Skip to main content
ವಿಡಿಯೋ
1/3
business

ಬ್ಯಾಂಕುಗಳ ವಿಲೀನಕ್ಕೆ SBI ಬೆಂಬಲ: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮತ್ತೊಂದು ಅಲೆ!?

By Shravanthi R
 ಬ್ಯಾಂಕುಗಳ ವಿಲೀನಕ್ಕೆ SBI ಬೆಂಬಲ: ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮತ್ತೊಂದು ಅಲೆ!?

ಬ್ಯಾಂಕ್‌ ವಿಲೀನಕ್ಕೆ ಮತ್ತಷ್ಟು ಬೆಂಬಲ ಸೂಚಿಸಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ). ಅತಿವೇಗವಾಗಿ ಸಾಗುತ್ತಿರುವ ವಿಶ್ವದ ಆರ್ಥಿಕತೆಯಲ್ಲಿ ಬೆಳವಣಿಗೆ ಸಾಧಿಸಲು ಈ ನಿಲುವು ಮಹತ್ವದ್ದಾಗಿದೆ ಎನ್ನಲಾಗಿದೆ.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮಹತ್ವದ ಬ್ಯಾಂಕ್‌ ಎನಿಸಿಕೊಂಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಮತ್ತೊಂದು ಸುತ್ತಿನ ಮರ್ಜರ್‌ಗೆ ಬೆಂಬಲ ಸೂಚಿಸಿದೆ. ಇನ್ನಷ್ಟು ಸುಧಾರಿತ ಹಾಗೂ ಸಣ್ಣ ಮತ್ತು ಸಬ್‌- ಸ್ಕೇಲ್‌ ಬ್ಯಾಂಕ್‌ಗಳು ಕಾಪಾಡಿಕೊಳ್ಳುವಿಕೆಗೆ ಮತ್ತೊಂದು ಹೆಜ್ಜೆಯಾಗಿದೆ ಎನ್ನಲಾಗಿದೆ. ಇದಕ್ಕಾಗಿ ಸಾರ್ವಜನಿಕ ಸ್ವಾಮ್ಯದ ಸಾಲ ನೀಡುವ ಸಂಸ್ಥೆಗಳ (PSBs) ಮರ್ಜರ್‌ಗಳು ದೇಶದ ಆರ್ಥಿಕತೆಗೆ ಇಂಬು ನೀಡಲಿದೆ ಎಂದು ಹೇಳಲಾಗಿದೆ. 

2047 ರ ಆರ್ಥಿಕತೆಗೆ ಗುರಿಯಾಗಿ, ಮುಂದುವರೆದ ದೊಡ್ಡ ಪ್ರಮಾಣದ ಕೈಗಾರಿಕಾ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಧನಸಹಾಯ ನೀಡಲು, ಬ್ಯಾಂಕ್‌ಗಳು ಬಲಿಷ್ಠವಾಗುವುದು ಅವಶ್ಯಕ. ಅಂಕಿ - ಅಂಶಗಳ ವರದಿಯ ಪ್ರಕಾರವಾಗಿ, ಜಿಡಿಪಿಯ ಶೇ56 ರಷ್ಟಿರುವ ಬ್ಯಾಂಕ್‌ ಹಣಕಾಸು ಪ್ರಮಾಣವನ್ನು 130% ಕ್ಕೇರಿಸುವ ಉದ್ದೇಶದಿಂದ ಈ ಭರವಸೆಯು ಕೂಡಿದೆ ಎನ್ನಲಾಗಿದೆ.  Vivo V60 5G (Auspicious Gold, 8GB RAM, 256GB Storage) with No Cost EMI/Additional Exchange Offers

ಮುಂಬೈ ಮೂಲಕ ಎಸ್‌ಬಿಐ, ಭಾರತದ ರೂ. 194 ಟ್ರಿಲಿಯನ್ ($2.18 ಟ್ರಿಲಿಯನ್) ಸಾಲ ಮಾರುಕಟ್ಟೆಯ ಕಾಲು ಭಾಗದಷ್ಟು ನಿಯಂತ್ರಣ ಹೊಂದಿದೆ ಎನ್ನಲಾಗಿದೆ. ಈ ಬಗ್ಗೆ, ಎಸ್‌ಬಿಐನ ಮುಖ್ಯಸ್ಥರಾದ ಶ್ರೀನಿವಾಸುಲು ಶೆಟ್ಟಿ ಅವರು, “ಬ್ಯಾಂಕಿಗ್‌ಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಮತ್ತಷ್ಟು ತರ್ಕಬದ್ದಗೊಳಿಸುವುದು ಹಾಗೂ ಅರ್ಥಪೂರ್ಣಗೊಳಿಸುವಲ್ಲಿ ಮತ್ತೊಂದು ಸುತ್ತು ವಿಲೀನಗೊಳ್ಳುವ ಆಲೋಚನೆಯು ಕೆಟ್ಟದ್ದೇನಲ್ಲ, ಎಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಡಲೆಕಾಯಿ ಪರಿಷೆ: ಇಂದು ಚಾಲನೆ..!