Skip to main content
ವಿಡಿಯೋ
1/3
politics

ಪೆಟ್ರೋಲ್‌ ಬೆಲೆ ದುಬಾರಿ - ಜನರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಿದ ಸರ್ಕಾರ - ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿ!

By Shravanthi R
ಪೆಟ್ರೋಲ್‌ ಬೆಲೆ ದುಬಾರಿ - ಜನರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಿದ ಸರ್ಕಾರ - ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿ!

ಮತ್ತೊಮ್ಮೆ ಪೆಟ್ರೋಲ್‌ ಬೆಲೆ ಏರಿಕೆ ಮಾಡುವಂತೆ ಸರ್ಕಾರದ ಪ್ರಸ್ತಾಪದ ಕುರಿತು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು ಕಟುವಾಗಿ ಟೀಕೆ ಮಾಡಿ ಪ್ರಶ್ನಿಸಿದ್ದಾರೆ.

ಪೆಟ್ರೋಲ್‌ ದರ ಮತ್ತೆ ಏರಿಕೆ ಮಾಡುವ ಸರ್ಕಾರದ ಪ್ರಸ್ತಾಪದ ಕುರಿತಾಗಿ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ್‌ ಅವರು ಖಂಡಿಸಿದ್ದಾರೆ. ಮತ್ತೊಮ್ಮೆ ದರ ಏರಿಕೆ ಮಾಡಲು ಹೊರಟಿದ್ದೀರಲ್ಲಾ ಸ್ವಾಮಿ? ಜನಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಬೇಕೆಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 

ಸರ್ಕಾರ ಬಂದ ಎರಡೂವರೆ ವರ್ಷಗಳಿಂದ ಕ್ರಮೇಣವಾಗಿ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಹೊರಿಸಿದ್ದಾಗಿದೆ. ಈಗ ಮತ್ತೆ ಹೆಚ್ಚಳ  ಮಾಡಲು ಹೊರಟಿದ್ದೀರಲ್ಲ, ಸರ್ಕಾರದ ದುರಾಡಳಿತ, ಅಸಮರ್ಥತೆ, ಭ್ರಷ್ಟಾಚಾರಕ್ಕೆ ಕನ್ನಡಿಗರು ಇನ್ನೆಷ್ಟು ಬೆಲೆ ತೆತ್ತಬೇಕು? ಎಂದು ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ. OnePlus Nord 5 | Snapdragon 8s Gen 3 | Stable 144FPS Gaming | Dual 50MP Flagship Camera | Powered by OnePlus AI | 8GB + 256GB | Dry Ice

ತಮ್ಮ ಎಕ್ಸ್‌ ಖಾತೆಯಲ್ಲಿ, ಈ ಹಿಂದಿನ ಪೆಟ್ರೋಲ್‌ ದರಗಳ ಏರಿಕೆ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದು, ಈ ಜನವಿರೋಧಿ ಸರ್ಕಾರದಿಂದ ಕರ್ನಾಟಕದ ಜನತೆ ಬೇಸತ್ತು ಹೋಗಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕರ್ನಾಟಕವನ್ನು ಉಳಿಸಿ. ಎಂದು ಆಕ್ರೋಶ ತೋರಿದ್ದಾರೆ. ಇದನ್ನೂ ಓದಿ: ದೆಹಲಿ ಸ್ಪೋಟ ಪ್ರಕರಣ: ಭಾರತಕ್ಕೆ ನಮ್ಮ ಸಹಾಯದ ಅಗತ್ಯವಿಲ್ಲ - ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ