Skip to main content
ವಿಡಿಯೋ
1/3
general

ಮಾನವ - ಪ್ರಾಣಿ ಸಂಘರ್ಷ: ನೈಸರ್ಗಿಕ ವಿಕೋಪವೆಂದು ಪರಿಗಣಿಸಿ - ಸಚಿವ ಈಶ್ವರ್‌ ಖಂಡ್ರೆ ಸರ್ಕಾರಕ್ಕೆ ಒತ್ತಾಯ

By Shravanthi R
ಮಾನವ - ಪ್ರಾಣಿ ಸಂಘರ್ಷ: ನೈಸರ್ಗಿಕ ವಿಕೋಪವೆಂದು ಪರಿಗಣಿಸಿ - ಸಚಿವ ಈಶ್ವರ್‌ ಖಂಡ್ರೆ ಸರ್ಕಾರಕ್ಕೆ ಒತ್ತಾಯ

ಕೇರಳ ಸರ್ಕಾರವು ಘೋಷಿಸಿದಂತೆ, ಮಾನವ - ಪ್ರಾಣಿ ಸಂಘರ್ಷವನ್ನು ನೈಸರ್ಗಿಕ ವಿಕೋಪವೆಂದು ಘೋಷಣೆ ಮಾಡಿ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರು: ಗುರುವಾರ, ಮುಖ್ಯಮಂತ್ರಿಗಳೊಟ್ಟಿಗೆ ನಡೆಸಿದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರು, ಮಾನವ -  ಪ್ರಾಣಿ ಸಂಘರ್ಷ ಕುರಿತ ವಿಚಾರವನ್ನು ಪ್ರಸ್ತಾಪಿಸಿದರು. ಈ ಕುರಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇರಳ ಸರ್ಕಾರದಂತೆ, ರಾಜ್ಯದಲ್ಲೂ ಮಾನವ - ಪ್ರಾಣಿ ಸಂಘರ್ಷವನ್ನು ನೈಸರ್ಗಿಕ ವಿಕೋಪವೆಂದು ಘೋಷಿಸಲು ಸೂಚಿಸಿದರು. 

ಮಾನವ - ಪ್ರಾಣಿ ಸಂಘರ್ಷ ಪ್ರಮಾಣ ಹೆಚ್ಚಾದ ಕಾರಣ, ಕೇರಳ ಸರ್ಕಾರವು, ಇದನ್ನೂ ನೈಸರ್ಗಿಕ ವಿಕೋಪವೆಂದು ಘೋಷಿಸಿತ್ತು. ಇಂತಹ ಘಟನೆಗಳು ಕ್ರಮೇಣ ಏರಿಕೆ ಕಂಡಿರುವ ಹಿನ್ನಲೆಯಲ್ಲಿ; ಸಂಘರ್ಷವನ್ನು ತಗ್ಗಿಸಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ರಚನೆಗೆ ನಿರ್ದೇಶನವನ್ನು ನೀಡುವಂತೆ ಮುಖ್ಯಮಂತ್ರಿಗಳಿಗೆ ಸಚಿವರು ಮನವಿ ತಿಳಿಸಿದರು. OnePlus Nord CE4 Lite 5G (Super Silver, 8GB RAM, 128GB Storage) | Lifetime Display Warranty | 5500 mAh Battery, 80W SUPERVOOC and Reverse Charging | 50MP Camera with OIS | 120Hz AMOLED Display

ವರ್ಷದಿಂದ ವರ್ಷಕ್ಕೆ ಈ ಕುರಿತ ಘಟನೆಗಳೂ ಹೆಚ್ಚುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅರಣ್ಯ ಇಲಾಖೆಯಲ್ಲಿ ಸಂಘರ್ಷದ ಪ್ರಮಾದ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಸಿಬ್ಬಂದಿ ಕೊರತೆ ಪರಿಹರಿಸಲು ರಕ್ಷಣಾ ಸಿಬ್ಬಂದಿ ನೇಮಕದ ಕುರಿತಾಗಿಯೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಂಘರ್ಷಗಳನ್ನು ತಪ್ಪಿಸಲು ಎಂಟು ಅಂಶಗಳ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದನ್ನೂ ಓದಿ: 4 ದಿನಗಳ ಕೃಷಿ ಮೇಳಕ್ಕೆ ಚಾಲನೆ - ಕೃಷಿ ಸಬಲೀಕರಣದ ಗುರಿ - ಪ್ರಗತಿಪರ ರೈತರಿಗೆ ರಾಜ್ಯಮಟ್ಟದ ಗೌರವ