಕ್ಕೆ ಸಾರಿಗೆ ಇಲಾಖೆ ಎಚ್ಚರಿಕೆ