Skip to main content
ವಿಡಿಯೋ
1/3
globalnews

ದೆಹಲಿ ಸ್ಪೋಟ ಪ್ರಕರಣ: ಭಾರತಕ್ಕೆ ನಮ್ಮ ಸಹಾಯದ ಅಗತ್ಯವಿಲ್ಲ - ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ

By Shravanthi R
ದೆಹಲಿ ಸ್ಪೋಟ ಪ್ರಕರಣ: ಭಾರತಕ್ಕೆ ನಮ್ಮ ಸಹಾಯದ ಅಗತ್ಯವಿಲ್ಲ - ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ

ದೆಹಲಿಯ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ತನಿಖಾಧಿಕಾರಿಗಳ ಕುರಿತು ಮೆಚ್ಚುಗೆ ತೋರಿದ್ದು ಭಾರತಕ್ಕೆ ನಮ್ಮ ಸಹಾಯದ ಅಗತ್ಯವಿಲ್ಲ ಎಂದಿದ್ದಾರೆ.

ಬುಧವಾರ ಕೆನಡಾದಲ್ಲಿ ನಡೆದ ಜಿ7 ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಮಾತನಾಡಿದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಇದೊಂದು ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ. ಮತ್ತೊಂದೆಡೆ ಭಾರತದ ಅಧಿಕಾರಿಗಳ ಕಾರ್ಯವೈಖರಿಯನ್ನು ಹೊಗಳಿದ್ದಾರೆ. ತನಿಖೆ ಕುರಿತು, ಭಾರತಕ್ಕೆ ನಮ್ಮ ನೆರವಿನ ಅಗತ್ಯವಿಲ್ಲವೆಂದು ಹೇಳಿಕೆ ನೀಡಿದ್ದಾರೆ. 

ಈ ಘಟನೆಯು ಭಯೋತ್ಪಾದನೆಯ ಮೂಲೋದ್ದೇಶದಿಂದ ಆಗಿದೆ. ಈ ಕುರಿತು ನಾವು ಸಹಕರಿಸಲು ಮುಂದಾಗಿದ್ದೆವು. ಆದರೆ, ಭಾರತದ ಅಧಿಕಾರಿಗಳು ತನಿಖೆ ನಡೆಸಲು ಸಮರ್ಥರಾಗಿದ್ದಾರೆ. ಅವರ ಕೆಲಸವನ್ನು ಬಣ್ಣಿಸಿದ ಅವರು, ಭಾರತಕ್ಕೆ ನಮ್ಮ ಸಹಾಯದ ಅಗತ್ಯವಿಲ್ಲ ಎಂದಿದ್ದಾರೆ.  realme C71 4G Smartphone 6GB+128GB Sea Blue, 6.745 inch Screen, 90Hz Eye Comfort Display, 6300mAh Battery, 37MP Cameras, Unisoc T7250 Chip, IP54

ವಿದೇಶಾಂಗ ಸಚಿವ ಜೈಶಂಕರ್‌ ಭೇಟಿ -

ಮಾರ್ಕೊ ರೂಬಿಯೊ ಅವರು, ನಯಾಗರದ ನಡೆದ  ಜಿ7 ವಿದೇಶಾಂಗ ಮಂತ್ರಿಗಳ ಸಭೆಯ ಹೊರತಾಗಿ, ನವೆಂಬರ್‌ 12 ರಂದು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ಮಧ್ಯೆ ಅವರು ಜಾಗತಿಕ ಹಾಗೂ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ. ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ʻಮಂದಾಕಿನಿʼಯಾಗಿ ಕಮ್‌ಬ್ಯಾಕ್‌ ಮಾಡ್ತಿದ್ದಾರೆ ದೇಸಿ ಬ್ಯೂಟಿ ಪ್ರಿಯಾಂಕಾ ಚೋಪ್ರಾ!