Skip to main content
ವಿಡಿಯೋ
1/3
cinema

ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ʻಮಂದಾಕಿನಿʼಯಾಗಿ ಕಮ್‌ಬ್ಯಾಕ್‌ ಮಾಡ್ತಿದ್ದಾರೆ ದೇಸಿ ಬ್ಯೂಟಿ ಪ್ರಿಯಾಂಕಾ ಚೋಪ್ರಾ!

By Shravanthi R
ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ʻಮಂದಾಕಿನಿʼಯಾಗಿ ಕಮ್‌ಬ್ಯಾಕ್‌ ಮಾಡ್ತಿದ್ದಾರೆ ದೇಸಿ ಬ್ಯೂಟಿ ಪ್ರಿಯಾಂಕಾ ಚೋಪ್ರಾ!

ʻಎಸ್‌ಎಸ್‌ಎಂಬಿ 29ʼ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ. ಇದೀಗ ಸಿನಿರಸಿಕರಲ್ಲಿ ಕ್ರೇಜ್‌ ಹುಟ್ಟಿಸಿದೆ.

ಬಾಹುಬಲಿ, ಆರ್‌ಆರ್‌ಆರ್‌ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಎಸ್‌ಎಸ್‌ ರಾಜಮೌಳಿಯವರು ನಿರ್ದೇಶಿಸಿರುವ ʻಎಸ್‌ಎಸ್‌ಎಂಬಿ 29ʼ ಸಿನಿಮಾದಲ್ಲಿ ನಟಿಸಿದ್ದಾರೆ ವಿಶ್ವದ ಬ್ಯೂಟಿ ಕ್ಷೀನ್‌ ಪ್ರಿಯಾಂಕ ಚೋಪ್ರಾ. ಬಹುನಿರೀಕ್ಷಿತವಾದ ಈ ಸಿನಿಮಾದಲ್ಲಿ ಮಂದಾಕಿನಿ ಎಂಬ ಪಾತ್ರಧಾರಿಣಿಯಾಗಿ ಕಾಣಿಸಿಕೊಂಡಿರುವ ಅವರ ಫಸ್ಟ್‌ಲುಕ್‌ ಅನ್ನು ನಿರ್ದೇಶಕ ರಾಜಮೌಳಿ ಅವರು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡ್ಲಿಂಗ್‌ನಲ್ಲಿ ಹಂಚಿಕೊಂಡಿದ್ದಾರೆ. 

ಈ ಬಳಿಕ ವೈರಲ್‌ ಆಗಿರುವ ಈ ಪೋಸ್ಟರ್‌, ಪ್ರಿಯಾಂಕ ಅವರ ಡಿಫರೆಂಟ್‌ ಅಂಡ್‌ ಯುನಿಕ್‌ ಲುಕ್‌ ಎಲ್ಲೆಡೆ ಗಮನ ಸೆಳೆದಿದೆ. ಬಹುದಿನಗಳ ಕಾಲ ಭಾರತೀಯ ಸಿನಿಮಾದಿಂದ ‌ಬ್ರೇಕ್‌ ಪಡೆದಿದ್ದ ಪ್ರಿಯಾಂಕ ಈ ಮೂಲಕ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎನ್ನಲಾಗಿದೆ. ಮಹೇಶ್‌ ಬಾಬು ಅವರು ನಟಿಸಲಿರುವ ಈ ಚಿತ್ರಕ್ಕೆ ಇನ್ನೂ ಅಧಿಕೃತ ಶೀರ್ಷಿಕೆಯನ್ನು ತಿಳಿಸಿಲ್ಲ. ಆದರೂ, ತಾತ್ಕಾಲಿಕವಾಗಿ ʻಎಸ್‌ಎಸ್‌ಎಂಬಿ 29ʼ ಎನ್ನಲಾಗಿದೆ. ಸ್ಟಾರ್‌ ಘಟಾನುಘಟಿಗಳು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ ಎನ್ನಲಾಗಿದೆ. 

ನವೆಂಬರ್‌ 15 ರಂದು ‘ಗ್ರ್ಯಾಂಡ್ ಗ್ಲೋಬ್ ಟ್ರಾಟರ್’ ಕಾರ್ಯಕ್ರಮ ನಡೆಯಲಿದ್ದು, ಇದು ಅತ್ಯಂತ ಗ್ರಾಂಡ್‌ ಕಾರ್ಯಕ್ರಮವಾಗಿರಲಿದೆ. ಈ ಸಂದರ್ಭದಲ್ಲಿ  ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ನಿರ್ದೇಶಕ ರಾಜಮೌಳಿ. ಈ ಕಾರ್ಯಕ್ರಮಕ್ಕೂ ಮುನ್ನವೇ ಪ್ರಿಯಾಂಕಾ ಅವರ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ್ದು, ಸೀರೆ ಧರಿಸಿ, ಕೈಯಲ್ಲಿ ಗನ್‌ ಹಿಡಿದಿರುವ ದೃಶ್ಯ ಮೋಡಿ ಮಾಡಿದೆ. ಇನ್ನು, ಈಗಾಗಲೇ ಪೃಥ್ವಿರಾಜ್‌ ಸುಕುಮಾರನ್‌ ಅವರ ಲುಕ್‌ ಚರ್ಚೆ ಸೃಷ್ಟಿಸಿದೆ. realme 15 Pro 5G Smartphone 12+256GB Green,4K 60FPS,144Hz HyperGlow 4D Curve Display,7000mAh Battery,80W SuperVOOC, Camera Triple 50MP, Snapdragon 7 Gen 4, IP69

ಈ ಬಗ್ಗೆ ಪ್ರಿಯಾಂಕ ಚೋಪ್ರಾ ಅವರು ಕೂಡ ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡ್ಲಿಂಗ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಅವರ ಅಭಿಮಾನಿಗಳಲ್ಲಿ ಕ್ರೇಜ್‌ ಹುಟ್ಟುಹಾಕಿದೆ. ಎಂದಿನಂತೆ ರಾಜಮೌಳಿಯವರು ತಮ್ಮ ವಿನೂತನ ಹಾಗೂ ವಿಭಿನ್ನ ಸಿನಿಮಾ ನಿರ್ದೇಶನಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಜಾಗತಿಕ ಮಟ್ಟದಲ್ಲಿ, ಈ ಸಿನಿಮಾದ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಕಾತರಿಸಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ ನಯನತಾರಾ ದಂಪತಿ