Skip to main content
ವಿಡಿಯೋ
1/3
general

ಅಕ್ರಮ ಹಣ ವರ್ಗಾವಣೆ - ಜೇಪೀ ಇನ್‌ಫ್ರಾಟೆಕ್ ಎಂಡಿ ಮನೋಜ್ ಗೌರ್ ಇಡಿ ಅಧಿಕಾರಿಗಳಿಂದ ಬಂಧನ!

By Shravanthi R
ಅಕ್ರಮ ಹಣ ವರ್ಗಾವಣೆ - ಜೇಪೀ ಇನ್‌ಫ್ರಾಟೆಕ್ ಎಂಡಿ ಮನೋಜ್ ಗೌರ್ ಇಡಿ ಅಧಿಕಾರಿಗಳಿಂದ ಬಂಧನ!

ಬರೋಬ್ಬರಿ 12 ಸಾವಿರ ಕೋಟಿ ರೂಪಾಯಿ ಮನಿ ಲಾಂಡ್ರಿಂಗ್ ಆರೋಪದಡಿಯಲ್ಲಿ ಜೇಪೀ ಇನ್‌ಫ್ರಾಟೆಕ್ ನಿರ್ವಾಹಕ ನಿರ್ದೇಶಕ ಮನೋಜ್ ಗೌರ್‌ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ದೆಹಲಿಯಲ್ಲಿ ವಿವಿಧ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ಮೂಲಕ ಹಣ ವಂಚಿಸಿರುವ ಆರೋಪದ ಮೇಲೆ ಜೇಪೀ ಇನ್‌ಫ್ರಾಟೆಕ್ (Jaypee Infratech) ನ ಎಂಡಿ ಆಗಿರುವ ಮನೋಜ್‌ ಗೌರ್‌ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ. ಒಟ್ಟು 12,000 ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿರುವುದಾಗಿ ತಿಳಿದುಬಂದಿದೆ. 

ರಿಯಲ್‌ ಎಸ್ಟೇಟ್‌ ಕಂಪನಿಯಾದ ಜೇಪೀ ಇನ್‌ಫ್ರಾಟೆಕ್ (Jaypee Infratech), ಮನೆಗಳನ್ನು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮನೆ ಖರೀದಿದಾರರನ್ನು ವಂಚಿಸಿರುವ ಮಾಹಿತಿ ತನಿಖೆಗಳಿಂದ ತಿಳಿದುಬಂದಿದೆ. ಈ ಸಂಬಂಧ ಅವರನ್ನ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಲಾಗಿದೆ. ಹೂಡಿಕೆಯಲ್ಲಿ ತೊಡಗಿಸಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಬೇರೆಡೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿಲಾಗಿದೆ. iQOO Z10 Lite 5G (Titanium Blue, 6GB RAM, 128GB Storage) | 6000 mAh Battery | Dimensity 6300 5G Processor with 433K+* AnTuTu Score | IP64 Rated & Military Grade Shock-Resistance*

ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳನ್ನು ಕೈಗೊಂಡ ಆರಂಭಿಕ ಸಂಸ್ಥೆಗಳಲ್ಲಿ ಈ ಸಂಸ್ಥೆಯು ಒಂದೆಂದು ಹೇಳಲಾಗಿದೆ. ಸಾವಿರಾರು ಅಪಾರ್ಟ್‌ಮೆಂಟ್‌ ಹಾಗೂ ಫ್ಲಾಟ್‌ಗಳನ್ನು ಮಾರಲಾಗಿತ್ತು. ಭರವಸೆ ಕೊಟ್ಟಂತೆ ಪ್ರಾಜೆಕ್ಟ್‌ಗಳು ವಿಳಂಬ ಆಗಿದ್ದವು. ಈ ಹಿಂದೆ, 2017 ರಲ್ಲಿ ಈ ವಿರುದ್ದ ಎಫ್‌ಐಆರ್‌ ಗಳು ದಾಖಲಾಗಿದ್ದವು. ಅಂದಿನಿಂದ 12,000 ಕೋಟಿ ರೂ. ವಂಚಿಸಿದ ಆರೋಪದಡಿಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಐ) ಅಡಿಯಲ್ಲಿ ಅವರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ - ರಾಜುಕಾಗೆ ರಾಷ್ಟ್ರಪತಿ, ಪ್ರಧಾನಿಗಳಿಗೆ ಪತ್ರ - ಸ್ವಪಕ್ಷದಲ್ಲೇ ಆಗ್ರಹ!