ಚೆನ್ನೈ- ದಕ್ಷಿಣ ಭಾರತದ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಚಿತ್ರ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ 2 ತಂಡಕ್ಕೆ ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಸರ್ಜಾ ಸೇರ್ಪಡೆಯಾಗಿದ್ದಾರೆ. ಈ ಬ್ಲಾಕ್‌ಬಸ್ಟರ್ ಸೀಕ್ವೆಲ್ ಮೂಲಕ ಮೇಘನಾ ಅವರು ಬರೋಬ್ಬರಿ 13 ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ ಮತ್ತೆ ಕಾಲಿಡುತ್ತಿದ್ದು ಇದು ಕೋಲಿವುಡ್‌ನಲ್ಲಿ ದೊಡ್ಡ ಸುದ್ದಿಯಾಗಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಮೇಘನಾ ರಾಜ್ ಅವರು ಈಗಾಗಲೇ ಸೆಟ್‌ಗೆ ಹಾಜರಾಗಿ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಮುಖ ಪಾತ್ರದಲ್ಲಿ ಮೇಘನಾ ರಾಜ್
ಚಿತ್ರತಂಡವು ಮೇಘನಾ ಅವರ ಪಾತ್ರದ ಕುರಿತು ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲವಾದರೂ ಅವರು ಸಿನಿಮಾದ ಕಥಾಹಂದರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಅವರ ಪಾತ್ರವು ಕಥೆಗೆ ನಿರ್ಣಾಯಕ ತಿರುವು ನೀಡುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ. ಮೇಘನಾ ರಾಜ್ ಅವರು ಕೊನೆಯ ಬಾರಿಗೆ ತಮಿಳಿನಲ್ಲಿ 2012ರ ನಂದ ನಂದಿತ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಮಿನೇಟ್‌ಗೆ ಜಗ್ಗದೇ ಸವಾಲಿಗೂ ಸೈ ಎಂದ ರಘು...ಟಾಸ್ಕ್‌ಗಳಲ್ಲಿ ಗೆದ್ದು ಮತ್ತೆ ಕ್ಯಾಪ್ಟನ್!
ಈಗ ರಜನಿಕಾಂತ್ ಅವರಂತಹ ದೊಡ್ಡ ತಾರೆಯೊಂದಿಗೆ ಈ ಬೃಹತ್ ಪ್ರಾಜೆಕ್ಟ್‌ನಲ್ಲಿ ನಟಿಸುವುದು ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ಮರುಪ್ರವೇಶವೆಂದು ಪರಿಗಣಿಸಲಾಗಿದೆ. ಕನ್ನಡದಲ್ಲಿ ತತ್ಸಮ ತದ್ಭವ ಮೂಲಕ ಯಶಸ್ವಿ ಕಂಬ್ಯಾಕ್ ಮಾಡಿರುವ ಮೇಘನಾ, ಇರುವುದೆಲ್ಲವ ಬಿಟ್ಟು ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸ್ತುತ ಅವರು ಕನ್ನಡದಲ್ಲಿ ಅಮರ್ತ ಮತ್ತು ಮಲಯಾಳಂನಲ್ಲಿ ಸುರೇಶ್ ಗೋಪಿ ಅವರೊಂದಿಗೆ ಒಟ್ಟಕೊಂಬನ್ ಚಿತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. INHEAVEN Bridal Princess Girl Tiara and Rhinestone Crown Headband Hair Accessories for Women Wedding Ceremony Party (Multicolor)
ಜೈಲರ್ 2 ತಾರಾಬಳಗ ಮತ್ತಷ್ಟು ಬಲ
ಜೈಲರ್ 2 ಚಿತ್ರವು ಮೊದಲ ಭಾಗದಲ್ಲಿದ್ದ ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ, ಶಿವರಾಜ್‌ಕುಮಾರ್ ಮತ್ತು ಮೋಹನ್‌ಲಾಲ್ ಅವರಂತಹ ದಿಗ್ಗಜರನ್ನು ಒಳಗೊಂಡಿದ್ದು ಇದೀಗ ಹೊಸ ಸೇರ್ಪಡೆಯಾಗಿ ಎಸ್. ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಮತ್ತು ಸಂತಾನಂ ಕೂಡ ಇರುವುದು ಇದರ ಆಕರ್ಷಣೆಯನ್ನು ಹೆಚ್ಚಿಸಿದೆ. ಈ ಸ್ಟಾರ್‌ಕಾಸ್ಟ್‌ನೊಂದಿಗೆ ಮೇಘನಾ ರಾಜ್ ಸೇರ್ಪಡೆಯಿಂದ ಚಿತ್ರದ ಬಗ್ಗೆ ನಿರೀಕ್ಷೆಗಳು ಗಗನಕ್ಕೇರಿವೆ.
ಸನ್ ಪಿಕ್ಚರ್ಸ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ಈ ಚಿತ್ರವು 2026ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮೇಘನಾ ರಾಜ್ ಅವರ ಈ ಕೋಲಿವುಡ್ ಕಂಬ್ಯಾಕ್ ಅವರಿಗೆ ಪ್ಯಾನ್-ಇಂಡಿಯನ್ ನಟಿಯಾಗಿ ಮತ್ತಷ್ಟು ಖ್ಯಾತಿ ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವಿಡಿಯೋ ಜೈಲರ್ 2 ಸಿನಿಮಾದ ಪ್ರಕಟಣೆ ಟೀಸರ್ ಆಗಿದೆ.ಇದು ಮೇಘನಾ ರಾಜ್ ಸೇರ್ಪಡೆಯಾಗಿರುವ ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ.