ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಹಾಗೂ ಆದಾಯ ನೀಡುವ ಉದ್ದೇಶದಿಂದ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ರೈತ ಉದ್ಯಮಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಬಾರಿ, ನಾಲ್ಕು ದಿನಗಳವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ನವೆಂಬರ್ 13 ರಿಂದ 16 ರವರೆಗೆ ಕೃಷಿ ಮೇಳ ಮೇಳೈಸಲಿದೆ. ಈ ಸಂದರ್ಭದಲ್ಲಿ ಕೃಷಿ ಉದ್ದಿಮೆಯನ್ನು ನಂಬಿರುವ ರೈತರಿಗೆ ಹಾಗೂ ರೈತ ಉದ್ಯಮಿಗಳಿಗೆ ಸಮಗ್ರ ಬೇಸಾಯದ ಮಾರ್ಗಸೂಚಿ ಹಾಗೂ ಅವರ ಬಲವರ್ಧನೆಗೆ ನಾಂದಿಯಾಗಿ ಈ ಕಾರ್ಯಕ್ರಮ ನಡೆಸಲಾಗಿದೆ. ವಿಜ್ಞಾನ ಹಾಗೂ ಕೃಷಿಯ ವಿವಿಧ ವಲಯಗಳಲ್ಲಿ ಹೆಚ್ಚಾಗಿ ಕೃಷಿ