Skip to main content
ವಿಡಿಯೋ
1/3
politics

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ - BJP - JDS ಕಿಡಿ!

By Shravanthi R
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ - BJP - JDS ಕಿಡಿ!

ರಾಜ್ಯದಲ್ಲಿ ಭುಗಿಲೆದ್ದ ಕಬ್ಬುಬೆಳೆಗಾರರ ಬೆಲೆ ನಿಗದಿ ಕುರಿತ ಬೆಳೆವಣಿಗೆಗೆ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಸಿಡಿದೆದ್ದಿವೆ. ಈ ಬಗ್ಗೆ ಸರ್ಕಾರದ ನಡೆಯನ್ನು ದೂಡಿವೆ ಎನ್ನಲಾಗಿದೆ.

ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕ ಭಾಗದ ಕಬ್ಬುಬೆಳೆಗಾರರ ಆಕ್ರೋಶಕ್ಕೆ ಗುರಿಯಾಗಿದ್ದ ಕಬ್ಬು ಬೆಳೆದರ ನಿಗದಿ ಸುದ್ದಿಗೆ ಸಂಬಂಧಿಸಿದಂತೆ, ಆಡಳಿತಾರೂಢಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ಕಿಡಿಕಾರಿವೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದನೆ ನೀಡಿರುವಲ್ಲಿ ರಾಜ್ಯ ಸರ್ಕಾರವು ವೈಫಲ್ಯ ಹೊಂದಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ವಿರೋಧ ವ್ಯಕ್ತಪಡಿಸಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್‌. ಡಿ ಕುಮಾರಸ್ವಾಮಿ ಅವರು, ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಮುಧೋಳದ ಸಕ್ಕರೆ ಕಾರ್ಖಾನೆಯ ಬಳಿ ಕಬ್ಬುತುಂಬಿದ್ದ ಟ್ರಾಕ್ಟರ್‌ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನನಗೆ ತೀವ್ರ ದಿಗ್ಭ್ರಮೆಯುಂಟು ಮಾಡಿದೆ. ಇದು ಕಾಂಗ್ರೆಸ್‌ ಸರ್ಕಾರದ ವೈಫಲ್ಯಕ್ಕೆ ಸ್ಟಷ್ಟ ಉದಾಹರಣೆಯಾಗಿದೆ. 

ಬೆಳಗಾವಿ, ವಿಜಯಪುರ, ಸೇರಿದಂತೆ ಇತರ ಪ್ರಮುಖ ಪ್ರದೇಶಗಳಲ್ಲಿ ಹೋರಾಟ ನಡೆಸಿದ ಸಂದರ್ಭಕ್ಕೆ ಹೇಗೊ ಸಮಯ ಸಾಧಿಸಿಕೊಂಡ ಸರ್ಕಾರವು, ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಘನಘೋರ ವೈಫಲ್ಯ ತೋರಿದೆ. ಅದರ ಪರಿಣಾಮವಾಗೇ ರೈತರು ತಾಳ್ಮೆ ಕೆಟ್ಟು ಅಹಿತಕರ ಘಟನೆಗಳು ಸಂಭವಿಸಿದೆ ಎಂದು ಟೀಕೆ ಮಾಡಿದರು.  iPhone 16 Plus 128 GB: 5G Mobile Phone with Camera Control, A18 Chip and a Big Boost in Battery Life. Works with AirPods; Black

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಕಬ್ಬು ಬೆಳೆವ ರೈತರು ಎದುರಿಸುತ್ತಿರುವ ಬಿಕ್ಕಟ್ಟಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. ರೈತರ ಬೇಡಿಕೆಗಳು ನ್ಯಾಯಯುತವಾಗಿವೆ. ಮುಖ್ಯಮಂತ್ರಿಗಳು ತಕ್ಷಣ ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳಿಗೆ ತಡಮಾಡದೇ ಸಹಕರಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಾನವ - ಪ್ರಾಣಿ ಸಂಘರ್ಷ: ನೈಸರ್ಗಿಕ ವಿಕೋಪವೆಂದು ಪರಿಗಣಿಸಿ - ಸಚಿವ ಈಶ್ವರ್‌ ಖಂಡ್ರೆ ಸರ್ಕಾರಕ್ಕೆ ಒತ್ತಾಯ