Skip to main content
ವಿಡಿಯೋ
1/3
general

ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌; ನಮಗೆ ಸಿಕ್ಕ ನ್ಯಾಯವೆಂದ ಡಿಸಿಎಂ ಡಿಕೆಶಿ!

By Shravanthi R
ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌; ನಮಗೆ ಸಿಕ್ಕ ನ್ಯಾಯವೆಂದ ಡಿಸಿಎಂ ಡಿಕೆಶಿ!

ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿ (ಡಿಪಿಆರ್‌) ವಿರೋಧಿಸಿ ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಈ ಕುರಿತಾಗಿ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಇದು ತಮಿಳುನಾಡಿಗೆ ಹಿನ್ನಡೆಯಲ್ಲ. ನಮಗೆ ದೊರೆತ ನ್ಯಾಯವೆಂದು ಹೇಳಿದ್ದಾರೆ.

ಸತತ ಏಳು ವರ್ಷಗಳಿಂದ ಹಾಗೂ ಐತಿಹಾಸಿಕ ಕಾವೇರಿ ಜಲವಿವಾದವಿರುವ ಪ್ರಕರಣಕ್ಕೆ ಇಂದು ಮಹತ್ವದ ತಿರುವು ಸಿಕ್ಕಿದೆ. ಕಾವೇರಿ ನೀರು ಹಂಚಿಕೆಗೆ ಅಡ್ಡಗಾಲಾಗಿರುವ ಕರ್ನಾಟಕದ ಮೇಕೆದಾಟು ಯೋಜನೆಗೆ ಹಲವು ಆಕ್ಷೇಪಣೆಗಳು ಕೇಳಿಬಂದವು. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರು ಹಂಚಿಕೆ ಭಾಗವಾಗಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿತು. 

ಇದಲ್ಲದೇ, ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಬಿ. ಆರ್‌ ಗವಾಯಿ, ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಹಾಗೂ ನ್ಯಾಯಮೂರ್ತಿಗಳಾದ ಎನ್‌.ವಿ ಅಂಜಾರಿಯಾ ಅವರಿದ್ದ ಪೀಠವು ವಜಾಗೊಳಿಸಿತು. 

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್‌ ಅವರ ನೇತೃತ್ವದ ಪೀಠವು, ತಮಿಳುನಾಡಿನ ಅರ್ಜಿಯನ್ನು ತಪ್ಪಾಗಿ ಗ್ರಹಿಸಲಾಗಿದೆ. ರಾಜ್ಯವು ಆದೇಶವನ್ನು ಮೇಲ್ವಿಚಾರಣೆ ಮಾಡಲು ಅಧಿಕಾರ ಹೊಂದಿರುವ ತಜ್ಞರ ಸಮಿತಿಯನ್ನು ಸಂಪರ್ಕಿಸಬೇಕಾಗಿತ್ತು ಎಂದು ಹೇಳಿತು. 

ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರ ಸಮಿತಿ ರಚಿಸುವುದು ಉತ್ತಮ ಎಂದು ಒತ್ತಿ ಹೇಳಿತು. ನ್ಯಾಯಾಂಗದಿಂದ ಅನುಮೋದನೆಗಳು ಬರಬೇಕಿರುವುದಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ದಿಂದ ಬರಬೇಕು ಎಂದಿತು. ಯಾವುದೇ ಸಮಸ್ಯೆಗಳನ್ನು ಕೇಂದ್ರ ಜಲ ಆಯೋಗದ ಮುಂದೆ ಎತ್ತಬಹುದು, ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತು.

ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿರುವ ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಲು ಒಂದು ವೇಳೆ ವಿಫಲವಾದಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಗಾಗುವ ಅಪಾಯವಿದೆ ಎಂದು ತಿಳಿಸಿದೆ. ಇದೇ ವೇಳೆ ನದಿ ತೀರದ ವಿವಾದಗಳು ಮುಂದುವರೆಯುತ್ತಲೇ ಇವೆ ನಾವು ಇಲ್ಲಿರುವುದಿಲ್ಲ. ನದಿ ದೀರ್ಘವಾಗಿದ್ದರೆ, ವಿವಾದಗಳು ದೀರ್ಘಕಾಲಿಕ ಎಂದು ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ಕೇಳಿಬಂದಿರುವ ಮಾತುಗಳಾಗಿದೆ. Lava Bold N1 5G (Champagne Gold, 4GB RAM, 64GB Storage) |Bigger 6.75" HD+ Notch Display | Octacore 5G Processor | 13 MP AI Camera |5000 mAh Battery| IP54 Rated Dust & Water Splash Proof

ಡಿಕೆಶಿ ಪ್ರತಿಕ್ರಿಯೆ -

ವಿಧಾನಸೌಧದ ಆವರಣದ ಬಳಿ ಮಾಧ್ಯಮಗೊಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು, ಸಂಪೂರ್ಣ ಮಾಹಿತಿ ಸಿಕ್ಕ ನಂತರ ವಿವರವಾಗಿ ಮಾತನಾಡುತ್ತೇನೆ. ಇದು ʻನಮ್ಮ ನೀರು ನಮ್ಮ ಹಕ್ಕು ಯೋಜನೆʼ. ನಮಗೆ ನ್ಯಾಯಪೀಠದಿಂದ ನ್ಯಾಯ ಸಿಕ್ಕಂತಾಗಿದೆ. ರಾಜ್ಯದ ಜನರ ಕಷ್ಟಕ್ಕೆ, ಪ್ರಾರ್ಥನೆಗೆ ನ್ಯಾಯ ಸಿಕ್ಕಂತಾಗಿದೆ. ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚೇ ಲಾಭವಾಗಲಿದೆ. ಎಂದಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ - ಜೇಪೀ ಇನ್‌ಫ್ರಾಟೆಕ್ ಎಂಡಿ ಮನೋಜ್ ಗೌರ್ ಇಡಿ ಅಧಿಕಾರಿಗಳಿಂದ ಬಂಧನ!