ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ನಟ ಅವರು ತಮ್ಮ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಾಸ್ಯಭರಿತ ಮಾತುಗಳಿಂದ ಮನೆಯವರಿಗೆ ಹಾಗೂ ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮೂರನೇ ವಾರದಲ್ಲಿ ಕಿಚ್ಚನ ಚಪ್ಪಾಳೆ ಪಡೆದು ಪ್ರಶಂಸೆಗೊಳಗಾಗಿದ್ದ ಗಿಲ್ಲಿ, ಅಂದಿನಿಂದ ಅದೇ ವಿಷಯಕ್ಕೆ ಅಂಟಿಕೊಂಡಿರುವುದು ಬೇಸರದ ಸಂಗತಿ ಎಂದು ಅಶ್ವಿನಿ ಗೌಡ ಪ್ರಶ್ನಿಸಿದ್ದಾರೆ.
ಮೂರನೇ ವಾರದಲ್ಲಿ ಅಶ್ವಿನಿ, ಜಾನ್ವಿ ಸೇರಿದಂತೆ ಹಲವರು ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದಾಗ, ಅಕಾರಣವಾಗಿ ರಕ್ಷಿತಾ ಹಿಂಸೆ ಅನುಭವಿಸಬೇಕಾಯಿತು. ಇಂತಹ ಸಂದರ್ಭದಲ್ಲಿ ರಕ್ಷಿತಾ ಪರವಾಗಿ ನಿಂತವರು ಗಿಲ್ಲಿ ನಟ ಮಾತ್ರ. ಅವರ ಈ ಧೈರ್ಯದ ನಡೆಗೆ ಕಿಚ್ಚನ ಚಪ್ಪಾಳೆ ಸಂದಿತ್ತು.
ಆದರೆ, ಗಿಲ್ಲಿ ಇಂದಿಗೂ ಅದೇ ಪ್ರಶಸ್ತಿಯ ಬಗ್ಗೆ ಮಾತನಾಡುತ್ತಿರುವುದು ಅನೇಕರ ಗಮನಕ್ಕೆ ಬಂದಿದೆ. 'ನೀವು ಈವರೆಗೆ ಸಾಧಿಸಿದ್ದು ಏನು?' ಎಂದು ಯಾರಾದರೂ ಕೇಳಿದರೆ, ಅವರ ಕೈ ನೇರವಾಗಿ ಕಿಚ್ಚನ ಚಪ್ಪಾಳೆ ಪಡೆದ ಬೋರ್ಡ್ ಕಡೆಗೆ ಸಾಗುತ್ತದೆ. ಅದಾದ ನಂತರ ಅವರು ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಮಾತ್ರ ಅವರ ಬಳಿ ಉತ್ತರವಿಲ್ಲ.Arayna Women's Cotton Printed Floral Straight Kurta with Palazzo Pants and Dupatta
ಗಿಲ್ಲಿ ನಟ ಮನರಂಜನೆ ನೀಡುವಲ್ಲಿ ನಿಷ್ಣಾತರು. ಆದರೆ, ಟಾಸ್ಕ್‌ಗಳ ವಿಷಯದಲ್ಲಿ ಅವರು ಎಂದಿಗೂ ಗಂಭೀರವಾಗಿ ಪಾಲ್ಗೊಳ್ಳದಿರುವುದು ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ದಿನವಿಡೀ ಮಾತುಗಳಲ್ಲಿ ಮುಳುಗಿರುವ ಗಿಲ್ಲಿ, ಟಾಸ್ಕ್ ವೇಳೆ ಕೂಡ ಏನಾದರೂ ತಮಾಷೆ ಮಾಡಲು ಹೋಗಿ ವಿವಾದ ಸೃಷ್ಟಿಸುತ್ತಾರೆ. ಈ ವರ್ತನೆ ಅನೇಕರಿಗೆ ಇಷ್ಟವಾಗಿಲ್ಲ.
ಅಶ್ವಿನಿ ಗೌಡ ಇದೇ ವಿಷಯಕ್ಕೆ ಗಿಲ್ಲಿ ನಟನಿಗೆ ಪಾಠ ಹೇಳಿದ್ದರು. ಸುದೀಪ್ ಅವರೇ ಈ ವಿಷಯದಲ್ಲಿ ಗಿಲ್ಲಿಗೆ ಬುದ್ಧಿವಾದ ಹೇಳಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 14 ರಂದು, ಗಿಲ್ಲಿ ನಟನ ಅಂತಹ ನಡೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ʻಮಂದಾಕಿನಿʼಯಾಗಿ ಕಮ್‌ಬ್ಯಾಕ್ ಮಾಡ್ತಿದ್ದಾರೆ ದೇಸಿ ಬ್ಯೂಟಿ ಪ್ರಿಯಾಂಕಾ ಚೋಪ್ರಾ!
ಅಶ್ವಿನಿ ಗೌಡ ಅವರು ಗಿಲ್ಲಿ ನಟನನ್ನು ಪ್ರಶ್ನಿಸುತ್ತಾ, "ರಘು ಅವರು ಮೂರನೇ ವಾರಕ್ಕೆ ಬಂದು ಕ್ಯಾಪ್ಟನ್ ಆದರು, ಪ್ರಿನ್ಸಿಪಾಲ್ ಆದರು. ನೀನೇನು ಮಾಡಿದ್ದೀಯಾ ಹೇಳು?" ಎಂದು ಕೇಳಿದರು. ಆಗ ಗಿಲ್ಲಿ ಮತ್ತೆ ಕಿಚ್ಚನ ಚಪ್ಪಾಳೆ ಬೋರ್ಡ್ ಕಡೆಗೆ ಕೈ ತೋರಿಸಿದರು.
"ಅದನ್ನು ಬಿಟ್ಟು ಇನ್ನೇನು ಮಾಡಿದ್ದೀಯಾ ಹೇಳು? ಕ್ಯಾಪ್ಟನ್ಸಿ ರೇಸ್‌ಗೆ ಒಮ್ಮೆಯಾದರೂ ಹೋಗಿದ್ದೀಯಾ? ಕ್ಯಾಪ್ಟನ್ ಕೈ ಹಿಡಿದುಕೊಂಡು ವೈಸ್ ಕ್ಯಾಪ್ಟನ್ ಆಗೋದು" ಎಂದು ಅಶ್ವಿನಿ ಗೌಡ ಸ್ಪಷ್ಟವಾಗಿ ನುಡಿದರು. ಈ ಮಾತು ಅನೇಕರಿಗೆ ಸತ್ಯವೆನಿಸಿದೆ.
"ನಾನು ವೈಸ್ ಕ್ಯಾಪ್ಟನ್" ಎಂದು ಹೇಳುವುದು, ಕ್ಯಾಪ್ಟನ್‌ಗೆ ಬೆಂಬಲ ನೀಡಿ ಅಧಿಕಾರ ಹಂಚಿಕೊಳ್ಳುವ ಬದಲು, ಬಕೆಟ್ ಹಿಡಿಯುವಂತೆ ಭಾಸವಾಗುತ್ತದೆ ಎಂದು ಅಶ್ವಿನಿ ಟೀಕಿಸಿದ್ದಾರೆ.