Skip to main content
ವಿಡಿಯೋ
1/3
politics

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ - ರಾಜುಕಾಗೆ ರಾಷ್ಟ್ರಪತಿ, ಪ್ರಧಾನಿಗಳಿಗೆ ಪತ್ರ - ಸ್ವಪಕ್ಷದಲ್ಲೇ ಆಗ್ರಹ!

By Shravanthi R
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ - ರಾಜುಕಾಗೆ ರಾಷ್ಟ್ರಪತಿ, ಪ್ರಧಾನಿಗಳಿಗೆ ಪತ್ರ - ಸ್ವಪಕ್ಷದಲ್ಲೇ ಆಗ್ರಹ!

ಕರ್ನಾಟಕದ 15 ಜಿಲ್ಲೆಗಳನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದು ರಾಷ್ಟ್ರಪತಿ, ಪ್ರಧಾನಿಗಳಿಗೆ ಪತ್ರ ಬರೆದಿರುವ ಶಾಸಕ ರಾಜುಕಾಗೆ ಅವರಿಗೆ ಕಾಂಗ್ರೆಸ್‌ ಪಕ್ಷದಲ್ಲೇ ವಿರೋಧ ಕೇಳಿಬರುತ್ತಿದೆ ಎಂದು ಹೇಳಲಾಗಿದೆ.

ಉತ್ತರಕರ್ನಾಟಕ ಭಾಗದ ಅಭಿವೃದ್ದಿ ಹಾಗೂ ಉನ್ನತಿ ವಿಚಾರವಾಗಿ ನಿರ್ಲಕ್ಷ್ಯ ತೋರಲಾಗಿದೆ. ಹೀಗಾಗಿ ಬೀದರ್‌, ಬಳ್ಳಾರಿ, ಕಲಬುರಗಿ, ವಿಜಯಪುರ, ದಾವಣಗೆರೆ ಸೇರಿದಂತೆ 15 ಜಿಲ್ಲೆಗಳನ್ನೊಳಗೊಂಡ ಪ್ರತ್ಯೇಕ ರಾಜ್ಯವಾಗಬೇಕೆಂದು ಕಾಂಗ್ರೆಸ್‌ ಶಾಸಕ ಭರಮಗೌಡ ರಾಜುಕಾಗೆ ತಮ್ಮ ಬೇಡಿಕೆ ವಿಚಾರ ಬಹುವಾಗಿ ಚರ್ಚೆಗೊಳಗಾಗಿದೆ. ಈ ಕುರಿತಾಗಿ ಕಾಂಗ್ರೆಸ್‌ನಲ್ಲೇ ಭಾರೀ ವಿರೋಧ ವ್ಯಕ್ತವಾಗಿದ್ದು, ಪ್ರಮುಖರು ಅಖಂಡ ಕರ್ನಾಟಕಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. 

ಈ ಬಗ್ಗೆ ರಾಜ್ಯ ಹಾಗೂ ಕೇಂದ್ರಕ್ಕೆ ಪತ್ರ ಬರೆದಿರುವ ಕಾಂಗ್ರೆಸ್‌ ಶಾಸಕ ರಾಜುಕಾಗೆ, ಉತ್ತರ ಕರ್ನಾಟಕ ಭಾಗದಲ್ಲಿ ಸಮಗ್ರ ಅಭಿವೃದ್ದಿ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತ್ಯೇಕ ರಾಜ್ಯ ರಚನೆಯಾಗಲಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾಗಿ ಅವರು ರಾಷ್ಟ್ರಪತಿ, ಪ್ರಧಾನಮಂತ್ರಿಗಳು ಹಾಗೂ ಕರ್ನಾಟಕದ ರಾಜ್ಯಪಾಲರಿಗೆ ಪತ್ರ ಮನವಿ ಮಾಡಿದ್ದಾರೆ. iQOO Z10x 5G (Titanium, 8GB RAM, 128GB Storage) | 6500 mAh Large Capacity Battery | Dimensity 7300 Processor | Military-Grade Durability

ಈ ಬಗ್ಗೆ ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್ಲರ ಮಾತಿಗೆ ಸ್ವತಂತ್ರ್ಯವಿದೆ. ಉಮೇಶ್‌ ಕತ್ತಿ ಕೂಡ ಹಲವು ಬಾರಿ ಇಂತಹ ಹೇಳಿಕೆ ಕೊಟ್ಟಿದ್ದರು. ಆದರೆ, ನಮ್ಮ ನಿಲುವು ಅಖಂಡ ಕರ್ನಾಟಕ, ನಾವೆಲ್ಲ ಒಟ್ಟಾಗಿರಬೇಕು. ವೈಯಕ್ತಿಕ ವಿಚಾರದ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲವೆಂದು ಸಚಿರಾದ ಸತೀಶ್‌ ಜಾರಕಿಹೊಳಿ, ರಾಮಲಿಂಗರೆಡ್ಡಿ, ಹಾಗೂ ಶಾಸಕ ಅಶೋಕ್‌ ಪಟ್ಟಣ್‌ ಅವರು ತಮ್ಮ ಬೆಂಬಲ ತೋರಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕದ 4 ರೈಲು ನಿಲ್ದಾಣಗಳಿಗೆ ಸಂತರ ಹೆಸರು: ಸಚಿವ ಎಂ.ಬಿ. ಪಾಟೀಲ್ ರಿಂದ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ಕೋರಿ ಪತ್ರ!